ಸಾರಾಂಶ
ಸಹಕಾರಿ ಕ್ಷೇತ್ರಗಳಲ್ಲಿ ಅಭಿವೃದ್ದಿ ಸಾಧಿಸಬೇಕಾದರೆ ಪ್ರಾಮಾಣಿಕತೆ ಮತ್ತು ನಂಬಿಕೆ ಸೇವೆ ಬಹಳ ಮುಖ್ಯವಾಗಿದೆ. ಇತ್ತೀಚಿನ ವರ್ಷಗಳಲ್ಲಿ ಅನೇಕ ಸಹಕಾರಿ ಬ್ಯಾಂಕ್‌ಗಳು ವಹಿವಾಟಿನಲ್ಲಿ ಅಭಿವೃದ್ದಿ ಸಾಧಿಸಿದ್ದು, ಬ್ಯಾಂಕ್‌ನ ಆರ್ಥಿಕ ಸ್ಥಿತಿ ಸುಧಾರಿಸಿಕೊಳ್ಳುವ ಪ್ರಾಮಾಣಿಕ ಪ್ರಯತ್ನ ಮಾಡುತ್ತಿವೆ.
ಕನ್ನಡಪ್ರಭ ವಾರ್ತೆ ಚಳ್ಳಕೆರೆ
ಸಹಕಾರಿ ಕ್ಷೇತ್ರಗಳಲ್ಲಿ ಅಭಿವೃದ್ದಿ ಸಾಧಿಸಬೇಕಾದರೆ ಪ್ರಾಮಾಣಿಕತೆ ಮತ್ತು ನಂಬಿಕೆ ಸೇವೆ ಬಹಳ ಮುಖ್ಯವಾಗಿದೆ. ಇತ್ತೀಚಿನ ವರ್ಷಗಳಲ್ಲಿ ಅನೇಕ ಸಹಕಾರಿ ಬ್ಯಾಂಕ್‌ಗಳು ವಹಿವಾಟಿನಲ್ಲಿ ಅಭಿವೃದ್ದಿ ಸಾಧಿಸಿದ್ದು, ಬ್ಯಾಂಕ್‌ನ ಆರ್ಥಿಕ ಸ್ಥಿತಿ ಸುಧಾರಿಸಿಕೊಳ್ಳುವ ಪ್ರಾಮಾಣಿಕ ಪ್ರಯತ್ನ ಮಾಡುತ್ತಿವೆ. ಗ್ರಾಹಕರ ವಿಶ್ವಾಸಗಳಿಸಿದಲ್ಲಿ ಮಾತ್ರ ಬ್ಯಾಂಕ್ ಅಭಿವೃದ್ದಿಯತ್ತ ದಾಪುಗಾಲಿಡಲು ಸಾಧ್ಯವೆಂದು ಜಿಲ್ಲಾ ಉಸ್ತುವಾರಿ ಸಚಿವ, ಡಿಸಿಸಿಬ್ಯಾಂಕ್ ಜಿಲ್ಲಾಧ್ಯಕ್ಷ ಹಾಗೂ ಹೊಯ್ಸಳ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಡಿ.ಸುಧಾಕರ ತಿಳಿಸಿದರು.ಇಲ್ಲಿ ಶನಿವಾರ ಬ್ಯಾಂಕ್ ಕಚೇರಿ ಆವರಣದಲ್ಲಿ ೨೦೨೩-೨೪ನೇ ಸಾಲಿನ ೨೨ನೇ ವರ್ಷದ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಪ್ರಾರಂಭದ ಹಂತದಲ್ಲಿ ಕೇವಲ ಕೆಲವೇ ಜನರ ಸಹಕಾರದೊಂದಿಗೆ ಆರಂಭಗೊಂಡ ಹೊಯ್ಸಳ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಘ ನಿಯಮಿತ ಇಂದು ನಿಮ್ಮೆಲ್ಲರ ಸಹಕಾರದಿಂದ ಉತ್ತಮ ಲಾಭದತ್ತ ಮುನ್ನಡೆದಿದೆ. ಸೌಹಾರ್ದ ಸಹಕಾರಿ ಕ್ಷೇತ್ರದ ಮುಂಚೂಣಿ ಬ್ಯಾಂಕ್‌ಗಳಲ್ಲಿ ಹೊಯ್ಸಳ ಕ್ರೆಡಿಟ್ ಸೌಹಾರ್ದ ಬ್ಯಾಂಕ್ ಸಹ ಒಂದಾಗಿದೆ. ಬ್ಯಾಂಕ್‌ನ ಆರ್ಥಿಕ ಬಲವರ್ಧನೆಗೆ ಪ್ರಾಮಾಣಿಕವಾಗಿ ಸಹಕರಿಸುತ್ತಿರುವ ಬ್ಯಾಂಕ್‌ನ ಎಲ್ಲಾ ನಿರ್ದೇಶಕರಿಗೂ, ಸಿಬ್ಬಂದಿ ವರ್ಗಕ್ಕೂ ಗ್ರಾಹಕರಿಗೂ ಅಭಿನಂದನೆ ಸಲ್ಲಿಸುವುದಾಗಿ ತಿಳಿಸಿದರು.
ಮುಂದಿನ ದಿನಗಳಲ್ಲಿ ನಿಮ್ಮೆಲ್ಲರ ಸಹಕಾರದಿಂದ ಇನ್ನೂ ಹೆಚ್ಚಿನ ಆರ್ಥಿಕ ಸಾಧನೆಯನ್ನು ಮಾಡುವ ನಿಟ್ಟಿನಲ್ಲಿ ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸುವೆ. ಹೊಯ್ಸಳ ಕ್ರೆಡಿಟ್ ಸೌಹಾರ್ಧ ಬ್ಯಾಂಕ್ ಇನ್ನೂ ಕೆಲವೇ ದಿನಗಳಲ್ಲಿ ಹಲವಾರು ನೂತನ ಯೋಜನೆಗಳನ್ನು ಜಾರಿಗೊಳಿಸುವ ನಿಟ್ಟಿನಲ್ಲಿ ಚಿಂತನೆ ನಡೆದಿದೆ ಎಂದು ಹೇಳಿದರು.ಮಹಾಸಭೆಯಲ್ಲಿ ನಿರ್ದೇಶಕರಾದ ಸಿ.ವೀರಭದ್ರಬಾಬು, ಪ್ರಹ್ಲಾದ್‌ಶೆಟ್ಟಿ, ಎಸ್.ಕೆ.ಮರಳಿ, ವ್ಯವಸ್ಥಾಪಕ ವೀರೇಶ್‌ಹಳ್ಳೇರ ಮುಂತಾದವರು ಪಾಲ್ಗೊಂಡಿದ್ದರು.