ಸಾರಾಂಶ
ದಾವಣಗೆರೆ: ದಾವಣಗೆರೆ ಜಿಲ್ಲಾ ವರದಿಗಾರರ ಕೂಟದಿಂದ ಆಯೋಜಿಸಿರುವ ಪಿಪಿಎಲ್-3 ಕ್ರಿಕೆಟ್ ಪಂದ್ಯಾವಳಿಗೆ ಇಲ್ಲಿನ ಜಿಲ್ಲಾ ಪೊಲೀಸ್ ಕವಾಯತು ಮೈದಾನದಲ್ಲಿ ಶನಿವಾರ ಚಾಲನೆ ನೀಡಲಾಯಿತು.
ದಾವಣಗೆರೆ: ದಾವಣಗೆರೆ ಜಿಲ್ಲಾ ವರದಿಗಾರರ ಕೂಟದಿಂದ ಆಯೋಜಿಸಿರುವ ಪಿಪಿಎಲ್-3 ಕ್ರಿಕೆಟ್ ಪಂದ್ಯಾವಳಿಗೆ ಇಲ್ಲಿನ ಜಿಲ್ಲಾ ಪೊಲೀಸ್ ಕವಾಯತು ಮೈದಾನದಲ್ಲಿ ಶನಿವಾರ ಚಾಲನೆ ನೀಡಲಾಯಿತು.
ಕೂಟದಿಂದ ಚಾಲುಕ್ಯ, ಹೊಯ್ಸಳ, ಚಾಲುಕ್ಯ, ಕದಂಬ ಎಂಬ ನಾಲ್ಕು ತಂಡಗಳನ್ನು ಮಾಡಲಾಗಿತ್ತು. ಪಂದ್ಯಾವಳಿಗೆ ವರದಿಗಾರರ ಕೂಟದ ಸಂಸ್ಥಾಪಕ ಅಧ್ಯಕ್ಷರಾದ ಕೆ.ಏಕಾಂತಪ್ಪ ಬ್ಯಾಟಿಂಗ್ ಮಾಡುವ ಮೂಲಕ ಪಂದ್ಯಾವಳಿಗೆ ಚಾಲನೆ ನೀಡಿ ಮಾತನಾಡಿ, ಎಲ್ಲರೂ ನಮ್ಮ ಕೂಟದ ಸದಸ್ಯರುಗಳೇ ಇರುವುದರಿಂದ ಎಲ್ಲರೂ ಸಂತೋಷದಿಂದ, ಸ್ಪರ್ಧಾತ್ಮಕವಾಗಿ ಆಟವನ್ನು ಆಡಿರಿ. ವೈಷಮ್ಯ ಬೇಡ ಜಿದ್ದಿನಿಂದ ಆಟವನ್ನು ಆಡಿರಿ ಎಂದು ಶುಭ ಕೋರಿದರು. ಜಿಲ್ಲಾ ವರದಿಗಾರರ ಕೂಟದ ಅಧ್ಯಕ್ಷ ನಾಗರಾಜ ಎಸ್.ಬಡದಾಳ್ ಮಾತನಾಡಿ, ಕಳೆದ ಮೂರು ವರ್ಷಗಳಿಂದ ನಮ್ಮ ವರದಿಗಾರರ ಕೂಟದಿಂದ ಕ್ರಿಕೆಟ್ ಪಂದ್ಯಾವಳಿ ಆಯೋಜಿಸಿಕೊಂಡು ಬಂದಿದ್ದೇವೆ. ಈ ಬಾರಿ ನಾಲ್ಕು ರಾಜಮನೆತನಗಳ ಹೆಸರು ಇರುವುದರಿಂದ ಕಿಚ್ಚು ಸ್ವಲ್ಪ ಜಾಸ್ತಿ ಇದೆ ಎಂದ ಅವರು, ಈ ಬಾರಿ ಕಪ್‌ಗಳ ಜೊತೆಗೆ ನಗದು ಬಹುಮಾನವನ್ನು ಸಹಾ ನೀಡಲಾಗುತ್ತಿದೆ ಎಂದು ಕ್ರೀಡಾಪಟುಗಳಿಗೆ ಶುಭ ಕೋರಿದರು. ಮಾಜಿ ಅಧ್ಯಕ್ಷ ಮಲ್ಲಿಕಾರ್ಜುನ ಕಬ್ಬೂರು, ಮಾಜಿ ಅಧ್ಯಕ್ಷ ಬಸವರಾಜ ದೊಡ್ಡಮನಿ ಮಾತನಾಡಿದರು. ಪೂರ್ವ ವಲಯ ಐಜಿಪಿ ರಮೇಶ್ ಬಾನೋಟ್, ಪೊಲೀಸ್ ಅಧೀಕ್ಷಕರಾದ ಉಮಾ ಪ್ರಶಾಂತ್, ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ವಿಜಯಕುಮಾರ ಎಂ.ಸಂತೋಷ, ಜಿ.ಮಂಜುನಾಥ ವಿವಿಧ ಅಧಿಕಾರಿ ವರ್ಗದವರು ಪಂದ್ಯಾವಳಿ ವೀಕ್ಷಣೆ ಮಾಡಿ ಕ್ರೀಡಾಪಟುಗಳಿಗೆ ಶುಭಾಷಯ ಹಾರೈಸಿದರು.ಈ ಕ್ರೀಡಾಕೂಟದಲ್ಲಿ ಮಹಿಳೆಯರೂ ಸೇರಿದಂತೆ ಹಿರಿಯ ಪತ್ರಕರ್ತರು, ಕಿರಿಯ ಪತ್ರಕರ್ತರು, ಪೊಲೀಸ್ ಇಲಾಖೆ ಸಿಬ್ಬಂದಿ ಭಾಗವಹಿಸಿದ್ದರು.