ಸಾರಾಂಶ
ಶತಮಾನದ ಶಾಲೆಗೆ ಕಂಪ್ಯೂಟರ್ ಹಾಗೂ ಗ್ರಂಥಾಲಯಕ್ಕೆ ಪುಸ್ತಕಗಳು ಹಾಗೂ ವಿಜ್ಞಾನ ಪ್ರಯೋಗಾಲಯಕ್ಕೆ ಬೇಕಾದ ವ್ಯವಸ್ಥೆ ಮಾಡಿಕೊಡಲಾಗುತ್ತದೆ. ಶಾಲೆಯಲ್ಲಿ ಈ ವರ್ಷ ಹಮ್ಮಿಕೊಳ್ಳುವ 150ನೇ ವರ್ಷದ ಸಮಾರಂಭದ ಯಶಸ್ಸಿಗೂ ಸಹಕಾರ ನೀಡಲಾಗುವುದು.
ಕನ್ನಡಪ್ರಭ ವಾರ್ತೆ ಮೇಲುಕೋಟೆ
150 ವರ್ಷಕ್ಕೆ ಪಾದಾರ್ಪಣೆ ಮಾಡಿರುವ ಶತಮಾನದ ಸರ್ಕಾರಿ ಶಾಲೆ ಬಲವರ್ಧನೆಗೆ ಕೈಲಾದ ಸಹಕಾರ ನೀಡಲಾಗುತ್ತದೆ ಎಂದು ಮೈಸೂರು ಇನ್‌ಫೋಸಿಸ್‌ನ ಕೀರ್ತಿರಾಜ್ ಭರವಸೆ ನೀಡಿದರು.ಇನ್ ಫೋಸಿಸ್ ಫೌಂಡೇಷನ್ ವತಿಯಿಂದ ಶಾಲಾ ಮಕ್ಕಳಿಗೆ ನೋಟ್ ಪುಸ್ತಕ ವಿತರಿಸಿ ಮಾತನಾಡಿ, ಶತಮಾನದ ಶಾಲೆಗೆ ಕಂಪ್ಯೂಟರ್ ಹಾಗೂ ಗ್ರಂಥಾಲಯಕ್ಕೆ ಪುಸ್ತಕಗಳು ಹಾಗೂ ವಿಜ್ಞಾನ ಪ್ರಯೋಗಾಲಯಕ್ಕೆ ಬೇಕಾದ ವ್ಯವಸ್ಥೆ ಮಾಡಿಕೊಡಲಾಗುತ್ತದೆ. ಶಾಲೆಯಲ್ಲಿ ಈ ವರ್ಷ ಹಮ್ಮಿಕೊಳ್ಳುವ 150ನೇ ವರ್ಷದ ಸಮಾರಂಭದ ಯಶಸ್ಸಿಗೂ ಸಹಕಾರ ನೀಡಲಾಗುವುದು ಎಂದರು.
ಶಾಲೆ ವಾತಾವರಣ, ಮಕ್ಕಳ ಮನೆ ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದ ಕೀರ್ತಿರಾಜ್, ಸರ್ಕಾರಿ ಶಾಲೆಯ ಸೌಲಭ್ಯವನ್ನು ಮಕ್ಕಳ ಪೋಷಕರು ಬಳಸಿಕೊಳ್ಳಬೇಕು. ಇತರೆ ಶಾಲೆಗಳ ಅಭಿವೃದ್ಧಿಗೂ ಕೈ ಜೋಡಿಸುವುದಾಗಿ ತಿಳಿಸಿದರು.ಮುಖ್ಯಶಿಕ್ಷಕ ಸಂತಾನರಾಮನ್ ಮಾತನಾಡಿ, ಶಾಲೆಗೆ ಊಟದ ಹಾಲ್, ಮಕ್ಕಳ ಮನೆಗೆ ಕಿಂಡರ್ ಗಾರ್ಡನ್ ನಿರ್ಮಿಸಿಕೊಡುವ 150ನೇ ವರ್ಷದ ಸಮಾರಂಭಕ್ಕೆ ಸಂಪೂರ್ಣ ಸಹಕಾರ ನೀಡಬೇಕು ಎಂದು ಕೋರಿದರು.
ಹಿರಿಯ ವಿದ್ಯಾರ್ಥಿ ಹಾಗೂ ಸಮಾಜ ಸೇವಕ ಕನಗೋನಹಳ್ಳಿ ಪರಮೇಶ್ ಗೌಡ ಮಾತನಾಡಿ, ಈ ಶಾಲೆಯನ್ನು ಬಲವರ್ಧನೆ ಕೆ.ಪಿನಾಗರಾಜ್ ಮತ್ತು ಲಯನ್ಸ್ ಕ್ಲಬ್ ದೀಪಾರನ್ನು ಕರೆತಂದು ಸೌಲಭ್ಯ ಕೊಡಿಸಲಾಗುತ್ತದೆ ಎಂದರು.ಇದೇ ವೇಳೆ ಕ್ಯಾತನಹಳ್ಳಿ ಸರ್ಕಾರಿ ಪ್ರಾಥಮಿಕ ಶಾಲೆ, ಮೇಲುಕೋಟೆ ಬಾಲಕಿಯರ ಶಾಲೆ, ಹೋಬಳಿಯ ಬಳಘಟ್ಟ, ಕನಗೋನಹಳ್ಳಿ ಪಗಡೇಕಲ್ಲಹಳ್ಳಿ, ಕದಲಗೆರೆ ಕಾಡೇನಹಳ್ಳಿ, ಜಕ್ಕನಹಳ್ಳಿ ಕಜ್ಜಿಕೊಪ್ಪಲು, ನ್ಯಾಮನಹಳ್ಳಿ ಶಾಲೆಗಳ ಮಕ್ಕಳಿಗೆ ನೋಟ್‌ಬುಕ್ ವಿತರಿಸಲಾಯಿತು.
ಸಮಾರಂಭದಲ್ಲಿ ಇನ್ ಫೋಸಿಸ್‌ನ ಮನೋಜ್ ಪಾಟೀಲ್, ಎಸ್.ಎಸ್.ಪಾಟೀಲ್, ನ್ಯಾಮನಹಳ್ಳಿ ಅಶ್ವಥ್ ಕುಮಾರಗೌಡ, ಚಂದ್ರಶೇಖರ್, ಜಯಬೋರೇಗೌಡ, ಅರುಣ, ಆ್ಯಂಬುಲೆನ್ಸ್ ಚಂದ್ರು, ಯೋಗಿ ಚೆಲುವನಾರಾಯಣ, ಗಂಗಾಧರ್ ಇತರರು ಭಾಗವಹಿಸಿದ್ದರು.