ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಪಕ್ಷದ 47ನೇ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮ

ಕನ್ನಡಪ್ರಭ ವಾರ್ತೆ, ಚಾಮರಾಜನಗರ

ಬಿಜೆಪಿಯು ದೇಶದಲ್ಲಿ ಅಧಿಕಾರಕ್ಕೆ ಬಂದಾಗಲೆಲ್ಲ ದೇಶವೇ ಮೊದಲು ಎಂಬ ಧ್ಯೇಯವಾಕ್ಯದೊಂದಿಗೆ ಕೆಲಸ ಮಾಡುತ್ತಿದ್ದರೆ, ಕಾಂಗ್ರೆಸ್ ದೇಶದಲ್ಲಿ ಅಧಿಕಾರ ಮಾಡಿರುವಾಗಲೆಲ್ಲ ಬರೀ ಭ್ರಷ್ಟಾಚಾರ, ಲೂಟಿ ಮಾಡಿ ಎಂದು ಪಕ್ಷದ ಜಿಲ್ಲಾಧ್ಯಕ್ಷ ಸಿ.ಎಸ್.ವಿರಂಜನ್ ಕುಮಾರ್ ಆರೋಪಿಸಿದರು.

ನಗರದ ರಾಮಸಮುದ್ರದ ಕುಳುಮೆ ರಸ್ತೆಯಲ್ಲಿರುವ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಪಕ್ಷದ 47ನೇ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ, ಪುಷ್ಪಾರ್ಚನೆ ಮಾಡಿ ಮಾತನಾಡಿದರು.

ನಮ್ಮ ಪಕ್ಷದ ನಾಯಕರು ಪ್ರಾಣತ್ಯಾಗ ಮಾಡಿದ ಪ್ರತಿಫಲದಿಂದ ದೇಶಕ್ಕೆ ಸ್ವಾತಂತ್ರ್ಯ ಬಂತೆಂದು ಕಾಂಗ್ರೆಸ್‌ನವರು ಹೇಳುತ್ತಾರೆ. ಅವರು ದೇಶದಲ್ಲಿ ಅನುಭವಿಸಿದ್ದೇ ಜಾಸ್ತಿ. ಅವರು ಕಳೆದುಕೊಂಡಿದ್ದು ಏನು ಇಲ್ಲ. ಬರೀ ಭ್ರಷ್ಟಾಚಾರ, ಲೂಟಿ ಮಾಡಿದ್ದಾರೆ ಎಂದು ದೂರಿದರು.


ದೇಶದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಾಗ ಸಮಗ್ರತೆ, ಐಕ್ಯತೆಗೆ, ದೇಶದ ವಿಚಾರಗಳಿಗೆ ಹೆಚ್ಚಿನ ಒತ್ತು ನೀಡಿ ಆಡಳಿತ ಮಾಡಿದ್ದು ನೋಡಬಹುದಾಗಿದೆ. ಹಾಗಾಗಿ ಬಿಜೆಪಿ ಮೇಲೆ ಜನ ವಿಶ್ವಾಸವಿಟ್ಟಿದ್ದಾರೆ. ಬಿಜೆಪಿ ಅಧಿಕಾರ ಬಂದರೆ ದೇಶ ಅಭಿವೃದ್ಧಿ ಆಗುತ್ತದೆ ಎಂದು ಜನರು ಬಯಸಿದ್ದಾರೆ. ಬಿಜೆಪಿ 47 ವರ್ಷಗಳಲ್ಲಿ ಅನೇಕ ಸಾಧನೆ ಮಾಡಿದೆ. ಬಿಜೆಪಿ ಇತಿಹಾಸವನ್ನು ಪಕ್ಷದ ಮುಖಂಡರು, ಕಾರ್ಯಕರ್ತರು ಮೊದಲು ತಿಳಿದುಕೊಳ್ಳಬೇಕು ಎಂದು ಸಲಹೆ ನೀಡಿದರು.

ಬಿಜೆಪಿ 1980 ಏ.6ರಂದು ಸ್ಥಾಪನೆಯಾಗಿದೆ. ಭಾರತದ ಪ್ರಮುಖ ಬಲಪಂಥೀಯ ರಾಜಕೀಯ ಪಕ್ಷವಾಗಿ ಕೆಲಸ ಮಾಡುತ್ತಿದೆ. 1951ರಲ್ಲಿ ಶ್ಯಾಮ ಪ್ರಸಾದ್ ಮುಖರ್ಜಿ ಸ್ಥಾಪಿಸಿದ ಭಾರತೀಯ ಜನಸಂಘದ ಉತ್ತರಾಧಿಕಾರಿಯಾಗಿ ಜನತಾ ಪಕ್ಷದಿಂದ ಬೇರ್ಪಟ್ಟು ಅಟಲ್ ಬಿಹಾರಿ ವಾಜಪೇಯಿ ಮತ್ತು ಲಾಲ್ ಕೃಷ್ಣ ಅಡ್ವಾಣಿ ನೇತೃತ್ವದಲ್ಲಿ ಬಿಜೆಪಿ ಅಸ್ತಿತ್ವಕ್ಕೆ ಬಂದಿತು ಎಂದು ಹೇಳಿದರು.

ಬಿಜೆಪಿ ಸಂಸ್ಥಾಪನಾ ದಿನಾಚರಣೆ ಸಹ ಸಂಯೋಜಕ ಕುಲಗಾಣ ಶಾಂತಮೂರ್ತಿ ಮಾತನಾಡಿ, ದ್ವಿಸದಸ್ಯತ್ವ'''''''''''''''' ವಿವಾದದ ನಂತರ, ಮಾಜಿ ಜನಸಂಘದ ನಾಯಕರು ಹೊಸ ಪಕ್ಷವಾಗಿ ಬಿಜೆಪಿಯನ್ನು ಸ್ಥಾಪಿಸಿದರು. ಅಟಲ್ ಬಿಹಾರಿ ವಾಜಪೇಯಿ ಮೊದಲ ಅಧ್ಯಕ್ಷರಾದರು. 1984 ರ ಲೋಕಸಭಾ ಚುನಾವಣೆಯಲ್ಲಿ ಪಕ್ಷ ಕೇವಲ 2 ಸ್ಥಾನಗಳನ್ನು ಗೆದ್ದಿತು, ಆದರೆ ಹಿಂದುತ್ವ ಮತ್ತು ಸಾಂಸ್ಕೃತಿಕ ರಾಷ್ಟ್ರೀಯತೆಯ ಸಿದ್ಧಾಂತವನ್ನು ಬೆಳೆಸಿಕೊಂಡಿತು. ರಾಮ ಜನ್ಮಭೂಮಿ ಆಂದೋಲನ ಮತ್ತು ಲಾಲ್ ಕೃಷ್ಣ ಅಡ್ವಾಣಿಯವರ ರಥಯಾತ್ರೆಯು ಪಕ್ಷವನ್ನು ಮುಖ್ಯವಾಹಿನಿಗೆ ತಂದಿತು. 1996 ರಲ್ಲಿ ವಾಜಪೇಯಿ ಮೊದಲ ಬಾರಿಗೆ ಪ್ರಧಾನಿಯಾದರು. ವಾಜಪೇಯಿ ನೇತೃತ್ವದಲ್ಲಿ ಬಿಜೆಪಿ ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ ಸರ್ಕಾರವು ಪೂರ್ಣ ಅವಧಿಗೆ ಆಡಳಿತ ನಡೆಸಿದ ಮೊದಲ ಕಾಂಗ್ರೆಸ್ಸೇತರ ಸರ್ಕಾರವಾಯಿತು ಎಂದು ಹೇಳಿದರು.

ಓಬಿಸಿ ಮೋರ್ಚಾದ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯ ನೂರೊಂದುಶೆಟ್ಟಿ ಮಾತನಾಡಿ, 2014ರಲ್ಲಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಬಿಜೆಪಿ ಸ್ಪಷ್ಟ ಬಹುಮತ ಪಡೆದು ಅಧಿಕಾರಕ್ಕೆ ಬಂದಿತು. 2019ರಲ್ಲೂ ಇದು ಪುನರಾವರ್ತನೆಯಾಯಿತು. ಪ್ರಸ್ತುತ, ಬಿಜೆಪಿ ವಿಶ್ವದ ಅತಿದೊಡ್ಡ ರಾಜಕೀಯ ಪಕ್ಷವಾಗಿ ಗುರುತಿಸಿಕೊಂಡಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಕೇಂದ್ರ ಪರಿಹಾರ ಸಮಿತಿ ಮಾಜಿ ಅಧ್ಯಕ್ಷ ಎಂ. ರಾಮಚಂದ್ರ, ರಾಜ್ಯ ಕಾರ್ಯಕಾರಿಣಿ ಸದಸ್ಯ ಡಾ.ಎ.ಆರ್. ಬಾಬು, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಪಿ. ವೃಷಬೇಂದ್ರಪ್ಪ. ಮೂಡ್ನಾಕೂಡು ಪ್ರಕಾಶ್. ಹೂನ್ನೂರು ಮಹದೇವಸ್ವಾಮಿ, ಮಂಡಲ ಅಧ್ಯಕ್ಷ ಕಾಡಳ್ಳಿ ಕುಮಾರ್. ನಗರ ಮಂಡಲ ಅಧ್ಯಕ್ಷ ಶಿವರಾಜ್, ಸಾಹಿತಿ ಕೋಡಿ ಉಗನೆ ಮಂಜು, ಜಿಲ್ಲಾ ಕಾರ್ಯದರ್ಶಿ ನಟರಾಜು, ಯುವ ಮೋರ್ಚಾ ಜಿಲ್ಲಾಧ್ಯಕ್ಷ ಸೂರ್ಯಕುಮಾರ್, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಆನಂದ್ ಭಗಿರಥ, ಪುರುಷೋತ್ತಮ್, ರಾಮಸಮುದ್ರ ಶಿವಣ್ಣ, ಸಾಗಡೆ ಗುರುಪ್ರಸಾದ್, ಚಾಮುಲ್ ಮಾಜಿ ನಿರ್ದೇಶಕ ಕಿಲಗೆರೆ ಶಶಿ, ಮಾಜಿ ಮಂಡಲ ಅಧ್ಯಕ್ಷ ನಾಗರಾಜು ಮಾಧ್ಯಮ ಸಹಪ್ರಮುಕ್ ಮಂಜುನಾಥ್. ಸಹ ಪ್ರಮುಖ ವೀರೇಂದ್ರ, ಎಂ.ಎಸ್. ಚಂದ್ರಶೇಖರ್, ನಗರಸಭಾ ಮಾಜಿ ಸದಸ್ಯ ಶಿವಣ್ಣ, ಮನೋಜ್ ಪಟೇಲ್, ಉಷಾರಾಣಿ, ಮಹದೇವಮ್ಮ ರಾಜೇಂದ್ರ. ಕೇಬಲ್ ರಂಗಸ್ವಾಮಿ ಇತರರು ಹಾಜರಿದ್ದರು.-------------------

6ಸಿಎಚ್ಎನ್‌12

ಚಾಮರಾಜನಗರದ ರಾಮಸಮುದ್ರದ ಕುಲುಮೆ ರಸ್ತೆಯಲ್ಲಿರುವ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಪಕ್ಷದ 47ನೇ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮ ನಡೆಯಿತು.