ಸಾರಾಂಶ
ಕಲಬರುಗಿಯ ಡಾ.ಎಸ್.ಎಂ.ಪಂಡಿತ ರಂಗ ಮಂದಿರದಲ್ಲಿ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮಹಾನಗರ ಪಾಲಿಕೆ ಹಾಗೂ ಜಿಲ್ಲಾ ಪಂಚಾಯಿತಿ, ಕಲಬುರಗಿ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಒನಕೆ ಓಬವ್ವ ಜಯಂತಿ ಅಂಗವಾಗಿ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಲಾಯಿತು.
ಕನ್ನಡಪ್ರಭ ವಾರ್ತೆ ಕಲಬುರಗಿ
ಹೆಣ್ಣು ಸಮಯ ಬಂದರೆ ದುಷ್ಟರನ್ನು ನಾಶ ಮಾಡಬಲ್ಲಳು, ಅದಕ್ಕೆ ವೀರ ವನಿತೆ ಒನಕೆ ಓಬವ್ವ ನಮಗೆ ಮಾದರಿಯಾಗಿದ್ದಾಳೆ ಎಂದು ಜೇವರ್ಗಿ ಕಾಲೋನಿಯ ಸರ್ಕಾರಿ ಪದವಿ ಪೂರ್ವ ಮಹಾವಿದ್ಯಾಲಯ ಸಮಾಜ ಶಾಸ್ತ್ರ ಉಪನ್ಯಾಸಕಿ ಸವಿತಾ ಬಿ.ನಾಸಿ ಹೇಳಿದರು.ಇಲ್ಲಿನ ಡಾ.ಎಸ್.ಎಂ.ಪಂಡಿತ ರಂಗ ಮಂದಿರದಲ್ಲಿ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮಹಾನಗರ ಪಾಲಿಕೆ ಹಾಗೂ ಜಿಲ್ಲಾ ಪಂಚಾಯಿತಿ, ಕಲಬುರಗಿ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಒನಕೆ ಓಬವ್ವ ಜಯಂತಿ ಅಂಗವಾಗಿ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ, ಅವರು ವಿಶೇಷ ಉಪನ್ಯಾಸ ನೀಡಿದರು.
ಚಿತ್ರದುರ್ಗದ ಕೋಟೆಗೆ ದೊಡ್ಡ ಇತಿಹಾಸವಿದ್ದು, ಅದು ವೀರ ನಾರಿ ಓಬವ್ವಳಿಂದ ಮತ್ತಷ್ಟು ಪ್ರಖ್ಯಾತ ಪಡೆಯಿತು ಎಂದರು.ಜಿಲ್ಲಾಧಿಕಾರಿ ಕಾರ್ಯಾಲಯ ಸಹಾಯಕ ನಿರ್ದೇಶಕರು, ಶಿವಶರಣಪ್ಪ ದನ್ನಿ ಮಾತನಾಡಿ, ಅವರು ಚಿತ್ರದುರ್ಗ ಒಂದು ಸಣ್ಣ ಕೋಟೆ ಇಲ್ಲಿ ಸಣ್ಣ ಸಣ್ಣ ಕುಟುಂಬಗಳು ವಾಸಿಸುತ್ತವೆ. ಇಲ್ಲಿ ಇರುವ ಜನರು ಪ್ರಾಮಾಣಿಕ ರಾಷ್ಟ್ರಭಕ್ತಿ ಹೊಂದಿದವರು ಎಂದರು.
ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಸದಸ್ಯ ಸುರೇಶ ಬಡಿಗೇರ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು.ಕಾಲೇಜ ವಿದ್ಯಾರ್ಥಿಗಳಿಗೆ ಭಾಷಣ ಸ್ಪರ್ಧೆಯಲ್ಲಿ ನಾಲ್ಕು ವಿದ್ಯಾರ್ಥಿಗಳನ್ನು ಪ್ರಥಮ ಬಹುಮಾನ ಲಾಲ್ ಬಿ, ದ್ವಿತೀಯ ಬಹುಮಾನ ಅನೀಕಾ ಸುಬಹೇನಿಯಾ, ಸ್ನೇಹಾ ಮತ್ತು ಸೃಷ್ಠಿ ತೃತೀಯ ಬಹುಮಾನ ಪಡೆದರು.
ಕಾರ್ಯಕ್ರಮದಲ್ಲಿ ಪಂಪಣ್ಣಾ ಗ್ರೇಡ್-1 ತಹಸೀಲ್ದಾರ್ ಉದ್ಘಾಟಿಸಿದರು. ಶಿವಶರಣಪ್ಪ ಮೂಳೆಗಾಂವ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರು ದತ್ತಪ್ಪಾ ಸಾಗನೂರ, ನಂದಿನಿ ಸನ್ಬಾಲ್, ಸಂಪತ್ತ ಒಳಕೇರ, ಅರುಣ ಭರಣಿ, ನರಸಪ್ಪ, ಮಂಜುನಾಥ್ ನಾಲವಾರಕರ ಉಪಸ್ಥಿತರಿದ್ದರು.