ಚನ್ನಗಿರಿಯಲ್ಲಿ ಆಧುನಿಕರಣಗೊಂದಿರುವ ಖಾಸಗಿ ಬಸ್ ನಿಲ್ದಾಣ ಪಟ್ಟಣದ ಸುಂದರತೆಗೆ ಕಿರೀಟದಂತಿದೆ. ಈಗ ನಿಲ್ದಾಣದಲ್ಲಿ ಅಭಿವೃದ್ಧಿ ಕಾಮಗಾರಿ ಶೇ.95ರಷ್ಟು ಮುಕ್ತಾಯಗೊಂಡಿವೆ. ಅತಿ ಶೀಘ್ರದಲ್ಲಿ ಅಂದರೆ, ಡಿ.15ರಿಂದ 20ರೊಳಗೆ ಈ ಆಧುನಿಕ ಖಾಸಗಿ ಬಸ್ ನಿಲ್ದಾಣ ಪ್ರಯಾಣಿಕರ ಸೇವೆಗೆ ಅರ್ಪಣೆಯಾಗಲಿದೆ.
- ಡಿ.20ರೊಳಗೆ ಉದ್ಘಾಟನೆ ಸಾಧ್ಯತೆ । ₹1.34 ಕೋಟಿ ವೆಚ್ಚದ ಕಾಮಗಾರಿಗೆ ಚಾಲನೆ ನೀಡಿದ್ದ ಶಾಸಕ ಬಸವರಾಜು ಶಿವಗಂಗಾ
- - -ಬಾ.ರಾ.ಮಹೇಶ್, ಚನ್ನಗಿರಿ
ಕನ್ನಡಪ್ರಭ ವಾರ್ತೆ ಚನ್ನಗಿರಿಚನ್ನಗಿರಿಯಲ್ಲಿ ಆಧುನಿಕರಣಗೊಂದಿರುವ ಖಾಸಗಿ ಬಸ್ ನಿಲ್ದಾಣ ಪಟ್ಟಣದ ಸುಂದರತೆಗೆ ಕಿರೀಟದಂತಿದೆ. ಈಗ ನಿಲ್ದಾಣದಲ್ಲಿ ಅಭಿವೃದ್ಧಿ ಕಾಮಗಾರಿ ಶೇ.95ರಷ್ಟು ಮುಕ್ತಾಯಗೊಂಡಿವೆ. ಅತಿ ಶೀಘ್ರದಲ್ಲಿ ಅಂದರೆ, ಡಿ.15ರಿಂದ 20ರೊಳಗೆ ಈ ಆಧುನಿಕ ಖಾಸಗಿ ಬಸ್ ನಿಲ್ದಾಣ ಪ್ರಯಾಣಿಕರ ಸೇವೆಗೆ ಅರ್ಪಣೆಯಾಗಲಿದೆ.
ಪಟ್ಟಣದಲ್ಲಿ ಸುಸಜ್ಜಿತ ಬಸ್ ನಿಲ್ದಾಣವೇ ಇಲ್ಲದಂತಹ ಸಂದರ್ಭದ 2000ದ ಇಸವಿಯಲ್ಲಿ ಅಂದರೆ, 26 ವರ್ಷಗಳ ಹಿಂದೆ ಆಗಿನ ಶಾಸಕರಾಗಿದ್ದ ವಡ್ನಾಳ್ ರಾಜಣ್ಣ ಸುಸಜ್ಜಿತ ಖಾಸಗಿ ಬಸ್ ನಿಲ್ದಾಣವನ್ನು ಸರ್ಕಾರದ ಅನುದಾನದಲ್ಲಿ ನಿರ್ಮಾಣ ಮಾಡಿಸಿದ್ದರು. ಈ ಬಸ್ ನಿಲ್ದಾಣವು ಶಿಥಿಲಗೊಂಡು ನಿಲ್ದಾಣದ ಮೇಲ್ಚಾವಣಿಗೆ ಹಾಕಿದ ಸಿಮೆಂಟ್ ಶೀಟ್‌ಗಳೆಲ್ಲ ಹೊಡೆದುಹೋಗಿ ಮಳೆಗಾಲದಲ್ಲಿ ಸೋರುತ್ತಿತ್ತು. ಇದರಿಂದ ಪ್ರಯಾಣಿಕರಿಗೆ ಕಿರಿಕಿರಿ ಉಂಟಾಗುತ್ತಿತ್ತು. ಈ ಸಮಸ್ಯೆ ಮನಗಂಡ ಹಾಲಿ ಶಾಸಕ ಬಸವರಾಜು ವಿ. ಶಿವಗಂಗಾ ಶಿಥಿಲಗೊಂಡಿದ್ದ ಬಸ್ ನಿಲ್ದಾಣಕ್ಕೆ ಖುದ್ದು ಭೇಟಿ ನೀಡಿ ಪರಿಶೀಲಿಸಿದ್ದರು.ಕಳೆದ 9 ತಿಂಗಳ ಹಿಂದೆ ಕ್ಷೇತ್ರದ ಶಾಸಕ ಬಸವರಾಜು ವಿ. ಶಿವಗಂಗಾ ಬಸ್ ನಿಲ್ದಾಣದ ಆಧುನೀಕರಣದ ₹1.34 ಕೋಟಿ ವೆಚ್ಚದ ಕಾಮಗಾರಿ ಕೆಲಸಕ್ಕೆ ಚಾಲನೆಯನ್ನು ನೀಡಿದ್ದರು. ಮಾರ್ಚ್ ತಿಂಗಳಿನಲ್ಲಿ ನಿಲ್ದಾಣದ ಅಧುನೀಕರಣದ ಗುತ್ತಿಗೆ ಕೆಲಸವನ್ನು ಕಾಕನೂರು ಕೆ.ಪಿ.ಮಹೇಶ್ ಎಂಬವರು ಪಡೆದು ನಿಲ್ದಾಣದ ಮೇಲ್ಚಾವಣಿಗೆ ತಗಡಿನ ಶೀಟ್ ಹೊದಿಕೆ, ಕಬ್ಬಿಣದ ಫಿಲ್ಲರ್‌ಗಳಿಗೆ ಮತ್ತು ನಿಲ್ದಾಣದ ಮೇಲ್ಚಾವಣಿ ಕೆಳಭಾಗದಲ್ಲಿ ಅಲ್ಯುಮಿನಿಯಂ ಕ್ಲಾಂಡಿಂಗ್ ಪ್ಯಾನಲ್ (ಎ.ಸಿ.ಪಿ)ಯ ಸುಂದರತೆಯ ಸ್ಪರ್ಶದಿಂದ ನಿಲ್ದಾಣವೀಗ ನೋಡುಗರ ಗಮನ ಸೆಳೆಯುವಂತಿದೆ.
ಗ್ರಾನೈಟ್ ಕಲ್ಲಿನ ನೆಲಹಾಸು, ಮಹಿಳೆಯರ ವಿಶ್ರಾಂತಿ ಗೃಹ, ನಿಲ್ದಾಣದ ಸ್ವಚ್ಚತೆಗೆ ಬೇಕಾದ ಸಲಕರಣೆಗಳನ್ನು ಇಡಲು ಒಂದು ಕೊಠಡಿ, ವಾಣಿಜ್ಯ ಮಳಿಗೆಗಳಿಗೆ ಬಣ್ಣ, ಆಧುನಿಕ ತಂತ್ರಜ್ಞಾನದ 133 ವಿದ್ಯುತ್ ದೀಪಗಳು, 11 ಬಸ್‌ಗಳು ನಿಲ್ಲುವ ಪಾತ್‌ಗಳ ನಿರ್ಮಾಣ, ಬಸ್ ನಿಲ್ದಾಣದ ನಾಮಫಲಕ ಇಂತಹ ಪ್ರಮುಖ ಕಾಮಗಾರಿ ಕೆಲಸಗಳು ಮುಗಿದಿವೆ.ಇನ್ನುಳಿದಂತೆ ಸೈಡ್ ಸ್ಕ್ರೀನ್, ಪ್ರಯಾಣಿಕರು ಕುಳಿತುಕೊಳ್ಳುವ ಸ್ಟೀಲ್ ಆಸನಗಳ ಜೋಡಣೆ, ಶುದ್ಧ ಕುಡಿಯುವ ನೀರಿನ ಘಟಕ, ಬಸ್‌ಗಳು ನಿಲ್ಲುವ ಪಾತ್‌ಗಳಲ್ಲಿ ಮಾರ್ಗಸೂಚಿ ಫಲಕ ಕಾಮಗಾರಿಗಳು ಮಾತ್ರ ಬಾಕಿ ಉಳಿದಿವೆ. ನಿಲ್ದಾಣದ ಉದ್ಘಾಟನೆಯ 2 ದಿನಗಳ ಮೊದಲು ಈ ಕೆಲಸಗಳು ಪೂರ್ಣಗೊಳಿಸಲಾಗುವುದು ಎಂದು ಗುತ್ತಿಗೆದಾರ ಕೆ.ಪಿ.ಮಹೇಶ್ ಹೇಳುತ್ತಾರೆ.
- - -(ಕೋಟ್)
ಚನ್ನಗಿರಿ ತಾಲೂಕು ರಾಜ್ಯದಲ್ಲಿಯೇ ಅತಿ ದೊಡ್ಡ 2ನೇ ತಾಲೂಕು ಕೇಂದ್ರವಾಗಿದ್ದು, ಪ್ರತಿ ದಿನ ನೂರಾರು ಬಸ್‌ಗಳು ನಿಲ್ದಾಣಕ್ಕೆ ಬಂದು ಹೋಗುತ್ತಿವೆ. ಸಾವಿರಾರು ಪ್ರಯಾಣಿಕರು ಭೇಟಿ ನೀಡುತ್ತಾರೆ. ಈ ಹಿನ್ನೆಲೆ ಖಾಸಗಿ ಬಸ್ ನಿಲ್ದಾಣ ಆಧುನೀಕರಣಗೊಳಿಸಲಾಗಿದೆ. ಬೆಳಗಾವಿಯ ಚಳಿಗಾಲದ ಅಧಿವೇಶನ ಮುಗಿದ ನಂತರ ತಾ.ಪಂ. ಮತ್ತು ಜಿ.ಪಂ. ಚುನಾವಣೆಗಳ ನೀತಿ ಸಂಹಿತೆ ಜಾರಿಯಾಗುವ ಮೊದಲೇ ಅಂದರೆ, ಡಿ.15ರಿಂದ 20ರೊಳಗೆ ಪ್ರಯಾಣಿಕರ ಸೇವೆಗಾಗಿ ನಿಲ್ದಾಣವನ್ನು ಉದ್ಘಾಟಿಸಲಾಗುವುದು.- ಬಸವರಾಜು ವಿ. ಶಿವಗಂಗಾ, ಶಾಸಕ, ಚನ್ನಗಿರಿ ಕ್ಷೇತ್ರ.
- - --29ಕೆಸಿಎನ್‌ಜಿ1, 2: ಉದ್ಘಾಟನೆಗೆ ಸಿದ್ಧವಾಗಿರುವ ಚನ್ನಗಿರಿ ಖಾಸಗಿ ಬಸ್ ನಿಲ್ದಾಣ.
-29ಕೆಸಿಎನ್ಜಿ3: ಬಸವರಾಜು ವಿ. ಶಿವಗಂಗಾ