ಸಾರಾಂಶ
ಕಳೆದ 7 ವರ್ಷಗಳಿಂದ ಅತ್ಯಂತ ಕಡಿಮೆ ಬಾಡಿಗೆ ದರದಲ್ಲಿ ಕಾರು ಓಡಿಸಲಾಗುತ್ತಿದೆ. ಇಂದಿನ ದುಬಾರಿ ದಿನಗಳಲ್ಲಿ ಈ ಬಾಡಿಗೆ ಚಾಲಕರ, ಇಂಧನ, ಸರ್ವಿಸ್‌ಗಾಗಿ ಯಾವುದಕ್ಕೂ ಸಾಲುವುದಿಲ್ಲ ಎಂದು ಸಾಂಕೇತಿಕ ಪ್ರತಿಭಟನೆ ನಡೆಸಿದರು
ಕನ್ನಡಪ್ರಭ ವಾರ್ತೆ ಹುಬ್ಬಳ್ಳಿ
ಮಹಾನಗರ ಪಾಲಿಕೆಯಲ್ಲಿ ಕಚೇರಿ ಕೆಲಸಕ್ಕಾಗಿ ಬಾಡಿಗೆ ಓಡಿಸುತ್ತಿರುವ ಕಾರುಗಳ ಬಾಡಿಗೆ ದರ ಹೆಚ್ಚಿಸುವಂತೆ ಆಗ್ರಹಿಸಿ ಚಾಲಕರು, ಮಾಲೀಕರು ಮಂಗಳವಾರ ಸಾಂಕೇತಿಕ ಮುಷ್ಕರ ನಡೆಸಿದರು.ಕಳೆದ 7 ವರ್ಷಗಳಿಂದ ಅತ್ಯಂತ ಕಡಿಮೆ ಬಾಡಿಗೆ ದರದಲ್ಲಿ (ತಿಂಗಳಿಗೆ ₹23,880) ಕಾರು ಓಡಿಸಲಾಗುತ್ತಿದೆ. ಆದರೆ, ಇಂದಿನ ದುಬಾರಿ ದಿನಗಳಲ್ಲಿ ಈ ಬಾಡಿಗೆ ಚಾಲಕರ, ಇಂಧನ, ಸರ್ವಿಸ್‌ಗಾಗಿ ಯಾವುದಕ್ಕೂ ಸಾಲುವುದಿಲ್ಲ.
ಸರಕಾರ 2022ರಲ್ಲಿಯೇ ನಾನ್ ಎಸಿ ಕಾರ್ ₹35 ಸಾವಿರ ಹಾಗೂ ಎಸಿ ಸಹಿತ ಕಾರ್ ತಿಂಗಳಿಗೆ ₹40 ಸಾವಿರಕ್ಕೆ ಹೆಚ್ಚಿಸಿ ದರ ನಿಗದಿಪಡಿಸಿದೆ. ಇದನ್ನು ಈ ವರೆಗೂ ಅನುಸರಿಸಲಾಗಿಲ್ಲ. ಮುಂದಿನ ದಿನಗಳಲ್ಲಿ ಬಾಡಿಗೆ ದರ ಹೆಚ್ಚಿಸಬೇಕು ಎಂದು ಧಾರವಾಡ ಜಿಲ್ಲಾ ವಾಣಿಜ್ಯ ವಾಹನಗಳ ಮಾಲೀಕರ, ಚಾಲಕರ ಅಭಿವೃದ್ದಿ ಸಂಘದ ಪದಾಧಿಕಾರಿಗಳು, ಚಾಲಕರು ಆಗ್ರಹಿಸಿದರು.ಸಂಘಧ ಅಧ್ಯಕ್ಷ ಪ್ರೇಮನಾಥ ಚಿಕ್ಕತುಂಬಳ, ಬಸಪ್ಪ ದೊಡ್ಡಮನಿ, ನಾಗರಾಜ ಮಾದರ, ಮಂಜುನಾಥ ಶಿಂಪಿ, ರಾಜೇಶ ಯರಮಸಾಳ, ರಾಖೇಶ ಕುದರಿ, ಪ್ರಸಾದ ಪೆರೂರ, ವೆಂಕಟೇಶ ಗುಳ್ಳಣ್ಣವರ, ಪ್ರಭುಗೌಡ ಪಾಟೀಲ, ಶಿರಾಜುದ್ದೀನ ಕುಡಚಿವಾಲೆ, ಬಸವರಾಜ ಕಿತ್ತೂರ, ಸಮುಂತ ಪತ್ತಾರ ಸೇರಿದಂತೆ ಹಲವರು ಇದ್ದರು.