ಸಾರಾಂಶ
ಹು-ಧಾ ಮಹಾನಗರ ಪಾಲಿಕೆ ಆಯುಕ್ತರಾಗಿ ಸೇವೆ ಸಲ್ಲಿಸುತ್ತಿರುವ ಡಾ. ಈಶ್ವರ ಉಳ್ಳಾಗಡ್ಡಿ ಅವರನ್ನು ಬೇರಡೆ ನಿಯುಕ್ತಿಗೊಳಿಸಿ ಆ ಸ್ಥಾನಕ್ಕೆ ಅನುಭವಿ ಐಎಎಸ್ ಅಧಿಕಾರಿಯೋರ್ವರನ್ನು ನೇಮಕ ಮಾಡುವಂತೆ ಒತ್ತಾಯಿಸಿ ಪಾಲಿಕೆ ಸದಸ್ಯ ಎಂ.ಎಂ. ಭದ್ರಾಪುರ ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದಾರೆ.
ಕನ್ನಡಪ್ರಭ ವಾರ್ತೆ ಹುಬ್ಬಳ್ಳಿ
ಹು-ಧಾ ಮಹಾನಗರ ಪಾಲಿಕೆ ಆಯುಕ್ತರಾಗಿ ಸೇವೆ ಸಲ್ಲಿಸುತ್ತಿರುವ ಡಾ. ಈಶ್ವರ ಉಳ್ಳಾಗಡ್ಡಿ ಅವರನ್ನು ಬೇರಡೆ ನಿಯುಕ್ತಿಗೊಳಿಸಿ ಆ ಸ್ಥಾನಕ್ಕೆ ಅನುಭವಿ ಐಎಎಸ್ ಅಧಿಕಾರಿಯೋರ್ವರನ್ನು ನೇಮಕ ಮಾಡುವಂತೆ ಒತ್ತಾಯಿಸಿ ಪಾಲಿಕೆ ಸದಸ್ಯ ಎಂ.ಎಂ. ಭದ್ರಾಪುರ ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದಾರೆ.ಹು-ಧಾ ಮಹಾನಗರ ಪಾಲಿಕೆಯಲ್ಲಿ ಈ ಹಿಂದೆ ಆಯುಕ್ತರಾಗಿ ಕಾರ್ಯನಿರ್ವಹಿಸುತ್ತಿದ್ದ ಗೋಪಾಲಕೃಷ್ಣ ಅವರು ವರ್ಗಾವಣೆಯಾದ ನಂತರ ಈ ಹುದ್ದೆಗೆ ಆಯುಕ್ತರಾಗಿ ಡಾ. ಈಶ್ವರ ಉಳ್ಳಾಗಡ್ಡಿ ಅಧಿಕಾರ ವಹಿಸಿಕೊಂಡ ನಂತರ ಪಾಲಿಕೆ ಸದಸ್ಯರು ವಾರ್ಡ್‌ಗಳಲ್ಲಿನ ಸಮಸ್ಯೆಗಳನ್ನು ಹೊತ್ತು ಅವರ ಬಳಿ ಹೋದರೆ ಕರ್ತವ್ಯದಲ್ಲಿ ನಿಷ್ಕಾಳಜಿ ತೋರುತ್ತಿದ್ದಾರೆ. ಬರಿ ನೋಡೋಣ, ಮಾಡೋಣ ಎನ್ನುತ್ತಾರೆ. ಇಂತಹ ಧೋರಣೆಯಿಂದ ಮಹಾನಗರ ಪಾಲಿಕೆಯ ಅಭಿವೃದ್ಧಿ ಕಾಮಗಾರಿಗಳು ಹಿಂದೆ ಬೀಳುತ್ತಿವೆ. ಕಾರಣ ಹು-ಧಾ ಮಹಾನಗರ ಪಾಲಿಕೆಯಲ್ಲಿ ಖಾಲಿ ಇರುವ ಜಂಟಿ ಆಯುಕ್ತರ ಹುದ್ದೆಗೆ ಡಾ. ಈಶ್ವರ ಉಳ್ಳಾಗಡ್ಡಿ ಅವರನ್ನು ನಿಯುಕ್ತಿಗೊಳಿಸಿ ಪಾಲಿಕೆ ಆಯುಕ್ತರ ಹುದ್ದೆಗೆ ಅನುಭವ ಇರುವ ಐಎಎಸ್ ಗ್ರೇಡ್ ಅಧಿಕಾರಿಯನ್ನು ನಿಯುಕ್ತಿಗೊಳಿಸುವಂತೆ ಪಾಲಿಕೆ ಸದಸ್ಯ ಎಂ.ಎಂ. ಭದ್ರಾಪುರ ಮುಖ್ಯಮಂತ್ರಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.