9 ರಿಂದ ಶ್ರೀ ಪುರುಷೋತ್ತಮಾನಂದಪುರಿ ಶ್ರೀ ಗಳ ಪಟ್ಟಾಭೀಷೇಕ ಮಹೋತ್ಸವ : ಲೋಕೇಶ್‍ಬಾಬು

| Published : Feb 08 2024, 01:35 AM IST

9 ರಿಂದ ಶ್ರೀ ಪುರುಷೋತ್ತಮಾನಂದಪುರಿ ಶ್ರೀ ಗಳ ಪಟ್ಟಾಭೀಷೇಕ ಮಹೋತ್ಸವ : ಲೋಕೇಶ್‍ಬಾಬು
Share this Article
  • FB
  • TW
  • Linkdin
  • Email

ಸಾರಾಂಶ

ಫೆಬ್ರವರಿ 9 ಮತ್ತು 10 ರಂದು ಹೊಸದುರ್ಗ ತಾಲೂಕು ಬ್ರಹ್ಮವಿದ್ಯಾನಗರದಲ್ಲಿರುವ ಭಗೀರಥ ಪೀಠದ ಶ್ರೀ ಗಳಾದ ಡಾ.ಪುರುಷೋತ್ತಮಾನಂದಪುರಿ ಸ್ವಾಮೀಜಿಯ 25ನೇ ವರ್ಷದ ಪಟ್ಟಾಭಿಷೇಕ ರಜತ ಮಹೋತ್ಸವ ಎರಡು ದಿನಗಳ ಕಾಲ ಬ್ರಹ್ಮವಿದ್ಯಾನಗರದಲ್ಲಿ ನಡೆಯಲಿದೆ ಎಂದು ಕಡೂರು ತಾಲೂಕು ಉಪ್ಪಾರ ಸಮಾಜ ಅಧ್ಯಕ್ಷ ಎನ್.ಕೆ.ಲೋಕೇಶ್‍ಬಾಬು ಪ್ರಕಟಿಸಿದರು.

ಕನ್ನಡಪ್ರಭ ವಾರ್ತೆ, ಕಡೂರು

ಬುಧವಾರ ಪಟ್ಟಣದ ಭಗೀರಥ ಸಮಾಜದ ಕಚೇರಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಫೆ.9 ರ ಶುಕ್ರವಾರ ಮುಖ್ಯಮಂತ್ರಿ ಸಿದ್ಧರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ರಜತ ಮಹೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವರು. ನಮ್ಮ ಸಮಾಜದ ಮೀಸಲಾತಿಗೆ ಕುಲಶಾಸ್ರ್ತಅಧ್ಯಯನವನ್ನು ಹಂಪೆ ವಿವಿ ಯ ಡಾ.ಮಿತ್ರ ಅವರಿಂದ ಸರ್ವೆ ನಡೆಸುತ್ತಿದೆ. ಸಂಪೂರ್ಣ ವರದಿ ಕೈಸೇರಿದ ನಂತರ ರಾಜ್ಯ ಸರ್ಕಾರದಿಂದ ಅನುಮೋದನೆ ಮಾಡಿ ಕೇಂದ್ರ ಸರ್ಕಾರಕ್ಕೆ ಶಿಪಾರಸ್ಸು ಮಾಡುವ ಕುರಿತು ಸಮಾಜ ಹಾಗೂ ಗುರುಗಳು ಪ್ರಸ್ತಾಪ ಮಾಡಲಿದ್ದು ವರದಿ ಪರಿಶೀಲನೆ ಬಳಿಕ ಎಸ್‍ಸಿ, ಆಥವಾ ಎಸ್‍.ಟಿ ಮೀಸಲಾತಿ ಕೊಡಿಸಿಕೊಡಲಿದ್ದಾರೆ ಎಂದರು.

ಫೆ.10 ರ ಶನಿವಾರದ ಕಾರ್ಯಕ್ರಮದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ರೇಣುಕಾದೇವಿ ಪಾಲ್ಗೊಳ್ಳಲಿದ್ದಾರೆ ಎಂದು ಅವರು, ಕಡೂರು ತಾಲೂಕಿನ ಸಮಾಜ ಬಂಧುಗಳು ರಜತ ಮಹೋತ್ಸವದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಮನವಿ ಮಾಡಿದರು. .

ಸಮಾಜದ ಹಿರಿಯ ಮುಖಂಡ ಟಿ.ಆರ್.ಲಕ್ಕಪ್ಪ ಮಾತನಾಡಿ ಉಪ್ಪಾರ ಸಮಾಜದ ಏಕೈಕ ಶಾಸಕರಾದ ಪುಟ್ಟರಂಗಶೆಟ್ಟಿ ಕಾರ್ಯಕ್ರಮದ ನೇತೃತ್ವ ವಹಿಸಿ ಮುಖ್ಯಮಂತ್ರಿಗಳಿಗೆ ಸಮಾಜದ ಮೀಸಲಾತಿ ಬಗ್ಗೆ ಮನವರಿಕೆ ಮಾಡಲಿದ್ದಾರೆ. ಈ ಹಿಂದೆ ಬೀರೂರಿನಲ್ಲಿ ನಡೆದ ಉಪ್ಪಾರ ರಾಜ್ಯ ಸಮ್ಮೇಳನದಲ್ಲಿ ಎಸ್‍ಸಿ ಗೆ ಸೇರಿಸಲು ಅಂದಿನಿಂದಲೂ ಹೋರಾಟ ನಡೆಯುತ್ತಲೇ ಇದೆ ಎಂದು ನೆನಪಿಸಿದರು. ಕೇಂದ್ರ ಮತ್ತು ರಾಜ್ಯ ಸರ್ಕಾರ ಉಪ್ಪಾರ ಸಮಾಜಕ್ಕೆ ಮೀಸಲಾತಿ ಕಲ್ಪಿಸುತ್ತಾರೆ ಎಂಬ ಆಶಾಭಾವನೆ ವ್ಯಕ್ತಪಡಿಸಿದರು. ಬರುವ ಫೆ.29 ರಂದು ನವದೆಹಲಿ ರಾಮ್‍ಲೀಲಾ ಮೈದಾನದಲ್ಲಿ ಬೃಹತ್ ಸಮಾವೇಶ ಏರ್ಪಡಿಸಿದ್ದು ಸಮಾಜದ ಬಂಧುಗಳು ಹೆಚ್ಚಿನ ಸಂಖ್ಯೆಯುಲ್ಲಿ ಸ್ವಪ್ರೇರಣೆಯಿಂದ ಬರಬೇಕೆಂದು ಕೋರಿದರು.

ಸುದ್ದಿಗೋಷ್ಠಿಯಲ್ಲಿ ಉಪ್ಪಾರ ಸಮಾಜದ ಮುಖಂಡರಾದ ಸಪ್ತಕೋಟಿ ಧನಂಜಯ್,ಲಕ್ಷ್ಮಣ್,ಚನ್ನಪ್ಪ,ಮಲ್ಲೇಶ್ ಮತ್ತಿತರರು ಇದ್ದರು.

7ಕೆಕೆಡಿಯು1.

ಕಡೂರು ತಾಲೂಕು ಉಪ್ಪಾರ ಸಮಾಜದ ಅಧ್ಯಕ್ಷ ಹಾಗು ಮುಖಂಡರಾದ ಶ್ರೀ ಪುರುಷೋತ್ತಮಾನಂದಪುರಿ ಶ್ರೀಗಳ ಪಟ್ಟಾಭಿಷೇಕ ಮಹೋತ್ಸವ ಆಹ್ವಾನ ಪತ್ರಿಕೆ ಬಿಡುಗಡೆ ಮಾಡಿದರು.