ಸಾರಾಂಶ
ಕನ್ನಡಪ್ರಭ ವಾರ್ತೆ ಬಾಗಲಕೋಟೆ
ಆರೋಗ್ಯಕರ ಸಮಾಜಕ್ಕೆ ಸಿರಿಧಾನ್ಯಗಳ ಮಹತ್ವ ಸಾರುವ ಉದ್ದೇಶದಿಂದ ಸಿರಿಧಾನ್ಯ ಪಾಕ ಸ್ಪರ್ಧೆ ಏರ್ಪಡಿಸಲಾಗಿದೆ. ಸಿರಿಧಾನ್ಯಗಳ ಮಹತ್ವ ಕುರಿತು ಜನರಲ್ಲಿ ಅರಿವು ಮೂಡಿಸಬೇಕು ಎಂದು ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಶೀಧರ ಕುರೇರ ಹೇಳಿದರು.ಜಿಲ್ಲಾ ಕೃಷಿ ತರಬೇತಿ ಕೇಂದ್ರದಲ್ಲಿ ನಡೆದ ಜಿಲ್ಲಾ ಮಟ್ಟದ ಸಿರಿಧಾನ್ಯ ಪಾಕ ಸ್ಪರ್ಧೆಗೆ ಚಾಲನೆ ನೀಡಿ ಮಾತನಾಡಿದ ಅವರು, ನಿತ್ಯ ಸಿರಿಧಾನ್ಯ ಪದಾರ್ಥಗಳ ಬಳಕೆಯಿಂದ ಉತ್ತಮ ಆರೋಗ್ಯ ಹೊಂದಬಹುದು. ಇಂದಿನ ಅನಿಯಮಿತ ಆಹಾರ ಪದ್ಧತಿಯಿಂದ ಅನಾರೋಗ್ಯ ಹೆಚ್ಚು. ಆದ್ದರಿಂದ ಹೆಚ್ಚೆಚ್ಚು ಸಿರಿಧಾನ್ಯಗಳ ಬಳಕೆ ಮಾಡಬೇಕು. ಸಿರಿಧಾನ್ಯಗಳ ಮೌಲ್ಯವರ್ಧಿತ ಉತ್ಪನ್ನಗಳನ್ನು ತಯಾರಿಸಲು ಹೆಚ್ಚಿನ ಆದ್ಯತೆ ನೀಡಲು ತಿಳಿಸಿದರು.
2023 ಅನ್ನು ಅಂತಾರಾಷ್ಟ್ರೀಯ ಸಿರಿಧಾನ್ಯಗಳ ವರ್ಷವೆಂದು ಆಚರಿಸುತ್ತಿದೆ. ಅಂತಾರಾಷ್ಟ್ರೀಯ ಸಿರಿಧಾನ್ಯ ಮತ್ತು ಸಾವಯವ ಮೇಳ-2024ರ ಅಂಗವಾಗಿ ರಾಜ್ಯಮಟ್ಟದ ಸಿರಿಧಾನ್ಯ ಪಾಕಸ್ಪರ್ಧೆಯ ಪೂರ್ವಭಾವಿಯಾಗಿ ಜಿಲ್ಲಾಮಟ್ಟದ ಸಿರಿಧಾನ್ಯ ಪಾಕಸ್ಪರ್ಧೆ ಏರ್ಪಡಿಸಲಾಗಿದೆ. ಈ ಸ್ಪರ್ಧೆಯಲ್ಲಿ ತಯಾರಿಸಲಾದ ರುಚಿ ರುಚಿಯಾದ ವಿವಿಧ ಬಗೆಯ ಸಿರಿಧಾನ್ಯ ಪಾಕಗಳು ಗಮನ ಸೆಳೆದವು. ಮಹಾದೇವಿ ಶೆಟ್ಟರ ತಯಾರಿಸಿದ ಸಿರಿಧಾನ್ಯದ ಮೈಸೂರ ಪಾಕ್ ಹಾಗೂ ಜಯಶ್ರೀ ತೆಗ್ಗಿ ತಯಾರಿಸಿದ ಮೋಮೋಸ್ ಖಾರದ ತಿನಿಸು ಪ್ರಥಮ ಬಹುಮಾನ ಪಡೆದವು.ಸ್ಪರ್ಧೆಯಲ್ಲಿ ಒಟ್ಟು 46 ಜನ ಪಾಕ ಪ್ರವೀಣೆಯರು ಭಾಗವಹಿಸಿ ಸಿರಿಧಾನ್ಯಗಳಲ್ಲಿ ಸಿಹಿ ಪದಾರ್ಥಗಳಾದ ಸಿರಿಧಾನ್ಯದ ಮೈಸೂರ ಪಾಕ್, ನವಣೆ ಪಾಯಸ, ರಾಗಿ ಉಂಡೆ, ನವಣಕ್ಕಿ ಉಂಡೆ, ರಾಗಿ ಹಲ್ವಾ, ಪಾಯಸ ಹಾಗೂ ಖಾರದ ತಿನಿಸುಗಳಾದ ಸಜ್ಜೆ ಬಿಸಿಬೆಳೆ ಬಾತ್, ಸಜ್ಜೆ ರೊಟ್ಟಿ, ಸಿರಿಧಾನ್ಯ ಮಸಾಲಾ ರೊಟ್ಟಿ, ಸಿರಿಧಾನ್ಯದ ಚಕ್ಕುಲಿ, ಪಲಾವ್, ಸಿರಿಧಾನ್ಯದ ಮೋಮೋಸ್, ಸಾವಿ ಕಿಚಡಿ ಹಾಗೂ ರಾಗಿ ಹಪ್ಪಳ ಅಲ್ಲದೇ ಹತ್ತು ಹಲವು ಖಾದ್ಯಗಳನ್ನು ಪ್ರದರ್ಶಿಸಲಾಯಿತು. ವಿವಿಧ ಬಗೆಯ ಖಾದ್ಯಗಳು ನೋಡುಗರ ಬಾಯಲ್ಲಿ ನೀರೂರಿಸಿದವು.
ಕಾರ್ಯಕ್ರಮದಲ್ಲಿ ಕೃಷಿ ಇಲಾಖೆಯ ಉಪನಿರ್ದೇಶಕ ಎಲ್.ಐ.ರೂಢಗಿ ಸೇರಿದಂತೆ ಕೃಷಿ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಇದ್ದರು. ಪಾಕ ಸ್ಪರ್ಧೆಯ ತೀರ್ಪುಗಾರರಾಗಿ ಬಸವೇಶ್ವರ ಇಂಜಿನೀಯರಿಂಗ್ ಕಾಲೇಜಿನ ಪ್ರಾದ್ಯಾಪಕಿ ಡಾ.ಭಾರತಿ ಮೇಟಿ, ವಿಜಯಪುರ ಕೃಷಿ ಮಹಾವಿದ್ಯಾಲಯದ ಪ್ರಾದ್ಯಾಪಕಿ ಕಾಶಿಬಾಯಿ ಖ್ಯಾದಗಿ, ತೋಟಗಾರಿಕೆ ವಿವಿಯ ಪ್ರಾಧ್ಯಾಪಕಿ ಭುವನೇಶ್ವರಿ ಆಗಮಿಸಿದ್ದರು.---
ಕೋಟ್...ನಿತ್ಯ ಸಿರಿಧಾನ್ಯ ಪದಾರ್ಥಗಳ ಬಳಕೆಯಿಂದ ಉತ್ತಮ ಆರೋಗ್ಯ ಹೊಂದಬಹುದು. ಇಂದಿನ ಅನಿಯಮಿತ ಆಹಾರ ಪದ್ಧತಿಯಿಂದ ಅನಾರೋಗ್ಯ ಹೆಚ್ಚು. ಆದ್ದರಿಂದ ಹೆಚ್ಚುಚ್ಚು ಸಿರಿಧಾನ್ಯಗಳ ಬಳಕೆ ಮಾಡಬೇಕು. ಸಿರಿಧಾನ್ಯಗಳ ಮೌಲ್ಯವರ್ಧಿತ ಉತ್ಪನ್ನಗಳನ್ನು ತಯಾರಿಸಲು ಹೆಚ್ಚಿನ ಆದ್ಯತೆ ನೀಡಲಾಗುವುದು.
- ಶಶಿಧರ ಕುರೇರ, ಜಿಪಂ ಸಿಇಒ---
ಬಾಕ್ಸ್ತರಹೇವಾರಿ ಖಾದ್ಯ
ಸಿರಿಧಾನ್ಯಗಳ ಸಿಹಿ ಹಾಗೂ ಖಾರದ ವಿವಿಧ ಪದಾರ್ಥಗಳಾದ ಮೈಸೂರ ಪಾಕ್, ನವಣೆ ಪಾಯಸ, ರಾಗಿ ಉಂಡೆ, ನವಣಕ್ಕಿ ಉಂಡೆ, ರಾಗಿ ಹಲ್ವಾ, ಪಾಯಸ ಹಾಗೂ ಖಾರದ ತಿನಿಸುಗಳಾದ ಸಜ್ಜೆ ಬಿಸಿಬೆಳೆ ಬಾತ್, ಸಜ್ಜೆ ರೊಟ್ಟಿ, ಸಿರಿಧಾನ್ಯ ಮಸಾಲೆ ರೊಟ್ಟಿ, ಸಿರಿಧಾನ್ಯದ ಚಕ್ಕುಲಿ, ಪಲಾವ್, ಸಿರಿಧಾನ್ಯದ ಮೋಮೋಸ್, ಸಾವಿ ಕಿಚಡಿ ಹಾಗೂ ರಾಗಿ ಹಪ್ಪಳ, ನವಣಕ್ಕಿ ಬೇಸನ್ ಉಂಡೆ, ರಾಗಿ ಬೆಲ್ಲದ ಬರ್ಫಿ, ಸಾವೆ ಕಿಚಡಿ, ನವಣಕ್ಕಿ ಬಿಸಿಬೇಳೆ ಬಾತ್, ನವಣಕ್ಕಿ ಚಕ್ಕುಲಿ, ಸಾವೆಅಕ್ಕಿ ನಿಪ್ಪಟ್ಟು, ಸೇರಿದಂತೆ ಸಿರಿಧಾನ್ಯಗಳಿಂದ ತಯಾರಿಸಿದ ಖಾದ್ಯ ಪ್ರದರ್ಶಿಸಿದರು. ಸಿರಿಧಾನ್ಯ ಖಾದ್ಯ ತಯಾರಿಕೆಗೆ ಬಳಸಿದ ಸಾಮಗ್ರಿಗಳು, ರುಚಿ, ಪ್ರದರ್ಶನ, ತೋರಿಕೆ, ಸುವಾಸನೆ, ರಚನಾ ವಿನ್ಯಾಸ, ಸ್ವಚ್ಛತೆ ಮತ್ತು ನೈರ್ಮಲ್ಯವನ್ನು ತೀರ್ಪುಗಾರರು ಪರಿಶೀಲಿಸಿ ಬಹುಮಾನ ನೀಡಿದರು.-----
(ಫೋಟೋ 20ಬಿಕೆಟಿ4, ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಶಶೀಧರ ಕುರೇರ ಸಿರಿಧಾನ್ಯ ಪಾಕಸ್ಪರ್ಧೆಗೆ ಚಾಲನೆ ನೀಡಿ ಮಾತನಾಡಿದರು) (ಫೋಟೋ 20ಬಿಕೆಟಿ4,(1) ಪಾಕಸ್ಪರ್ಧೆಯ ತೀರ್ಪುಗಾರರಾಗಿದ್ದ ಬಸವೇಶ್ವರ ಇಂಜಿನೀಯರಿಂಗ್ ಕಾಲೇಜಿನ ಪ್ರಾದ್ಯಾಪಕಿ ಡಾ.ಭಾರತಿ ಮೇಟಿ, ವಿಜಯಪುರ ಕೃಷಿ ಮಹಾವಿದ್ಯಾಲಯದ ಪ್ರಾದ್ಯಾಪಕಿ ಕಾಶಿಬಾಯಿ ಖ್ಯಾದಗಿ, ತೋವಿವಿಯ ಪ್ರಾದ್ಯಾಪಕಿ ಭುವನೇಶ್ವ್ದರಿ ಅವರು ಪಾಕಸ್ಪರ್ಧೆಯನ್ನು ವೀಕ್ಷಿಸಿದರು);Resize=(128,128))
;Resize=(128,128))
;Resize=(128,128))
;Resize=(128,128))
;Resize=(128,128))