ಪ್ರತಿಯೊಬ್ಬರ ಅರ್ಥಿಕ ಪ್ರಗತಿಗೆ ಸಹಕಾರ ಸಂಘಗಳು ಸಹಕಾರಿ: ಷಡಕ್ಷರಿ ದೇಶಿಕೇಂದ್ರ ಸ್ವಾಮೀಜಿ

| Published : Sep 21 2025, 02:00 AM IST

ಸಾರಾಂಶ

ವಿಶ್ವಗುರು ಬಸವಣ್ಣರ ಸ್ಮರಣೆಯಲ್ಲಿ ಎಲ್ಲರನ್ನೂ ಒಂದೂಗೂಡಿಸಿ ಸಾರ್ವಜನಿಕರಿಗೆ ಸೊಸೈಟಿ ಉತ್ತಮ ಸೇವೆ ನೀಡುತ್ತಿದೆ ಎನ್ನುವುದಕ್ಕೆ ಇಂತಹ ಕಾರ್ಯಕ್ರಮಗಳು ಸಾಕ್ಷಿಯಾಗಿವೆ. ಸಹಕಾರ ಸಂಘಗಳು ಇತ್ತಿಚಿನ ದಿನಗಳಲ್ಲಿ ನಡೆಯುವುದು ಕಷ್ಟವಾಗಿದೆ.

ಕನ್ನಡಪ್ರಭ ವಾರ್ತೆ ಮಳವಳ್ಳಿ

ಸಹಕಾರ ಸಂಘಗಳು ಪ್ರತಿಯೊಬ್ಬರ ಅರ್ಥಿಕ ಪ್ರಗತಿಗೆ ಸಹಕಾರಿ. ವಿಶ್ವಗುರು ಕೋ ಆಪರೇಟಿವ್ ಸೊಸೈಟಿ ಕಡಿಮೆ ಅವಧಿಯಲ್ಲಿ ಹೆಚ್ಚು ಜನಪ್ರೀಯತೆ ಪಡೆದುಕೊಳ್ಳುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ ಎಂದು ಮುಡುಕುನಪುರದ ಷಡಕ್ಷರಿ ದೇಶಿಕೇಂದ್ರ ಸ್ವಾಮೀಜಿ ತಿಳಿಸಿದರು.

ಪಟ್ಟಣದ ಗಾಯಿತ್ರಿ ಮಂದಿರದಲ್ಲಿ ಸೊಸೈಟಿಯಿಂದ ನಡೆದ ಶ್ರೀವಿಶ್ವಗುರು ಪ್ರಶಸ್ತಿ ಪ್ರದಾನ ಸಮಾರಂಭ ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿ, ವಿಶ್ವಗುರು ಬಸವಣ್ಣರ ಸ್ಮರಣೆಯಲ್ಲಿ ಎಲ್ಲರನ್ನೂ ಒಂದೂಗೂಡಿಸಿ ಸಾರ್ವಜನಿಕರಿಗೆ ಸೊಸೈಟಿ ಉತ್ತಮ ಸೇವೆ ನೀಡುತ್ತಿದೆ ಎನ್ನುವುದಕ್ಕೆ ಇಂತಹ ಕಾರ್ಯಕ್ರಮಗಳು ಸಾಕ್ಷಿಯಾಗಿವೆ ಎಂದರು.

ಅರ್ಥಶಾಸ್ತ್ರ ಲೇಖಕ ಡಾ.ಎಚ್.ಆರ್.ಕೃಷ್ಣಯ್ಯಗೌಡ ಮಾತನಾಡಿ, ಸಹಕಾರ ಸಂಘಗಳು ಇತ್ತಿಚಿನ ದಿನಗಳಲ್ಲಿ ನಡೆಯುವುದು ಕಷ್ಟವಾಗಿದೆ. ಸೊಸೈಟಿಯು ಹಿರಿಯರ ಮಾರ್ಗದರ್ಶನದಲ್ಲಿ ಪಾರದರ್ಶಕವಾಗಿ ನಡೆದುಕೊಂಡು ಹೋಗುತ್ತಿದೆ ಎಂದರು.

ಸಹಕಾರ ಸಂಘದ ಪದಾಧಿಕಾರಿಗಳು ಹಾಗೂ ಸಿಬ್ಬಂದಿ ಸಮರ್ಪಕವಾಗಿ ಸೇವೆ ಸಲ್ಲಿಸಿದರೇ ಜನರಿಗೆ ಹೆಚ್ಚಿನ ರೀತಿಯಲ್ಲಿ ಅನುಕೂಲವಾಗುವ ಜೊತೆಗೆ ಸಹಕಾರ ಸಂಘವು ಉತ್ತಮ ರೀತಿಯಲ್ಲಿ ಬೆಳೆಯಲು ಅನುಕೂಲವಾಗುತ್ತದೆ ಎಂದರು.

ಹಿರಿಯ ಪತ್ರಕರ್ತರಾದ ಶೋಭಾ ಮಳವಳ್ಳಿ ಶ್ರೀವಿಶ್ವಗುರು ಪ್ರಶಸ್ತಿ ಸ್ವೀಕರಿಸಿ ಮಾತನಾಡಿ, ಪತ್ರಿಕೋಧ್ಯಮದಲ್ಲಿ ಹಲವು ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ನನಗೆ ನಮ್ಮ ಊರಿನ ಸಂಘವು ಗುರುತಿಸಿ ಅಭಿನಂದನೆ ಸಲ್ಲಿಸುತ್ತಿರುವುದು ಖುಷಿ ತರಿಸಿದೆ. ಹಲವು ಮಂದಿ ತೆರೆಮರೆಯಲ್ಲಿ ಹಲವು ಸಾಧನೆಗಳನ್ನು ಮಾಡಿರುತ್ತಾರೆ. ಅಂತಹ ಪ್ರತಿಭಾವವಂತರನ್ನು ಗುರುತಿಸಿ ಪ್ರೋತ್ಸಾಹಿಸಬೇಕಿದೆ ಎಂದರು.

ವಿಶ್ವದಲ್ಲಿ ವಿಶ್ವಗುರು ಎನ್ನುವುದು ಬಣ್ಣವಣ್ಣನವರು ಮಾತ್ರ. ಸಮಾನತೆಗಾಗಿ ಶ್ರಮಿಸಿದ ಮಹಾಪುರುಷನಿಂದಾಗಿ ಹೊಸ ಬದಲಾವಣೆ ಕ್ರಾಂತಿಯನ್ನೆ ಕಂಡಿದ್ದೇವೆ. ಅಂತಹ ಮಹಾಪುರುಷರ ಹೆಸರಿನಲ್ಲಿ ಸೊಸೈಟಿ ಆರಂಭಿಸಿರುವುದು ಉತ್ತಮ ಬೆಳವಣಿಗೆ. ಇದೇ ರೀತಿ ಯಶಸ್ವಿಯಾಗಿ ಮುಂದುವರಿಯಲಿ ಎಂದು ಆಶಿಸಿದರು.

ಇದೇ ವೇಳೆ ಪತ್ರಕರ್ತರಾದ ಶೋಭಾ ಮಳವಳ್ಳಿ ಅನಿಕೇತನಾ ಸೇವಾ ಟ್ರಸ್ಟ್ ಅಧ್ಯಕ್ಷ ಕೆ.ವಿ ಮಲ್ಲೇಶ್ ಅವರಿಗೆ ಶ್ರೀ ವಿಶ್ವಗುರು ಪ್ರಶಸ್ತಿ ಹಾಗೂ ಹಲಗೂರು ವೃತ್ತ ನೀರಿಕ್ಷಕ ಬಿ.ಎಸ್ ಶ್ರೀಧರ್, ರಾಷ್ಟ್ರಪ್ರಶಸ್ತಿ ಪುರಸ್ಕೃತರು ಹಾಗೂ ಹುಣಸೂರು ಪದವಿ ಪೂರ್ವ ಕಾಲೇಜು ಉಪನ್ಯಾಸಕ ಎಚ್.ಎನ್.ಗಿರೀಶ್ ಹಾಗೂ ಹಿರಿಯ ಪತ್ರಕರ್ತರಾದ ಮಾದರಹಳ್ಳಿ ರಾಜು ಅವರಿಗೆ ಸಾಧಕ ಪ್ರಶಸ್ತಿಯನ್ನು ನೀಡಿ ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಡಿವೈಎಸ್‌ಪಿ ವಿ.ಕೃಷ್ಣಪ್ಪ, ಅಧ್ಯಕ್ಷ ರಂಗಸ್ವಾಮಿ, ಉಪಾಧ್ಯಕ್ಷ ಸಿದ್ದಲಿಂಗಸ್ವಾಮಿ, ನಿರ್ದೇಶಕರಾದ ಕೃಷ್ಣಶೆಟ್ಟಿ . ಗುರುಪ್ರಸಾದ್ ಕೆವಿಟಿ ಕುಮಾರ್ ಸೇರಿದಂತೆ ಎಲ್ಲಾ ನಿರ್ದೇಶಕರು ಹಾಗೂ ಷೇರುದಾರರು ಇದ್ದರು.