ಕಡೂರುಸತತವಾಗಿ ನಾಲ್ಕು ಭಾರಿ ಪುರಸಭೆ ಅಧ್ಯಕ್ಷ ಗಾದಿ ಅಲಂಕರಿಸಿ ಪಟ್ಟಣದ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸುತ್ತಿರುವ ಕಾಂಗ್ರೆಸ್ ಮುಖಂಡ ಭಂಡಾರಿ ಶ್ರೀನಿವಾಸ್ ಅವರಿಗೆ ರಾಜ್ಯ ಸರಕಾರ ನಿಗಮ ಮಂಡಳಿಯಲ್ಲಿ ಅವಕಾಶ ಕಲ್ಪಿಸಬೇಕು ಎಂದು ಪುರಸಭೆ ಮಾಜಿ ಸದಸ್ಯ ಸೈಯಾದ್ ಯಾಸೀನ್ ಒತ್ತಾಯಿಸಿದರು.
ಪಟ್ಟಣದ ಪ್ರವಾಸಿಮಂದಿರದಲ್ಲಿ ಪುರಸಭೆ ಮಾಜಿ ಸದಸ್ಯ ಸೈಯಾದ್ ಯಾಸೀನ್
ಕನ್ನಡಪ್ರರಭ ವಾರ್ತೆ ಕಡೂರುಸತತವಾಗಿ ನಾಲ್ಕು ಭಾರಿ ಪುರಸಭೆ ಅಧ್ಯಕ್ಷ ಗಾದಿ ಅಲಂಕರಿಸಿ ಪಟ್ಟಣದ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸುತ್ತಿರುವ ಕಾಂಗ್ರೆಸ್ ಮುಖಂಡ ಭಂಡಾರಿ ಶ್ರೀನಿವಾಸ್ ಅವರಿಗೆ ರಾಜ್ಯ ಸರಕಾರ ನಿಗಮ ಮಂಡಳಿಯಲ್ಲಿ ಅವಕಾಶ ಕಲ್ಪಿಸಬೇಕು ಎಂದು ಪುರಸಭೆ ಮಾಜಿ ಸದಸ್ಯ ಸೈಯಾದ್ ಯಾಸೀನ್ ಒತ್ತಾಯಿಸಿದರು.
ಪಟ್ಟಣದ ಪ್ರವಾಸಿಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ ಕಳೆದ ವಿಧಾನಸಭಾ ಚುನಾವಣೆಯಲ್ಲಿ ನಿರ್ಣಾಯಕ ಪಾತ್ರ ವಹಿಸಿ ಎಲ್ಲ ಸಮುದಾಯಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ನಮ್ಮ ಪಕ್ಷದ ಅಭ್ಯರ್ಥಿ ಕೆ.ಎಸ್. ಆನಂದ್ ರವರ ಗೆಲುವಿಗೆ ಅಹರ್ನಿಶಿ ದುಡಿದ ಭಂಡಾರಿ ಶ್ರೀನಿವಾಸ್ ಅವರಿಗೆ ಸರ್ಕಾರದ ಯಾವುದಾದರೂ ಒಂದು ನಿಗಮ ಮಂಡಳಿಯಲ್ಲಿ ಅವಕಾಶ ಕಲ್ಪಿಸಿಕೊಡಬೇಕು ಎಂದು ಮನವಿ ಮಾಡಿದರು.1994ರಲ್ಲಿ ಅಂದಿನ ಶಾಸಕ ಕೆ.ಎಂ.ಕೃಷ್ಣಮೂರ್ತಿ ಅವರಿಗೆ ಆಹಾರ ನಿಗಮ ಮಂಡಳಿ ಅಧ್ಯಕ್ಷ ಸ್ಥಾನ ಸಿಕ್ಕಿದ್ದು ಬಿಟ್ಟರೆ ಈವರೆಗೆ ಯಾರಿಗೂ ಮರು ಅವಕಾಶ ಸಿಕ್ಕಿಲ್ಲ. ಅಧಿಕಾರ ಮತ್ತು ಅವಕಾಶಗಳಲ್ಲಿ ಪಕ್ಷದ ಸಂಘಟನೆಗೆ ಹೆಚ್ಚಿನ ಒತ್ತು ನೀಡುವ ಕಾರ್ಯಕರ್ತರಿಗೆ ಪಕ್ಷದ ಹೈಕಮಾಂಡ್ ನಿರ್ಧರಿಸಿರುವುದು ಪಕ್ಷದ ಸಂಘಟನೆಯಲ್ಲಿ ತೊಡಗಿಸಿಕೊಳ್ಳುವ ಕಾರ್ಯಕರ್ತರಿಗೆ ಉತ್ತೇಜಿಸಲು ಸಹಕಾರಿ ಎಂದರು.
ಹಿರಿಯ ಮುಖಂಡ ಹಳೇಪೇಟೆ ಕೆ.ಎಸ್. ತಿಪ್ಪೇಶ್ ಮಾತನಾಡಿ ಮುಂಬರುವ ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿ ಪಕ್ಷವನ್ನು ಅಧಿಕಾರಕ್ಕೆ ತರುವ ವಿಚಾರದಲ್ಲಿ ಎಲ್ಲ ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡಲು ಭಂಡಾರಿ ಶ್ರೀನಿವಾಸ್ ಅವರಿಗೆ ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ ಶಾಸಕ ಆನಂದ್ ಶ್ರಮಿಸಬೇಕೆಂದು ಮನವಿ ಮಾಡಿದರು.ಕೆ.ಎಚ್. ಶಂಕರ್ ಮಾತನಾಡಿ, ಕಡೂರು ಕ್ಷೇತ್ರ ಅಸ್ತಿತ್ವಕ್ಕೆ ಬಂದಾಗಿನಿಂದ ಈವರೆಗೂ ಸಚಿವ ಸ್ಥಾನ ಕಂಡಿಲ್ಲ. ಯುವ ಕಾಂಗ್ರೆಸ್ ನಿಂದ ಗುರ್ತಿಸಿಕೊಂಡು ಅವಧಿಯಲ್ಲೇ ಶಾಸಕರಾಗಿ ಆಯ್ಕೆಯಾಗಿ ಅಭಿವೃದ್ಧಿಗೆ ಪೂರಕವಾಗಿ ಶ್ರಮಿಸುತ್ತಿರುವ ಹಿಂದುಳಿದ ವರ್ಗಗಳಿಗೆ ಸೇರಿದ ಶಾಸಕ ಆನಂದ್ ಗೆ ಸಂಪುಟದಲ್ಲಿ ಸ್ಥಾನ ದೊರಕುವ ಆಶಾಭಾವನೆ ವ್ಯಕ್ತವಾಗಿರುವುದು ಕ್ಷೇತ್ರಕ್ಕೆ ಹೆಮ್ಮೆಯ ಸಂಗತಿ. ಭಂಡಾರಿ ಶ್ರೀನಿವಾಸ್ ಸ್ಥಾನ ಲಭಿಸಿದರೆ ಕ್ಷೇತ್ರದ ಅಭಿವೃದ್ಧಿಗೆ ಹೆಚ್ಚು ವರದಾನ ಎಂದರು.
ಈ ಸಂದರ್ಭದಲ್ಲಿ ಪುರಸಭೆ ಮಾಜಿ ಸದಸ್ಯ ಮರುಗುದ್ದಿ ಮನು, ಕಂಸಾಗರ ರೇವಣ್ಣ, ಶಂಕರ್, ರಾಮು, ಲೋಕೇಶಪ್ಪ, ಚೇತನ್, ವಾಸು, ಚಿನ್ಮಯ್, ಅನ್ವರ್, ಮುಬಾರಕ್, ನಾಗರಾಜು, ಅನ್ಸರ್, ಸಲೀಂ ಮತ್ತಿತರಿದ್ದರು. 30ಕೆಕೆಡಿಯು3. ಕಡೂರು ಪಟ್ಟಣದಲ್ಲಿ ಕಾಂಗ್ರೆಸ್ ಮುಖಂಡ ಭಂಡಾರಿ ಶ್ರೀನಿವಾಸ್ ರವರಿಗೆ ನಿಗಮ ಮಂಡಳಿಯಲ್ಲಿ ಅವಕಾಶ ಕಲ್ಪಿಸಿಕೊಡುವಂತೆ ಪಕ್ಷದ ಕಾರ್ಯಕರ್ತರು ಮುಖಂಡರು ಆಗ್ರಹಿಸಿದರು.