ಚಿಕ್ಕಮಗಳೂರುಕಾಫಿ ನಾಡು ಚಿಕ್ಕಮಗಳೂರು ಜಿಲ್ಲಾದ್ಯಂತ ವಾಣಿಜ್ಯ ಅಡುಗೆ ಅನಿಲ ಸಿಲಿಂಡರ್ ಪೂರೈಕೆ ಸಮಸ್ಯೆಯಿಂದ ಹೋಟೆಲ್‌ಗಳಲ್ಲಿ ದೋಸೆ, ಪಕೋಡಾ, ಬನ್ಸ್, ಪೂರಿ ಸೇರಿದಂತೆ ಮೊದಲಾದ ತಿನ್ನಿಸುಗಳಿಗೆ ಬ್ರೇಕ್ ಹಾಕಬೇಕಾದ ಸ್ಥಿತಿ ಎದುರಾಗಿದೆ. ಜತೆಗೆ, ಗ್ಯಾಸ್ ಸಿಲಿಂಡರ್‌ಗೆ ಪರ್ಯಾಯವಾಗಿ ಸೌದೆ ಒಲೆ ಬಳಕೆಗೆ ಮುಂದಾಗಿದ್ದಾರೆ.
ವಿಶ್ವನಾಥ ಮಲೇಬೆನ್ನೂರು
ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರುಕಾಫಿ ನಾಡು ಚಿಕ್ಕಮಗಳೂರು ಜಿಲ್ಲಾದ್ಯಂತ ವಾಣಿಜ್ಯ ಅಡುಗೆ ಅನಿಲ ಸಿಲಿಂಡರ್ ಪೂರೈಕೆ ಸಮಸ್ಯೆಯಿಂದ ಹೋಟೆಲ್‌ಗಳಲ್ಲಿ ದೋಸೆ, ಪಕೋಡಾ, ಬನ್ಸ್, ಪೂರಿ ಸೇರಿದಂತೆ ಮೊದಲಾದ ತಿನ್ನಿಸುಗಳಿಗೆ ಬ್ರೇಕ್ ಹಾಕಬೇಕಾದ ಸ್ಥಿತಿ ಎದುರಾಗಿದೆ. ಜತೆಗೆ, ಗ್ಯಾಸ್ ಸಿಲಿಂಡರ್‌ಗೆ ಪರ್ಯಾಯವಾಗಿ ಸೌದೆ ಒಲೆ ಬಳಕೆಗೆ ಮುಂದಾಗಿದ್ದಾರೆ.
ಇರಾನ್- ಇಸ್ರೇಲ್ ಸೇರಿದಂತೆ ಮಧ್ಯಪ್ರಾಚ್ಯದ ರಾಷ್ಟ್ರದಲ್ಲಿ ಯುದ್ಧದ ಸನ್ನಿವೇಶದಿಂದ ವಾಣಿಜ್ಯ ಅಡಿಗೆ ಅನಿಲದ ಸಿಲಿಂಡರ್ ಪೂರೈಕೆಯನ್ನು ವ್ಯತ್ಯಯವಾಗಿದೆ. ಇದರಿಂದ ಹೋಟೆಲ್‌ಗಳಿಗೆ ಪೂರೈಕೆ ಆಗುತ್ತಿದ್ದ ವಾಣಿಜ್ಯ ಬಳಕೆ ಸಿಲಿಂಡ್ ಸಂಪೂರ್ಣವಾಗಿ ನಿಲ್ಲಿಸಲಾಗಿದೆ.ಇದರ ಪರಿಣಾಮವಾಗಿ ಚಿಕ್ಕಮಗಳೂರಿನ ಪ್ರಮುಖ ಹೋಟೆಲ್‌ಗಳಲ್ಲಿ ಈಗಾಗಲೇ ಪಕೋಡಾ, ಬನ್ಸ್, ಪೂರಿ, ದೋಸೆ ಸೇರಿದಂತೆ ಮೊದಲಾದ ತಿನ್ನಿಸುಗಳನ್ನು ನಿಲ್ಲಿಸಲಾಗಿದೆ. ಮತ್ತೆ ಕೆಲವು ಹೋಟೆಲ್‌ಗಳಲ್ಲಿ ಇಡೀ ದಿನ ಪೂರೈಕೆ ಮಾಡುತ್ತಿದ್ದ ದೋಸೆ ಅಂತಹ ತಿನ್ನಿಸುಗಳನ್ನು ಬೆಳಗ್ಗೆ 9 ರಿಂದ 11 ಹಾಗೂ ಸಂಜೆ 4 ರಿಂದ 8 ಅವಧಿಗೆ ಸೀಮಿತಗೊಳಿಸಲಾಗಿದೆ.
ಉಳಿದಂತೆ ರೈಸ್, ಉಪ್ಪಿಟ್ಟಿ ನಂತಹ ಒಂದು ಬಾರಿ ಮಾತ್ರ ಬೇಯಿಸುವ ಪದಾರ್ಥಗಳನ್ನು ಹೆಚ್ಚಾಗಿ ಮಾಡಲಾಗುತ್ತಿದೆ. ಆ ಪದಾರ್ಥಗಳು ಖಾಲಿಯಾದ ತಕ್ಷಣ ಮುಕ್ತಾಯಗೊಳಿಸುವುದಕ್ಕೆ ನಿರ್ಧರಿಸಲಾಗಿದೆ.ಸಮಯ ಸಹ ಕಡಿತ
ಇಡೀ ದಿನ ನಡೆಯುತ್ತಿದ್ದ ಹೋಟೆಲ್‌ಗಳನ್ನು ಸೀಮಿತ ಅವಧಿ ಮಾತ್ರ ನಡೆಸುವುದಕ್ಕೆ ತೀರ್ಮಾನಿಸಲಾಗಿದೆ. ತುರ್ತು ಅಗತ್ಯ ಇರುವ ಗ್ರಾಹಕರಿಗೆ ಮಾತ್ರ ಸೇವೆ ನೀಡುವ ಉದ್ದೇಶದಿಂದ ಬೆಳಗ್ಗೆ ಮಧ್ಯಾಹ್ನದಲ್ಲಿ ಪೂರ್ಣ ಪ್ರಮಾಣದ ಸೇವೆ ನೀಡುವುದು. ಆ ನಂತರ ಬಂದ್ ಮಾಡುವುದಕ್ಕೂ ತೀರ್ಮಾನಿಸಲಾಗಿದೆ ಎಂದು ಹೋಟೆಲ್ ಮಾಲೀಕರ ಸಂಘದ ಪದಾಧಿಕಾರಿಗಳು ‘ಕನ್ನಡಪ್ರಭ’ಕ್ಕೆ ಮಾಹಿತಿ ನೀಡಿದ್ದಾರೆ.---ಬಾಕ್ಸ್--ಸೌದೆ ಒಲೆ ಖರೀದಿಗ್ಯಾಸ್ ಸಿಲಿಂಡರ್ ಕೊರೆತೆ ಹಿನ್ನೆಲೆಯಲ್ಲಿ ಚಿಕ್ಕಮಗಳೂರು ನಗರದ ಪ್ರಮುಖ ಹೋಟೆಲ್ ಮಾಲೀಕರು ಸೌದೆ ಒಲೆ ಖರೀದಿಗೆ ಮುಂದಾಗಿದ್ದಾರೆ. ಈಗಾಗಲೇ ಸೌದೆ ಒಲೆ ತಯಾರಕರಿಗೆ ಹಣ ನೀಡಿದ್ದು, ಒಂದೆರಡು ದಿನದಲ್ಲಿ ಒಲೆ ಫೂರೈಕೆ ಆಗಲಿದೆ. ಆ ಬಳಿಕೆ ಸಾಧ್ಯವಿರುವ ತಿನ್ನಿಸುಗಳನ್ನು ಒಲೆಯಲ್ಲಿಯೇ ತಯಾರಿಸುವುದಕ್ಕೆ ಸಿದ್ಧತೆ ಮಾಡಿದ್ದಾರೆ.---ಬಾಕ್ಸ---ಬಿಸಿಯೂಟಕ್ಕೂ ಬರೆ
ಗ್ಯಾಸ್ ಸಿಲಿಂಡರ್ ಸಮಸ್ಯೆ ಜಿಲ್ಲೆಯ ಶಾಲಾ ಮಕ್ಕಳ ಮಧ್ಯಾಹ್ನದ ಬಿಸಿಯೂಟ ಯೋಜನೆಗೂ ತೊಂದರೆ ಉಂಟಾಗುತ್ತಿದೆ. ಸಿಲಿಂಡರ್ ಪೂರೈಕೆ ಮಾಡುವ ಏಜೆನ್ಸಿಗಳಿಗೆ ಆದ್ಯತೆ ಮೇರೆಗೆ ವಾಣಿಜ್ಯ ಬಳಕೆ ಸಿಲಿಂಡರ್ ಅನ್ನು ಶಾಲೆಗಳಿಗೆ ನೀಡುವಂತೆ ಸೂಚಿಸಲಾಗಿದೆ. ಸದ್ಯದ ಮಟ್ಟಿಗೆ ಯಾವುದೇ ತೊಂದರೆ ಉಂಟಾಗಿಲ್ಲ. ತೊಂದರೆ ಕಂಡು ಬಂದ ತಕ್ಷಣ ಏಜೆನ್ಸಿಗಳೊಂದಿಗೆ ಮಾತನಾಡಿ ಸಿಲಿಂಡರ್ ಕೊಡಿಸುವ ಕೆಲಸ ಮಾಡಲಾಗುತ್ತಿದೆ ಎಂದು ಚಿಕ್ಕಮಗಳೂರು ತಾಲೂಕು ಬಿಇಒ ರುದ್ರಪ್ಪ ‘ಕನ್ನಡಪ್ರಭ’ಕ್ಕೆ ಮಾಹಿತಿ ನೀಡಿದ್ದಾರೆ....
-- ಬಾಕ್ಸ್--ಗೃಹ ಬಳಕೆ ಸಿಲಿಂಡರ್‌ಗೂ ಒಟಿಪಿ ಕಡ್ಡಾಯ
ಅಡಿಗೆ ಅನಿಲದ ಸಿಲಿಂಡರ್ ಪೂರೈಕೆ ಸಮಸ್ಯೆ ಎದುರಾಗುತ್ತಿದ್ದಂತೆ ಜಿಲ್ಲೆಯಲ್ಲಿ ಸಿಲಿಂಡರ್ ಪೂರೈಕೆ ಮಾಡುವ ಎಲ್ಲ ಏಜೆನ್ಸಿಗಳು ಸಿಲಿಂಡರ್‌ಗಳನ್ನು ಮನೆಗಳಿಗೆ ಪೂರೈಕೆ ಮಾಡುತ್ತಿದಂತೆ ಗ್ರಾಹಕರಿಂದ ಒಟಿಪಿ ಪಡೆದು ನೋಂದಾಯಿ ಸುವುದನ್ನು ಕಡ್ಡಾಯಗೊಳಿಸಿವೆ. ಇದು ಕಾಳಸಂತೆಯಲ್ಲಿ ಸಿಲಿಂಡರ್ ಮಾರಾಟಕ್ಕೆ ಕಡಿವಾಣ ಆಗಲಿದೆ. ಜತೆಗೆ, ಬುಂಕಿಂಗ್ ಅವಧಿಯನ್ನು 21 ದಿನದಿಂದ 25 ದಿನಕ್ಕೆ ಹೆಚ್ಚಳ ಮಾಡಲಾಗಿದೆ ಎಂದು ಜಿಲ್ಲಾ ಅಡಿಗೆ ಅನಿಲ ಪೂರೈಕೆದಾರರ ಸಂಘದ ಕಾರ್ಯಾಧ್ಯಕ್ಷ ಎಂ.ಎಸ್.ಅನಂತ್ ಕನ್ನಡಪ್ರಭಕ್ಕೆ ಮಾಹಿತಿ ನೀಡಿದ್ದಾರೆ.ಕೋಟ್ಸಮಸ್ಯೆ ಹೆಚ್ಚಾದರೆ ಮಕ್ಕಳಿಗೆ ಬಾಕ್ಸ್ ತರಲು ಸೂಚನೆ
ಬಿಸಿಯೂಟ ತಯಾರಿಸಲು ಗ್ಯಾಸ್ ವ್ಯವಸ್ಥೆ ಮಾಡುತ್ತಿದ್ದೇವೆ. ಒಂದು ವೇಳೆ ಸಂಪೂರ್ಣ ಗ್ಯಾಸ್ ದೊರೆಯದ ಪರಿಸ್ಥಿತಿ ಎದುರಾದರೆ ಮಕ್ಕಳಿಗೆ ಮನೆಯಿಂದ ಮಧ್ಯಾಹ್ನದ ಊಟದ ಬಾಕ್ಸ್ ತೆಗೆದುಕೊಂಡು ಬರುವುದಕ್ಕೆ ಸೂಚಿಸಲಾಗುವುದು.- ರುದ್ರಪ್ಪ, ಬಿಇಒ, ಚಿಕ್ಕಮಗಳೂರು ತಾಲೂಕುಕೋಟ್
ವಾಣಿಜ್ಯ ಸಿಲಿಂಡರ್ ಈಗಿನ ಸಮಸ್ಯೆ ಬಗ್ಗೆ ಯಾವುದೇ ಸರ್ಕಾರವನ್ನು ದೂರುವಂತಿಲ್ಲ. ಹೀಗಾಗಿ, ಈ ತುರ್ತು ಪರಿಸ್ಥಿತಿಯಲ್ಲಿ ಸಾಧ್ಯವಾದಷ್ಟು ಗ್ರಾಹಕರಿಗೆ ಸೇವೆ ನೀಡುವುದಕ್ಕೆ ಬೇಕಾದ ವ್ಯವಸ್ಥೆ ಮಾಡಿಕೊಳ್ಳುತ್ತಿದ್ದೇವೆ.- ಗಿರೀಶ್ ಭಟ್, ಮಾಲೀಕ, ಮೂಯೂರ ಹೋಟೆಲ್, ಚಿಕ್ಕಮಗಳೂರುಫೋಟೋ ಗ್ಯಾಸ್ ಸಿಲಿಂಡರ್ ಲಾರಿ ಅಥವಾ ಸಿಲಿಂಡರ್ ಪೂರೈಕೆ ಗೆ ಸಂಬಂಧಿಸಿದ ಫೋಟೋ ಬಳಸುವುದು)
--- ಬಾಕ್ಸ್--ಜಿಲ್ಲಾಧಿಕಾರಿಗೆ ಹೋಟೆಲ್ ಮಾಲೀಕರ ಮನವಿ (ಫೋಟೋ ಇದೆ ಇದರೊಂದಿಗೆ ಬಳಸಿ)
ಹಲವು ದಿನಗಳಿಂದ ನಗರದ ಹೋಟೆಲ್‌ಗಳಿಗೆ ಅಡುಗೆ ಅನಿಲದ ವಾಣಿಜ್ಯ ಸಿಲಿಂಡರ್ ಸರಬರಾಜು ಸಮಸ್ಯೆ ಆಗುತ್ತಿದೆ. ವಿತರಕರು ಸರಿಯಾಗಿ ಸರಬರಾಜು ಮಾಡುತ್ತಿಲ್ಲ. ಇದರಿಂದ ಮಾಲೀಕರಿಗೆ ತೊಂದರೆ ಆಗುತ್ತಿದೆ. ಜತೆಗೆ ಹೋಟೆಲ್ ನಂಬಿ ಕೊಂಡ ಗ್ರಾಹಕರಿಗೆ ತೊಂದರೆ ಉಂಟಾಗಿದೆ. ಹೀಗಾಗಿ, ಸಿಲಿಂಡರ್ ಪೂರೈಕೆ ಸರಿಪಡಿಸುವಂತೆ ಜಿಲ್ಲಾಧಿಕಾರಿಗಳಿಗೆ ಚಿಕ್ಕಮಗಳೂರು ನಗರದ ಹೋಟೆಲ್ ಮಾಲೀಕರ ಸಂಘದ ಪದಾಧಿಕಾರಿಗಳು ಬುಧವಾರ ಮನವಿ ಸಲ್ಲಿಸಿದ್ದಾರೆ. ಈ ವೇಳೆ ಹೋಟೆಲ್ ಮಾಲೀಕರ ಸಂಘದ ಗೌರವಾಧ್ಯಕ್ಷ ಬಿ.ಸಿ.ರಾವ್, ಹೋಟೆಲ್ ಮಾಲೀಕರಾದ ಬಾಲಕೃಷ್ಣರಾವ್, ಕೆ.ಎನ್.ರಾಜಣ್ಣ, ಸುರೇ ಶ್, ನಟರಾಜ್, ಚಂದ್ರಶೇಖರ್ ಇದ್ದರು.