ಸಾರಾಂಶ
ಬೆಳಗಾವಿ ಮಹಾನಗರ ಪಾಲಿಕೆ ಆಯುಕ್ತ ಅಶೋಕ ದುಡದುಂಟಿ ಬೆಳ್ಳಬೆಳಗ್ಗೆ ನಗರದಲ್ಲಿ ಪ್ರದಕ್ಷಣೆ ಹಾಕುವ ಮೂಲಕ ಸ್ವಚ್ಛತಾ ಕಾರ್ಯ ಪರಿಶೀಲಿಸುವ ಜೊತೆಗೆ ಸ್ವತಃ ತಾವೇ ಖುದ್ದಾಗಿ ಫಾಗಿಂಗ್ ಮಾಡುವ ಮೂಲಕ ಗಮನ ಸೆಳೆದಿದ್ದಾರೆ.
ಕನ್ನಡಪ್ರಭ ವಾರ್ತೆ ಬೆಳಗಾವಿ
ಬೆಳಗಾವಿ ಮಹಾನಗರ ಪಾಲಿಕೆ ಆಯುಕ್ತ ಅಶೋಕ ದುಡದುಂಟಿ ಬೆಳ್ಳಬೆಳಗ್ಗೆ ನಗರದಲ್ಲಿ ಪ್ರದಕ್ಷಣೆ ಹಾಕುವ ಮೂಲಕ ಸ್ವಚ್ಛತಾ ಕಾರ್ಯ ಪರಿಶೀಲಿಸುವ ಜೊತೆಗೆ ಸ್ವತಃ ತಾವೇ ಖುದ್ದಾಗಿ ಫಾಗಿಂಗ್ ಮಾಡುವ ಮೂಲಕ ಗಮನ ಸೆಳೆದಿದ್ದಾರೆ.ಮಳೆಗಾಲ ಆರಂಭವಾಗಿರುವುದರಿಂದ ಸೊಳ್ಳೆಗಳ ಕಾಟ ವಿಪರೀತವಾಗಿ ಹೆಚ್ಚಳವಾಗಿದೆ. ಇದರ ಜೊತೆಗೆ ಸಾಂಕ್ರಾಮಿಕ ರೋಗಗಳು ಹರಡುತ್ತಿವೆ. ಸಾಂಕ್ರಾಮಿಕ ರೋಗ ತಡೆಗೆ ಪಾಲಿಕೆ ವತಿಯಿಂದ ಸಿಬ್ಬಂದಿ ಫಾಗಿಂಗ್ ಮಾಡುತ್ತಿದ್ದಾರೆ. ಫಾಗಿಂಗ್ ಕೆಲಸ ಹೇಗೆ ನಡೆಯುತ್ತಿದೆ ಎಂಬುದನ್ನು ತಿಳಿಯಲು ಪಾಲಿಕೆ ಆಯುಕ್ತ ಅಶೋಕ ದುಡಗುಂಟಿ ಗುರುವಾರ ಅನಿರೀಕ್ಷಿತವಾಗಿ ಅನಗೋಳ ಬೀಟ್ ಕಚೇರಿಗೆ ಭೇಟಿ ನೀಡಿ, ಪೌರ ಕಾರ್ಮಿಕರ ಆನ್‌ಲೈನ್ ಹಾಗೂ ಆಪ್ ಲೈನ್ ಬಯೋಮೆಟ್ರಿಕ್ ಹಾಜರಾತಿಯನ್ನು ಖುದ್ದಾಗಿ ಪರಿಶೀಲಿಸಿದರು. ನಾಥ ಪೈ ಸರ್ಕಲ್‌ಗೆ ಭೇಟಿ ನೀಡಿ ಸ್ವಚ್ಛತಾ ಕಾರ್ಯವನ್ನು ಪರಿಶೀಲಿಸಿದ ಬಳಿಕ ಇಂದಿರಾ ಕ್ಯಾಂಡೀನ್ ಗೆ ಭೇಟಿ ನೀಡಿ, ಆಹಾರ ಗುಣಮಟ್ಟವನ್ನು ಪರಿಶೀಲಿಸಿದರು. ಕಪಿಲೇಶ್ವರ ದೇವಸ್ಥಾನದ ಹತ್ತಿರ ಬಂದು ಧೂಮಿಕರನ ಯಂತ್ರವನ್ನು ಪರಿಶೀಲಿಸಿ ಸ್ವತಃ ಖುದ್ದಾಗಿ ತಾವೇ ಫಾಗಿಂಗ್ ಮಾಡಿದರು.