ಸಾರಾಂಶ
ನಾಯಕನಹಟ್ಟಿಯಲ್ಲಿ ಗುರುವಾರ ಪಟ್ಟಣ ಪಂಚಾಯಿತಿ ಅಧ್ಯಕ್ಷರಾಗಿ ಮಂಜುಳಾ ಶ್ರೀಕಾಂತ್, ಉಪಾಧ್ಯಕ್ಷರಾಗಿ ಸರ್ವಮಂಗಳಾ ಉಮಾಪತಿ ಅಧಿಕಾರ ಸ್ವೀಕರಿಸಿದರು.
ಕನ್ನಡಪ್ರಭ ವಾರ್ತೆ ನಾಯಕನಹಟ್ಟಿ
ಪಟ್ಟಣ ಪಂಚಾಯಿತಿ ೧೬ ವಾರ್ಡ್‌ಗಳ ಸರ್ವತೋಮುಖ ಅಭಿವೃದ್ಧಿಗೆ ಎಲ್ಲಾ ಸದಸ್ಯರ ಸಹಕಾರ, ಸಲಹೆ, ಸೂಚನೆ ಅಗತ್ಯ ಎಂದು ನೂತನ ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಮಂಜುಳಾ ಶ್ರೀಕಾಂತ್ ಹೇಳಿದರು.ಗುರುವಾರ ಪಟ್ಟಣ ಪಂಚಾಯಿತಿ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿ ಮಾತನಾಡಿದ ಅವರು ನಮ್ಮನ್ನು ಅವಿರೋಧ ಆಯ್ಕೆ ಮಾಡಿರುವುದು ಸಂತಸ ತಂದಿದೆ. ಇಂಥಾ ಆಯ್ಕೆಯಿಂದಾಗಿ ಸದಸ್ಯರ ಮಧ್ಯೆ ಪೈಪೋಟಿ, ದ್ವೇಷಾಸೂಯೆಗೆ ಅವಕಾಶ ಇರುವುದಿಲ್ಲ. ಅದೇ ರೀತಿಯಲ್ಲಿ ಅಭಿವೃದ್ಧಿ ವಿಷಯದಲ್ಲೂ ಪರಸ್ಪರ ಹೊಂದಾಣಿಕೆ ಇದ್ದರೆ ಪಟ್ಟಣದ ಏಳಿಗೆ ಸಾಧ್ಯವಾಗಲಿದೆ ಎಂದರು.
ಉಪಾಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಸರ್ವಮಂಗಳಾ ಉಮಾಪತಿ ಮಾತನಾಡಿ, ಮಹಿಳೆಯರಿಗೆ ಇಂಥಾ ಅವಕಾಶ ಅಪರೂಪ. ಮಹಿಳಾ ಮೀಸಲಾತಿ ಇಂಥಾ ಅವಕಾಶ ಕಲ್ಪಿಸಿದೆ. ಅಭಿವೃದ್ಧಿಗೆ ಸರ್ವ ಸದಸ್ಯರು ಬದ್ಧರಾಗೋಣ. ಅಧಿಕಾರಿ ಹಾಗೂ ಸಿಬ್ಬಂದಿ ಸಹಕಾರ ಕೂಡ ಅಗತ್ಯ. ಅದೇ ರೀತಿಯಲ್ಲಿ ಹಿರಿಯ ಮುಖಂಡರ ಮಾರ್ಗದರ್ಶನ ಪಡೆಯೋಣ ಎಂದರು.ಪಟ್ಟಣ ಪಂಚಾಯತಿಯ ಮುಖ್ಯ ಅಧಿಕಾರಿ ಓ ಶ್ರೀನಿವಾಸ್, ಪಟ್ಟಣ ಪಂಚಾಯಿತಿ ಸದಸ್ಯರಾದ ಸೈಯದ್ ಅನ್ವರ್, ಜೆ.ಆರ್.ರವಿಕುಮಾರ್, ಈರಕ್ಕ, ಪಾಪಮ್ಮ, ಬೋಸಮ್ಮ, ಅಬಕಾರಿ ತಿಪ್ಪೇಸ್ವಾಮಿ, ಪಿ ಓಬಯ್ಯ, ವಿನುತಾ ಇತರರು ಇದ್ದರು.
)
;Resize=(128,128))
;Resize=(128,128))
;Resize=(128,128))
;Resize=(128,128))