ಸಾರಾಂಶ
ಶಾಸಕ ಬಿ.ಜಿ.ಗೋವಿಂದಪ್ಪ ಸಲಹೆ । ಲಕ್ಕಿಹಳ್ಳಿಯಲ್ಲಿ ಕುಡಿಯುವ ನೀರು ಪೈಪ್‌ಲೈನ್ ಕಾಮಗಾರಿಗೆ ಭೂಮಿಪೂಜೆಕನ್ನಡಪ್ರಭ ವಾರ್ತೆ ಹೊಸದುರ್ಗಅಧಿಕಾರಿಗಳು ಗ್ರಾಮಕ್ಕೆ ಅಹವಾಲು ಸ್ವೀಕರಿಸಲು ಬಂದಾಗ ಗ್ರಾಮದ ಜನ ಒಂದೆಡೆ ಸೇರಿ ಅಧಿಕಾರಿಗಳೊಂದಿಗೆ ತಮ್ಮ ಸಮಸ್ಯೆಗಳನ್ನು ಹೇಳಿಕೊಳ್ಳುವ ಪ್ರವೃತ್ತಿ ಬೆಳೆಸಿಕೊಳ್ಳಿ ಆಗ ಗ್ರಾಮದಲ್ಲಿನ ಸಮಸ್ಯೆ ನಿವಾರಣೆಗೆ ಅನುಕೂಲವಾಗುತ್ತೆ ಎಂದು ಶಾಸಕ ಬಿ.ಜಿ.ಗೋವಿಂದಪ್ಪ ಹೇಳಿದರು.
ತಾಲೂಕಿನ ಲಕ್ಕಿಹಳ್ಳಿ ಗ್ರಾಮದಲ್ಲಿ ಶುಕ್ರವಾರ ವಿವಿ ಸಾಗರ ಜಲಾಶಯದ ಹಿನ್ನಿರಿನಿಂದ ಲಕ್ಕಿಹಳ್ಳಿ ಗ್ರಾಮಕ್ಕೆ ಕುಡಿಯುವ ನೀರು ಪೈಪ್‌ಲೈನ್ ಕಾಮಗಾರಿಗೆ ಭೂಮಿಪೂಜೆ ಅವರು ನೆರವೇರಿಸಿ ಮಾತನಾಡಿದರು.ವಿವಿಸಾಗರ ಜಲಾಶಯದ ಹಿನ್ನಿರಿನ ಗ್ರಾಮಗಳಾದ ಲಕ್ಕಿಹಳ್ಳಿ, ಅತ್ತಿಮಗ್ಗೆ, ಕಾರೇಹಳ್ಳಿ ಮತ್ತೋಡು ಗುಡ್ಡದ ನೇರಲಕೆರೆ, ಹುಣವಿನಡು ಗ್ರಾಪಂನ ವ್ಯಾಪ್ತಿಯ ಹಳ್ಳಿಗಳಲ್ಲಿ ಪಕ್ಕದ ಜಲಾಶಯದಲ್ಲಿಯೇ ನೀರು ಇದ್ದರೂ ಈ ಗ್ರಾಮಗಳಲ್ಲಿ ನೀರಿಲ್ಲ ಇದನ್ನು ಮನಗಂಡು ವಿಶ್ವೇಶ್ವರಯ್ಯ ಜಲನಿಗಮದ ಅಧಿಕಾರಿಗಳ ತಂಡವನ್ನು ಈ ಭಾಗಕ್ಕೆ ಕರೆತಂದು ವಾಸ್ತವ ಸಂಗತಿಯ ಮಾಹಿತಿಯನ್ನು ಸರ್ಕಾರದ ಗಮನಕ್ಕೆ ತಂದಿದ್ದೇನೆ. ಮತ್ತೇ ಈಗ ಎಸ್ಟಿಮೇಟ್ ಸಮೇತ ಮತ್ತೋಮ್ಮೆ ಸರ್ಕಾರದ ಬಳಿ ಹೋಗುತ್ತಿದ್ದೇನೆ ಎಂದರು.
ಈ ಭಾಗದ 6 ಕೆರೆಗಳಿಗೆ 12 ಸಾವಿರ ಕೃಷಿ ಭೂಮಿಗೆ ಜಲಾಶಯದಲ್ಲಿ ನೀರು ಇದೆಯೆಂದು ಏಕಾಏಕೀ ಪಡೆಯಲು ಸಾಧ್ಯವಿಲ್ಲ ಇಲ್ಲಿಯವರೆಗೆ ಈ ಜಲಾಶಯದಿಂದ ನಮಗೆ ಒಂದು ಹನಿ ನೀರು ಪಡೆಯಲು ಬರುವುದಿಲ್ಲ ಅದನ್ನು ಪಡೆಯಲು ನೀರು ಹಂಚಿಕೆಯ ಸಮಿತಿಯಿಂದ ಅನುಮತಿ ಪಡೆಯಬೇಕಿದೆ ಈ ನಿಟ್ಟಿನಲ್ಲಿ ಕಾರ್ಯ ಪ್ರವೃತ್ತನಾಗಿದ್ದೇನೆ ನೀರು ತಂದು ತೋರಿಸುತ್ತೇನೆ ಎಂದರು.ವಿವಿ ಸಾಗರ ಹಿನ್ನಿರಿನ ಪ್ರದೇಶವೂ ಗಣಿಭಾದಿತ ಪ್ರದೇಶವಾಗಿದ್ದು, ಈ ಭಾಗದ 6 ಗ್ರಾಪಂ ವ್ಯಾಪ್ತಿಯ ಹಳ್ಳಿಗಳಲ್ಲಿ ಗಣಿಭಾದಿತ ಪ್ರದೆಶಾಭಿವೃದ್ಧಿ ಯೋಜನೆಯಡಿ 7 ಲಕ್ಷ ರು.ವೆಚ್ಚದಲ್ಲಿ ವಸತಿ ರಹಿತರಿಗೆ ಮನೆಗಳನ್ನು ನಿರ್ಮಿಸಲಾಗುವುದು. ಅದೇ ರೀತಿ ತಾಲೂಕಿನ ಇತರೆ ಗ್ರಾಮಗಳಲ್ಲಿಯೂ ಸರ್ಕಾರ ಮನೆ ನಿರ್ಮಾಣಕ್ಕೆ 3.5 ಲಕ್ಷ ನೀಡಲಿದೆ ಎಂದು ತಿಳಿಸಿದರು.
ಲಕ್ಕಿಹಳ್ಳಿ ಗ್ರಾಮದಲ್ಲಿ ಈ ಹಿಂದೆ ಭಯದ ವಾತಾವರಣ ಇತ್ತು, ಈ ಹಿಂದೆ ನಾನು ಚುನಾವಣೆಗೆ ಬಂದಾಗ ನನಗೆ ಕಲ್ಲು ಹೊಡೆದಿದ್ದರು ಆದರೆ ಇಂದು ಆ ಪರಿಸ್ಥೀತಿಯಿಲ್ಲ ಇಂದು ಗ್ರಾಮದಲ್ಲಿ ಶಿಕ್ಷಣವಂತರು ಹೆಚ್ಚಾಗಿದ್ದಾರೆ. ಚುನಾವಣೆಯಲ್ಲಿ ಯಾರಿಗಾಗದರೂ ಮತ ಹಾಕಿ ಆದರೆ ಗ್ರಾಮಕ್ಕೆ ಅಧಿಕಾರಿಗಳು ಬಂದರೆ ಅವರೊಂದಿಗೆ ಬೆರೆತು ಅಭಿವೃದ್ದಿಯ ಬಗ್ಗೆ ಚಿಂತನೆ ನಡೆಸಿ ಎಂದರು.ಕಾರ್ಯಕ್ರಮದಲ್ಲಿ ಭದ್ರಾ ಯೋಜನೆಯ ಎಇಇ ಸುರೇಶ್, ಮುಶಿ ಪ್ರಕಾಶ್, ಗ್ರಾಪಂ ಅಧ್ಯಕ್ಷರು ಹಾಗೂ ಸದಸ್ಯರು ಭಾಗವಹಿಸಿದ್ದರು.