ಸಾರಾಂಶ
ಸ್ಫೋಟದಿಂದ ತೀವ್ರವಾಗಿ ಗಾಯಗೊಂಡಿದ್ದ ದಂಪತಿಯನ್ನು ಝೀರೋ ಟ್ರಾಫಿಕ್‌ನಲ್ಲಿ ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಗಂಭೀರ ಗಾಯಗಳಿಂದ ಸಾವು ಬದುಕಿನ ಜೊತೆ ಎರಡು ದಿನ ಹೋರಾಟ ನಡೆಸಿದ ದಂಪತಿ ಚಿಕಿತ್ಸೆ ಫಲ್ಲಿಸದೆ ಮೃತಪಟ್ಟಿದ್ದಾರೆ. ಅಂತ್ಯಸಂಸ್ಕಾರವನ್ನು ಹಾಸನದ ಬಿಟ್ಟಗೌಡನಹಳ್ಳಿ ಸ್ಮಶಾನದಲ್ಲಿ ಗುರುವಾರ ಬೆಳಗ್ಗೆ ನೆರವೇರಿಸಲಾಯಿತು. ಹೊರವಲಯದಲ್ಲಿರುವ ಹಳೆ ಆಲೂರು ಗ್ರಾಮದ ಸಮೀಪ ವಾಸದ ಮನೆಯಲ್ಲಿ, ಸೋಮವಾರ ರಾತ್ರಿ ನಿಗೂಢ ವಸ್ತುಗಳು ಸ್ಫೋಟಗೊಂಡಿತ್ತು.
ಕನ್ನಡಪ್ರಭ ವಾರ್ತೆ ಆಲೂರು
ಪಟ್ಟಣದ ಹೊರವಲಯದಲ್ಲಿರುವ ಹಳೆ ಆಲೂರು ಗ್ರಾಮದ ಸಮೀಪ ವಾಸದ ಮನೆಯಲ್ಲಿ, ಸೋಮವಾರ ರಾತ್ರಿ ನಿಗೂಢ ವಸ್ತುಗಳು ಸ್ಫೋಟಗೊಂಡು ತೀವ್ರವಾಗಿ ಗಾಯಗೊಂಡಿದ್ದ ಸುದರ್ಶನಚಾರ್ ಹಾಗೂ ಕಾವ್ಯ ದಂಪತಿ ಚಿಕಿತ್ಸೆ ಫಲಕಾರಿಯಾಗದೆ ಮಂಗಳವಾರ ರಾತ್ರಿ ಬೆಂಗಳೂರಿನಲ್ಲಿ ಮೃತಪಟ್ಟಿದ್ದಾರೆ.ಸ್ಫೋಟದಿಂದ ತೀವ್ರವಾಗಿ ಗಾಯಗೊಂಡಿದ್ದ ದಂಪತಿಯನ್ನು ಝೀರೋ ಟ್ರಾಫಿಕ್‌ನಲ್ಲಿ ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಗಂಭೀರ ಗಾಯಗಳಿಂದ ಸಾವು ಬದುಕಿನ ಜೊತೆ ಎರಡು ದಿನ ಹೋರಾಟ ನಡೆಸಿದ ದಂಪತಿ ಚಿಕಿತ್ಸೆ ಫಲ್ಲಿಸದೆ ಮೃತಪಟ್ಟಿದ್ದಾರೆ. ಅಂತ್ಯಸಂಸ್ಕಾರವನ್ನು ಹಾಸನದ ಬಿಟ್ಟಗೌಡನಹಳ್ಳಿ ಸ್ಮಶಾನದಲ್ಲಿ ಗುರುವಾರ ಬೆಳಗ್ಗೆ ನೆರವೇರಿಸಲಾಯಿತು.
ಸ್ಫೋಟದ ಸ್ಥಳದಲ್ಲಿ ದೊರೆತ ವಸ್ತುಗಳನ್ನು ಗಮನಿಸಿದಾಗ ಇದು ಕಲ್ಲು ಕ್ವಾರಿಗಳಲ್ಲಿ ಬಳಸಲು ಉಪಯೋಗಿಸುವ ಡೈನಮೆಂಟ್‌ನಂತೆ ಕಾಣುತ್ತಿಲ್ಲ. ಬದಲಾಗಿ ಇದು ಕಾಡು ಹಂದಿಗಳನ್ನು ಹಾಗೂ ಮೀನು ಹಿಡಿಯಲು ಬಳಸ್ಪಡುವ ಸ್ಫೋಟಕದಂತೆ ಕಾಣುತ್ತಿದೆ ಎಂದು ಮಾಹಿತಿ ಲಭ್ಯವಾಗಿದೆ. ಆದರೆ ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಸ್ಫೋಟ ಯಾಕೆ ಸಂಭವಿಸಿತು ಎಂಬುದು ಪ್ರಯೋಗಾಲಯದಿಂದ ವರದಿ ಬಂದ ನಂತರವಷ್ಟೇ ತಿಳಿಯಬೇಕಾಗಿದೆ.