ಅಕ್ಕಪಕ್ಕದ ನಿವಾಸಿಗಳು ತಕ್ಷಣ ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಕರೆಸಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾದರು. ಗಾಯಾಳುಗಳನ್ನು ಪಟ್ಟಣದ ಭೀಮಸೇನ ಜೋಶಿ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ರೋಣ: ಮನೆಯಲ್ಲಿ ಅಡುಗೆ ಸಿಲಿಂಡರ್ ಗ್ಯಾಸ್ ಸೋರಿಕೆಯಿಂದ ಹೊತ್ತಿಕೊಂಡ ಬೆಂಕಿ ಅವಘಡದಿಂದಾಗಿ ಇಬ್ಬರು ಗಾಯಗೊಂಡು, ಲಕ್ಷಾಂತರ ರು. ಮೌಲ್ಯದ ಸಾಮಗ್ರಿಗಳು ಬೆಂಕಿಗಾಹುತಿಯಾಗಿರುವ ಘಟನೆ ಪಟ್ಟಣದ 2ನೇ ವಾರ್ಡನ ಪಿಂಜಾರ ಓಣಿಯಲ್ಲಿ ಮಂಗಳವಾರ ನಡೆದಿದೆ.
ಸಿಲಿಂಡರನಲ್ಲಿನ ತಾಂತ್ರಿಕ ತೊಂದರೆಯಿಂದಾಗಿ ಗ್ಯಾಸ್ ಸೋರಿಕೆಯಾಗಿದ್ದು, ಇದನ್ನರಿಯದೇ ಮನೆಯವರು ಗ್ಯಾಸ್ ಅಡುಗೆ ಒಲೆ ಹೊತ್ತಿಸಲು ಮುಂದಾಗಿದ್ದ ದಿಢೀರ್ ಬೆಂಕಿ ಗ್ಯಾಸ್ ಸಿಲಿಂಡರನಲ್ಲಿ ಬೆಂಕಿ ಕಾಣಿಸಿಕೊಂಡು ಮನೆಯಲ್ಲಿನ ದವಸ ಧಾನ್ಯ ಚೀಲಗಳಿಗೆ, ಹಾಸಿಗೆ, ಬಟ್ಟೆಗಳು ಸೇರಿದಂತೆ ಮನೆಯಲ್ಲಿ ಅನೇಕ ವಸ್ತುಗಳಿಗೆ ಬೆಂಕಿ ವ್ಯಾಪಿಸಿದೆ.ಈ ವೇಳೆ ಯುವಕ ಇಬ್ರಾಹಿಂಸಾಬ ಓಲಿ ಮತ್ತು ವೃದ್ಧೆ ಇಮಾಂಬಿ ಹೊಂಗಲ ಎಂಬವರಿಗೆ ಗಾಯಗಳಾಗಿವೆ. ಅಕ್ಕಪಕ್ಕದ ನಿವಾಸಿಗಳು ತಕ್ಷಣ ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಕರೆಸಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾದರು. ಗಾಯಾಳುಗಳನ್ನು ಪಟ್ಟಣದ ಭೀಮಸೇನ ಜೋಶಿ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಈ ಕುರಿತು ರೋಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದುಷ್ಕರ್ಮಿಗಳ ಬಂಧಿಸಿ ಕಠಿಣ ಶಿಕ್ಷೆ ನೀಡಿಗದಗ: ನಗರದಲ್ಲಿ ಇತ್ತೀಚೆಗೆ ಸಾಮೂಹಿಕ ಅತ್ಯಾಚಾರ ಎಸಗಿ ಜೀವ ಬೆದರಿಕೆ ಹಾಕಿರುವ ದುಷ್ಕರ್ಮಿಗಳನ್ನು ಬಂಧಿಸಿ ಕಠಿಣ ಶಿಕ್ಷೆ ನೀಡುವಂತೆ ಒತ್ತಾಯಿಸಿ ಕರ್ನಾಟಕ ಸ್ವಾಭಿಮಾನಿ ಮಹಿಳಾ ವೇದಿಕೆ ವತಿಯಿಂದ ನಗರದ ಗಾಂಧಿ ಸರ್ಕಲ್‌ನಲ್ಲಿ ಪ್ರತಿಭಟನೆ ನಡೆಸಿ ತಹಸೀಲ್ದಾರರ ಮೂಲಕ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.ಕರ್ನಾಟಕ ಸ್ವಾಭಿಮಾನಿ ಮಹಿಳಾ ರಾಜ್ಯಾಧ್ಯಕ್ಷೆ ವಿಜಯಲಕ್ಷ್ಮೀ, ಜಿಲ್ಲಾಧ್ಯಕ್ಷೆ ಮಮತಾಜ ಕಟ್ಟಿಮನಿ, ರೇಷ್ಮಾ ಕಲಾದಗಿ, ದಾವಲಬಿ ದೊಡ್ಡಮನಿ, ಪರವೀನ ಹವಾಲ್ದಾರ, ವಜ್ರೇಶ್ವರಿ ಪವಾರ, ಪಾರ್ವತಿ ಪಾಟೀಲ, ನಾಗರತ್ನಾ ಬಣಕಾರ, ಸುಫಿಯಾ ನದಾಫ, ಮಂಜುಳಾ ರೊಟ್ಟಿ, ಬಸೀರಾ ಕುಮನೂರ, ಮುತ್ತವ್ವ, ವಿದ್ಯಾ, ಪ್ರೇಮಾ, ಹೀನಾ, ಹಾಜರಾ, ಕಂಚಿದಾ, ರಜಿಯಾ ಶೇಖ, ಸೀಮಾ, ಶಂಶಾದ ರೋಣ, ಫಾತಿಮಾ ಅಪಸಾನ, ಜುಬೇದಾ, ಲಕ್ಷ್ಮವ್ವ, ಶೇಖಮ್ಮ, ಶಾರದಾ, ನಾಗರತ್ನಾ, ಜಯಲಕ್ಷ್ಮೀ, ಶೋಭಾ, ಮಂಜುಳಾ, ಸಾವಿತ್ರಿಬಾಯಿ, ನಿರ್ಮಲಾ, ರಿಹಾನಾ ಸೇರಿದಂತೆ ಮಹಿಳೆಯರು ಇದ್ದರು.