ಪ್ರಾಮಾಣಿಕತೆಯಿಂದ ಸಹಕಾರಿ ಸಂಸ್ಥೆಗಳ ಬೆಳವಣಿಗೆ ಸಾಧ್ಯ

| Published : Dec 27 2024, 12:49 AM IST

ಪ್ರಾಮಾಣಿಕತೆಯಿಂದ ಸಹಕಾರಿ ಸಂಸ್ಥೆಗಳ ಬೆಳವಣಿಗೆ ಸಾಧ್ಯ
Share this Article
  • FB
  • TW
  • Linkdin
  • Email

ಸಾರಾಂಶ

ಕನ್ನಡಪ್ರಭ ವಾರ್ತೆ ನಿಡಗುಂದಿ: ಗ್ರಾಹಕರ ಸಹಕಾರ ಮತ್ತು ಆಡಳಿತ ಮಂಡಳಿ ಶ್ರಮ ಹಾಗೂ ಸಿಬ್ಬಂದಿ ಕೆಲಸದಿಂದಾಗಿ ಸ್ವಾಮಿ ವಿವೇಕಾನಂದ ಸಹಕಾರಿ ಬ್ಯಾಂಕ್‌ ಆರ್ಥಿಕವಾಗಿ ಶಕ್ತಿಯುತವಾಗಿದ್ದು, ₹ ೨ ಕೋಟಿ ವೆಚ್ಚದಲ್ಲಿ ಸ್ವಂತ ಕಟ್ಟಡ ಕಾಮಗಾರಿ ಕೈಗೊಂಡಿದೆ ಎಂದು ಬ್ಯಾಂಕ್ ಅಧ್ಯಕ್ಷ ಸಿದ್ಧಣ್ಣ ನಾಗಠಾಣ ಹೇಳಿದರು.

ಕನ್ನಡಪ್ರಭ ವಾರ್ತೆ ನಿಡಗುಂದಿ: ಗ್ರಾಹಕರ ಸಹಕಾರ ಮತ್ತು ಆಡಳಿತ ಮಂಡಳಿ ಶ್ರಮ ಹಾಗೂ ಸಿಬ್ಬಂದಿ ಕೆಲಸದಿಂದಾಗಿ ಸ್ವಾಮಿ ವಿವೇಕಾನಂದ ಸಹಕಾರಿ ಬ್ಯಾಂಕ್‌ ಆರ್ಥಿಕವಾಗಿ ಶಕ್ತಿಯುತವಾಗಿದ್ದು, ₹ ೨ ಕೋಟಿ ವೆಚ್ಚದಲ್ಲಿ ಸ್ವಂತ ಕಟ್ಟಡ ಕಾಮಗಾರಿ ಕೈಗೊಂಡಿದೆ ಎಂದು ಬ್ಯಾಂಕ್ ಅಧ್ಯಕ್ಷ ಸಿದ್ಧಣ್ಣ ನಾಗಠಾಣ ಹೇಳಿದರು.

ಪಟ್ಟಣದಲ್ಲಿ ಗುರುವಾರ ಆಲಮಟ್ಟಿ ರಸ್ತೆಯಲ್ಲಿನ ಬ್ಯಾಂಕ್ ನಿವೇಶನದಲ್ಲಿ ಸ್ವಂತ ಕಟ್ಟಡ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು. ಬ್ಯಾಂಕುಗಳ ಪ್ರಗತಿಗೆ ಸರ್ವರ ಸಹಕಾರ ಅಗತ್ಯ. ಪ್ರಾಮಾಣಿಕ ಕಾರ್ಯದಿಂದ ನಡೆದರೆ ಸಹಕಾರಿ ಸಂಸ್ಥೆಗಳು ಬೆಳವಣಿಗೆ ಸಾಧ್ಯವಾಗಲಿದೆ ಎನ್ನುವುದಕ್ಕೆ ಸ್ವಾಮಿ ವಿವೇಕಾನಂದ ಸಹಕಾರಿ ಬ್ಯಾಂಕ್ ಸಾಕ್ಷಿ. ಜನರ ಆರ್ಥಿಕ ಮಟ್ಟ ಸುಧಾರಣೆಗೆ ಶ್ರಮಿಸುತ್ತ ಉತ್ತರೋತ್ತರವಾಗಿ ಬೆಳೆಯುತ್ತಿದ್ದು, ತಮ್ಮೆಲ್ಲರ ವಿಶ್ವಾಸಕ್ಕೆ ಬ್ಯಾಂಕ್‌ ಆಡಳಿತ ಮಂಡಳಿ ಋಣಿಯಾಗಿದೆ. ಮುಂಬರುವ ದಿನಗಳಲ್ಲಿ ಸಂಸ್ಥೆ ಮತ್ತಷ್ಟು ಬೆಳವಣಿಗೆ ಕಾರಣಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.ಉಪಾಧ್ಯಕ್ಷ ಬಸವರಾಜ ಮುಚ್ಚಂಡಿ ಮಾತನಾಡಿ, ಗ್ರಾಹಕರ ಕಷ್ಟಗಳನ್ನು ಅರಿತು ತ್ವರಿತ ಸಾಲ ಹಾಗೂ ಪ್ರಾಮಾಣಿಕ ವ್ಯವಹಾರದಿಂದ ಬ್ಯಾಂಕ್ ಸದೃಢವಾಗಿ ಬೆಳೆದಿದೆ. ಅಲ್ಪ ಬಂಡವಾಳದಿಂದ ಆರಂಭವಾದ ಬ್ಯಾಂಕು ಇಂದು ಉಪಶಾಖೆ ತೆರೆದು ತನ್ನ ಸೇವೆ ಹೆಚ್ಚಿಸುವ ಜತೆಗೆ ತನ್ನ ಆರ್ಥಿಕ ಶಕ್ತಿಯನ್ನು ಹೆಚ್ಚಿಸಿಕೊಂಡಿದೆ. ಸದ್ಯ ಸ್ವಂತ ಕಟ್ಟಡ ಕಾಮಗಾರಿ ಕೈಗೊಳ್ಳುವ ಕಾರ್ಯದಿಂದ ಮತ್ತಷ್ಟು ಗ್ರಾಹಕರಿಗೆ ನಂಬಿಕೆ ಹಾಗೂ ವಿಶ್ವಾಸಕ್ಕೆ ಕಾರಣವಾಗಿದೆ. ಆರ್ಥಿಕ ಚಟುವಟಿಕೆಯಲ್ಲಿ ಜನರ ನಂಬಿಕೆ ಮುಖ್ಯ. ಆ ನಂಬಿಕೆ ಪಡೆದು ಸ್ವಾಮಿ ವಿವೇಕಾನಂದ ಸಹಕಾರಿ ಬ್ಯಾಂಕ್‌ ಎತ್ತರಕ್ಕೆ ಬೆಳೆಯುತ್ತಿದೆ ಎಂದರು.ಹಿರೇಮಠದ ಶಂಕ್ರಯ್ಯ ಸ್ವಾಮಿಗಳು ಮಾತನಾಡಿ, ಗ್ರಾಮೀಣ ಮಟ್ಟದಲ್ಲಿ ಜನರ ಆರ್ಥಿಕ ಮಟ್ಟ ಸುಧಾರಣೆಗೆ ಜನ್ಮ ತಾಳಿದ ಸ್ವಾಮಿ ವಿವೇಕಾನಂದ ಸಹಕಾರಿ ಬ್ಯಾಂಕ್ ಆಡಳಿತ ಮಂಡಳಿ ಹಾಗೂ ಗ್ರಾಹಕರ ವಿಶ್ವಾಸದ ಕಾರ್ಯದಲ್ಲಿ ಪ್ರಗತಿ ಸಾಧಿಸಿದೆ. ಪಾರದರ್ಶಕ ಆಡಳಿತ ಹಾಗೂ ಸಿಬ್ಬಂದಿ ಪ್ರಮಾಣಿಕ ಕಾರ್ಯದ ಫಲವಾಗಿ ಸದ್ಯ ಸ್ವಂತ ಕಟ್ಟಡವಾಗಿ ಬ್ಯಾಂಕ್‌ ಬೆಳೆಯಲಿದೆ. ಬರುವ ಮುಂದಿನ ದಿನಗಳಲ್ಲಿ ಮತ್ತಷ್ಟು ಉಪಶಾಖೆ ತೆರೆದು ತನ್ನ ಸೇವೆಯನ್ನು ವಿಸ್ತರಿಸಲಿದೆ ಎಂದು ಹೇಳಿದರು.

ಈ ವೇಳೆ ಸ್ವಾಮಿ ವಿವೇಕಾನಂದ ಸಹಕಾರಿ ಬ್ಯಾಂಕ್‌ ನಿರ್ದೇಶಕ ಮಂಡಳಿ, ಜಿವಿವಿಎಸ್ ಸಮೂಹ ಶಿಕ್ಷಣ ಸಂಸ್ಥೆ ನಿರ್ದೇಶಕ ಡಾ.ಅನುಪ್ ನಾಗಠಾಣ, ಪ್ರಭಾರಿ ವ್ಯವಸ್ಥಾಪಕ ರವೀಂದ್ರ ಕ್ಯಾದಿಗ್ಗೇರಿ, ಬ್ಯಾಂಕ್ ಸರ್ವ ಸದಸ್ಯರು ಹಾಗೂ ಗಣ್ಯರು ಇದ್ದರು.

ಪೋಟೋ೨೬ಎನ್ಡಿಜಿ೧: ನಿಡಗುಂದಿಯ ಆಲಮಟ್ಟಿ ರಸ್ತೆಯಲ್ಲಿ ಸ್ವಾಮಿ ವಿವೇಕಾನಂದ ಸಹಕಾರಿ ಬ್ಯಾಂಕ್‌ನ ಸ್ವಂತ ಕಟ್ಟಡ ಕಾಮಗಾರಿಗೆ ಬ್ಯಾಂಕ್ ಅಧ್ಯಕ್ಷ ಸಿದ್ಧಣ್ಣ ನಾಗಠಾಣ ಭೂಮಿಪೂಜೆ ನೆರವೇರಿಸಿದರು. ಹಿರೇಮಠದ ಶಂಕ್ರಯ್ಯ ಸ್ವಾಮೀಜಿ, ಬ್ಯಾಂಕ್ ಉಪಾಧ್ಯಕ್ಷ ಬಸವರಾಜ ಮುಚ್ಚಂಡಿ ಇತರರಿದ್ದರು.