ಸಾರಾಂಶ
ಕನ್ನಡಪ್ರಭ ವಾರ್ತೆ ಕೆ.ಎಂ.ದೊಡ್ಡಿ
ಪ್ರತಿಯೊಬ್ಬರಿಗೂ ಬದುಕನ್ನು ಸಾರ್ಥಕ ಪಡಿಸಿಕೊಳ್ಳಲು ಸಹಕಾರಿ ಕ್ಷೇತ್ರವೇ ಅತ್ಯುತ್ತಮ ಕ್ಷೇತ್ರವಾಗಿದೆ ಭಾರತೀ ಶಿಕ್ಷಣ ಸಂಸ್ಥೆ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಆಶಯ್ ಜಿ.ಮಧು ಹೇಳಿದರು.ಭಾರತೀ ಕ್ರೆಡಿಟ್ ಕೋ- ಆಪರೇಟಿವ್ ಸೊಸೈಟಿಯಲ್ಲಿ ಸಹಕಾರ ಸಪ್ತಾಹದ ಅಂಗವಾಗಿ ಧ್ವಜಾರೋಹಣ ನೆರವೇರಿಸಿ ಮಾತನಾಡಿ, ಸಹಕಾರ ಸಂಸ್ಥೆಗಳ ಅಭಿವೃದ್ಧಿಗೆ ಸಿಬ್ಬಂದಿ, ಜನರ ಪ್ರೀತಿ ವಿಶ್ವಾಸ ಹಾಗೂ ಸಹಕಾರ ಬಹಳಷ್ಟು ಅಗತ್ಯ ಎಂದರು.
ಸಹಕಾರ ಸಂಘಗಳಿಂದ ದೇಶದ ಆರ್ಥಿಕತೆ ಬಲಿಷ್ಠವಾಗಿದೆ. ಸಹಕಾರಿ ಸಂಘದಲ್ಲಿ ಗ್ರಾಹಕರ ಅನುಕೂಲಕ್ಕಾಗಿ ಆರ್‌ಟಿಜಿಎಸ್, ನೆಫ್ಟ್, ಇ- ಸ್ಟ್ಯಾಂಪಿಂಗ್ ಸೌಲಭ್ಯವಿದೆ. ಸಹಕಾರ ಕ್ಷೇತ್ರ ಗ್ರಾಮೀಣ ಪ್ರದೇಶದ ಜೀವನಾಡಿಯಂತೆ ಕೆಲಸ ನಿರ್ವಹಿಸುತ್ತಿದೆ ಎಂದರು.ಸಹಕಾರ ವ್ಯವಸ್ಥೆ ಉಳಿಸಿ ಬೆಳೆಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಸಹಕಾರ ಬ್ಯಾಂಕ್‌ಗಳ ತಂತ್ರಜ್ಞಾನಾಧಾರಿತ ಸೇವೆಯಲ್ಲಿ ಜಾಗೃತಿ ಅಗತ್ಯ ಎಂದರು.
ಭಾರತೀ ಕ್ರೆಡಿಟ್ ಕೋ- ಅಪರೇಟಿವ್ ಸೊಸೈಟಿ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಎಸ್.ನಾಗರಾಜ್ ಮಾತನಾಡಿ, ಸಹಕಾರ ಬ್ಯಾಂಕ್‌ಗಳಲ್ಲಿ ವಿನೂತನ ಯೋಜನೆಗಳ ಮೂಲಕ ಉತ್ತಮ ಬ್ಯಾಂಕ್ ಎಂದು ಪ್ರಸಿದ್ಧಿ ಪಡೆದಿದೆ. ದಕ್ಷತೆ ಮತ್ತು ಬದ್ಧತೆಯಿಂದ ಸೇವೆ ಸಲ್ಲಿಸಿ ಜನರ, ನೌಕರರ ಮತ್ತು ಗ್ರಾಹಕರ ಪ್ರೀತಿ ವಿಶ್ವಾಸ ಗೌರವಗಳಿಗೆ ಪಾತ್ರವಾಗಿವೆ ಎಂದರು.ಗ್ರಾಹಕರಿಗೆ ಸಂತೃಪ್ತಿ ಸೇವೆ ನೀಡುವುದೇ ಬ್ಯಾಂಕಿನ ಪ್ರಥಮ ಆದ್ಯತೆ. ಮಧು ಜಿ.ಮಾದೇಗೌಡರು ಬ್ಯಾಂಕಿನ ಅಧ್ಯಕ್ಷರಾಗಿ ಉತ್ತಮ ಮಾರ್ಗದರ್ಶನ ನೀಡುತ್ತಿದ್ದಾರೆ. ಬ್ಯಾಂಕಿನ ಸದಸ್ಯರಿಗೆ ವಿನೂತನ ಯೋಜನೆಯನ್ನು ಜಾರಿಗೊಳಿಸಿದ್ದಾರೆ ಎಂದರು.
ಈ ವೇಳೆ ನಿರ್ದೇಶಕರಾದ ಸಿ.ವಿ.ಮಲ್ಲಿಕಾರ್ಜುನ, ಜೆ.ಬಿ.ಪಲ್ಲವಿ, ಎಚ್.ಪಿ.ಪ್ರತಿಮಾ, ಎಂ.ಪಿ.ತೇಜೇಶ್ ಕುಮಾರ್, ವ್ಯವಸ್ಥಾಪಕ ಪ್ರಮೋದ್ ಉಪಸ್ಥಿತರಿದ್ದರು.ಸಹಕಾರ ಸಪ್ತಾಹಕ್ಕೆ ಕುಬೇರ್ ಸಿಂಗ್ ಚಾಲನೆ
ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣಪಟ್ಟಣದ ಶ್ರೀಕೃಷ್ಣರಾಜೇಂದ್ರ ಸಹಕಾರ ಸಂಘದಿಂದ 72ನೇ ಅಖಿಲ ಭಾರತ ಸಹಕಾರ ಸಪ್ತಾಹವನ್ನು ಸಹಕಾರ ಧ್ವಜವನ್ನು ಹಾರಿಸುವ ಮೂಲಕ ಸಂಘದ ಅಧ್ಯಕ್ಷ ಎಸ್.ಕೆ.ಕುಬೇರ್ ಸಿಂಗ್ ಚಾಲನೆ ನೀಡಿದರು.
ನಂತರ ಅವರು ಮಾತನಾಡಿ, ಸಹಕಾರ ತತ್ವಗಳು, ಸಂಘದ ಬೆಳವಣಿಗೆ ನಿಯಮಾನುಸಾರ, ವಿವಿಧ ಯೋಜನೆಯ ಅನುಸಾರ ಆಯಾ ವ್ಯಾಪ್ತಿಯ ಸಹಕಾರ ಸಂಘಗಳ ಅಭಿವೃದ್ಧಿಗೆ ಅನುಕೂಲವಾಗುತ್ತದೆ ಎಂದರು.ಸಂಘದ ಸಭಾ ನಿರ್ಣಯದಂತೆ ಮುಂದಿನ ದಿನಗಳಲ್ಲಿ ಎಲ್ಲಾ ಸದಸ್ಯರ ಸಹಕಾರದೊಂದಿಗೆ ಕಚೇರಿಯನ್ನು ಕಂಪ್ಯೂಟರೀಕರಣ ಮಾಡುವ ಜೊತೆಗೆ ಸಂಘದ ಮೇಲಂತಸ್ತಿನಲ್ಲಿ ಮೂರು ವಾಣಿಜ್ಯ ಮಳಿಗೆ ಹಾಗೂ ಸಭಾಂಗಣ ಕಟ್ಟಡ ನಿರ್ಮಿಸುವುದಾಗಿ ತಿಳಿಸಿದರು.
ಕಾರ್ಯಕ್ರಮದಲ್ಲಿ ಸಂಘದ ನಿರ್ದೇಶಕರಾದ ಸಿ.ವಸಂತಕುಮಾರ್, ವಿ.ನಾರಾಯಣ್, ಜಿ.ವಿ ನಾರಾಯಣಸ್ವಾಮಿ, ಭಾನುಮತಿ, ಸಾಯಿಲೀಲ, ಹಿರಿಯ ಷೇರುದಾರರಾದ ಚಂದ್ರಶೇಖರ್, ಸಂಘದ ಕಾರ್ಯದರ್ಶಿ ವಸಂತ್‌ಕುಮಾರ್ ಸೇರಿದಂತೆ ಸಿಬ್ಬಂದಿ ವರ್ಗ ಹಾಜರಿದ್ದರು.;Resize=(128,128))
;Resize=(128,128))
;Resize=(128,128))