ಮಂಗಳೂರಿನಲ್ಲಿ ನಡೆದ ಕರಾವಳಿ ಕರ್ನಾಟಕದ ಮೊದಲ ಸಚಿವ ಸಂಪುಟ ಸಭೆಯಲ್ಲಿ ಪ್ರಕಟಿಸಲಾದ ಹೊಸ ಕರಾವಳಿ- ಮಲೆನಾಡು ಕರ್ನಾಟಕ ಪ್ರವಾಸೋದ್ಯಮ ನೀತಿಯು ಸ್ವಾಗತಾರ್ಹವಾಗಿದೆ ಮತ್ತು ಹೊಸ ಭರವಸೆಗಳನ್ನು ಮೂಡಿಸಿದೆ ಎಂದು ಅರ್ಬನ್ ವಿಷನ್ಸ್‌ ಅಧ್ಯಕ್ಷೆ ಹಾಗೂ ಪ್ಯಾರಡೈಸ್ ರೆಸಾರ್ಟ್ಸ್ ನಿರ್ದೇಶಕಿ ಪ್ರತಿಮಾ ಮನೋಹರ್ ಪ್ರತಿಕ್ರಿಯಿಸಿದ್ದಾರೆ.

ಉಡುಪಿ: ಮಂಗಳೂರಿನಲ್ಲಿ ನಡೆದ ಕರಾವಳಿ ಕರ್ನಾಟಕದ ಮೊದಲ ಸಚಿವ ಸಂಪುಟ ಸಭೆಯಲ್ಲಿ ಪ್ರಕಟಿಸಲಾದ ಹೊಸ ಕರಾವಳಿ- ಮಲೆನಾಡು ಕರ್ನಾಟಕ ಪ್ರವಾಸೋದ್ಯಮ ನೀತಿಯು ಸ್ವಾಗತಾರ್ಹವಾಗಿದೆ ಮತ್ತು ಹೊಸ ಭರವಸೆಗಳನ್ನು ಮೂಡಿಸಿದೆ ಎಂದು ಅರ್ಬನ್ ವಿಷನ್ಸ್‌ ಅಧ್ಯಕ್ಷೆ ಹಾಗೂ ಪ್ಯಾರಡೈಸ್ ರೆಸಾರ್ಟ್ಸ್ ನಿರ್ದೇಶಕಿ ಪ್ರತಿಮಾ ಮನೋಹರ್ ಪ್ರತಿಕ್ರಿಯಿಸಿದ್ದಾರೆ.

ಸಂಪುಟ ಸಭೆಯಲ್ಲಿ ಒಂಬತ್ತು ಪ್ರವಾಸೋದ್ಯಮ ಸರ್ಕ್ಯೂಟ್‌ಗಳನ್ನು ಪ್ರಕಟಿಸಲಾಗಿದ್ದು, ಇವುಗಳನ್ನು ಪ್ರತ್ಯೇಕ ಯೋಜನೆಗಳಂತೆ ನೋಡದೇ ಪರಿಸರ ಆಧಾರಿತ ಸಮಗ್ರ ವ್ಯವಸ್ಥೆಯಾಗಿ ನೋಡಲಾಗಿದೆ. ಮುಖ್ಯವಾಗಿ ಸರ್ಕಾರವು ಪ್ರವಾಸೋದ್ಯಮ ಯೋಜನೆಗಳಿಗೆ ಮೂಲಸೌಕರ್ಯಗಳನ್ನು ನೀಡುವುದರಿಂದ ಹೂಡಿಕೆದಾರರ ಆಕರ್ಷಣೆ ಸಾಧ್ಯವಾಗಲಿದೆ ಮತ್ತು ದೀರ್ಘಾವಧಿಯ ಬಂಡವಾಳ ಹೂಡಿಕೆಗೆ ಉತ್ತೇಜನ ನೀಡಲಿದೆ. ಪ್ರವಾಸೋದ್ಯಮ ಕೇವಲ ಆತಿಥ್ಯ ಚಟುವಟಿಕೆಯಾಗಿ ಅಲ್ಲ, ಈ ಭಾಗದ ಆರ್ಥಿಕತೆಯ ಮೂಲವಾಗಿಯೂ ಹೊರಹೊಮ್ಮಲಿದೆ ಪ್ರತಿಮಾ ಮನೋಹರ್ ಅಭಿಪ್ರಾಯಪಟ್ಟಿದ್ದಾರೆ

ಮುಂದೆ ಪರಿಸರಪೂರಕವಾಗಿ ಹೂಡಿಕೆಯನ್ನುಸಾಧ್ಯವಾಗಿಸಲು ಸ್ಪಷ್ಟ ನಿಯಮಾವಳಿಗಳ ರೂಪಣೆಯಾಗಬೇಕು ಮತ್ತು ಕರಾವಳಿಯ ನಿಯಂತ್ರಣ ವಲಯ (ಸಿಆರ್‌ಝಡ್) ಮಾನದಂಡಗಳು ಪ್ರವಾಸೋದ್ಯಮಸ್ನೇಹಿಯಾಗಿ ಬದಲಾಗಬೇಕು ಎಂದವರು ಆಶಿಸಿದ್ದಾರೆ.ಸಭೆಯಲ್ಲಿ ಘೋಷಿಸಲಾದ ಇಲ್ಲಿನ 343 ಕಿಮೀ ಕರಾವಳಿಯ 12 ತಾಣಗಳನ್ನು ಜಲಸಾರಿಗೆ ಮೂಲಕ ಸಂಪರ್ಕಿಸುವ ವ್ಯವಸ್ಥೆಯು ಪರಿಸರಪೂರಕ ಪ್ರವಾಸೋದ್ಯಮಕ್ಕೆ ಒಂದು ಉತ್ತಮ ಉದಾಹರಣೆಯಾಗಿದೆ ಎಂದವರು ಹೇಳಿದ್ದಾರೆ