ತರೀಕೆರೆ57 ವರ್ಷಗಳಿಂದ ಸಮಜಮುಖಿ ಕಾರ್ಯಕ್ರಮ ಮಾಡುತ್ತಿರುವ ನಮ್ಮ ಮಮತಾ ಮಹಿಳಾ ಸಮಾಜ ಹೊಸತನದೊಂದಿಗೆ ಮತ್ತಷ್ಟು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಿದೆ ಎಲ್ಲರೂ ಸಹಕಾರ ನೀಡಬೇಕು ಎಂದು ಸಮಾಜ ಅಧ್ಯಕ್ಷೆ ಸಹನ ರಾಘವೇಂದ್ರ ಮನವಿ ಮಾಡಿದರು.
- ಮಮತ ಮಹಿಳಾ ಸಮಾಜದ ಕಾರ್ಯಕಾರಿ ಸಮಿತಿ ಉದ್ಘಾಟನಾ ಸಮಾರಂಭ
ಕನ್ನಡಪ್ರಭ ವಾರ್ತೆ ತರೀಕೆರೆ57 ವರ್ಷಗಳಿಂದ ಸಮಜಮುಖಿ ಕಾರ್ಯಕ್ರಮ ಮಾಡುತ್ತಿರುವ ನಮ್ಮ ಮಮತಾ ಮಹಿಳಾ ಸಮಾಜ ಹೊಸತನದೊಂದಿಗೆ ಮತ್ತಷ್ಟು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಿದೆ ಎಲ್ಲರೂ ಸಹಕಾರ ನೀಡಬೇಕು ಎಂದು ಸಮಾಜ ಅಧ್ಯಕ್ಷೆ ಸಹನ ರಾಘವೇಂದ್ರ ಮನವಿ ಮಾಡಿದರು.ಮಮತ ಮಹಿಳಾ ಸಮಾಜದಿಂದ ಸಮಾಜದ ಆವರಣದಲ್ಲಿ ನಡೆದ ನೂತನ ಕಾರ್ಯಕಾರಿ ಸಮಿತಿ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ನಮ್ಮ ಮಹಿಳಾ ಸಮಾಜದ ಸದಸ್ಯರ ಸುಪ್ತ ಪ್ರತಿಭೆ ಗುರುತಿಸಿ ಅವಕಾಶ ಕಲ್ಪಿಸಲಾಗುವುದು. ಪಂಚಮಹೋತ್ಸವದ ಮೂಲಕ ರಂಗೋಲಿ ಸ್ಪರ್ಧೆ, ದೇಸಿ ಖಾದ್ಯಗಳ ಅಡುಗೆ, ಕಷಾಯದ ಉಪಯೋಗಗಳು, ವೇಶಭೂಷಣ ಸ್ಪರ್ಧೆಗಳು, ಆರೋಗ್ಯ ತಪಾಸಣಾ ಶಿಬಿರಗಳು, ಜಾನಪದ ಆಟಗಳು, ಮನರಂಜನೆಗೆ ಸಂಬಂಧಿಸಿದ ಕಾರ್ಯಕ್ರಮ ಮತ್ತು ಕಾರ್ಯಾಗಾರಗಳನ್ನು ಮುಂದಿನ ದಿನಗಳಲ್ಲಿ ಹಮ್ಮಿಕೊಳ್ಳಲಿದ್ದೇನೆ ಎಂದು ತಿಳಿಸಿದರು.ಜಾನಪದ ಕಲಾವಿದೆ ಮುಗುಳಿ ಲಕ್ಷ್ಮೀದೇವಮ್ಮ ತಾವು ನಡೆದು ಬಂದ ದಾರಿ ಹೆಣ್ಣಿನ ಶಕ್ತಿ, ಜವಾಬ್ದಾರಿ ಸಾಧನೆ ಬಗ್ಗೆ ಮಾತನಾಡಿ, ತಮ್ಮ ಗಾನ ಕಂಠದಿಂದ ಎಲ್ಲರನ್ನೂ ರಂಜಿಸಿದರು.ಇದೇ ವೇಳೆ ಮುಗಳಿ ಲಕ್ಷ್ಮೀದೇವಮ್ಮ ಮತ್ತು ಪತ್ರಕರ್ತ ಅನಂತ ನಾಡಿಗ್ ಅವರನ್ನು ಸನ್ಮಾನಿಸಲಾಯಿತು.
ಸ್ಪರ್ಧೆಗಳಲ್ಲಿ ಹೇಮಾವತಿ ಲಕ್ಕಿಲೇಡಿ ವಿಜೇತರಾದರು.ಲಕ್ಷ್ಮೀ ಮಧುಕರ್, ಸೌಭಾಗ್ಯ ಶ್ರೀರಂಗಪ್ಪ, ಇನ್ನರ್‌ವ್ಹೀಲ್ ಕ್ಲಬ್ ಅಧ್ಯಕ್ಷೆ ಮೀರಾ ವಾಸು, ರಶ್ಮಿ ರಮೇಶ್, ಮಂಜುಳಾ ಶರತ್, ಸಮಾಜದ ಕಾರ್ಯದರ್ಶಿ ರೇಣು ನವೀನ್, ರೂಪ ಕೃಷ್ಣಮೂರ್ತಿ, ಹೇಮಾ ಉಮೇಶ್ ನೂತನ ಕಮಿಟಿ ಸದಸ್ಯೆನಿಯರಾದ ಉಮಾ ದಯಾನಂದ್, ಅನಿತ ಕಿಶೋರ್ ಮತ್ತಿತರರಿದ್ದರು.
-23ಕೆಟಿಆರ್.ಕೆ.5ಃತರೀಕೆರೆಯಲ್ಲಿ ಮಮತ ಮಹಿಳಾ ಸಮಾಜದಿಂದ ನಡೆದ ನೂತನ ಕಾರ್ಯಕಾರಿ ಸಮಿತಿ ಉದ್ಘಾಟನಾ ಸಮಾರಂಭದಲ್ಲಿ ಜಾನಪದ ಕಲಾವಿದೆ ಮುಗುಳಿ ಲಕ್ಷ್ಮೀದೇವಮ್ಮ ಅವರನ್ನು ಸನ್ಮಾನಿಸಲಾಯಿತು.