ಸೌಜನ್ಯ ಕೊಲೆ: ನ್ಯಾಯ ನೀಡಲು ಆಗ್ರಹ

| Published : Oct 10 2025, 01:00 AM IST

ಸೌಜನ್ಯ ಕೊಲೆ: ನ್ಯಾಯ ನೀಡಲು ಆಗ್ರಹ
Share this Article
  • FB
  • TW
  • Linkdin
  • Email

ಸಾರಾಂಶ

ವಿರೋಧ ಪಕ್ಷವಾಗಿರುವ ಬಿಜೆಪಿ ಬಹಿರಂಗವಾಗಿ ಎಸ್.ಐ.ಟಿ. ತನಿಖೆಗೆ ಒಪ್ಪಿ ಇನ್ನೊಂದು ಕಡೆ ಬೆದರಿಕೆ ಹಾಕುವುದನ್ನು ಬಿಟ್ಟು ಸಂತ್ರಸ್ತರ ಪರವಾಗಿ ಧ್ವನಿ ಎತ್ತಿ ಸಾಂವಿಧಾನಿಕ ಕರ್ತವ್ಯ ಮಾಡಬೇಕೆಂದರು.

ಕನ್ನಡಪ್ರಭ ವಾರ್ತೆ ತುಮಕೂರುಧರ್ಮಸ್ಥಳದಲ್ಲಿ ಸೌಜನ್ಯ ಕೊಲೆಯಾಗಿ ಆಕ್ಟೋಬರ್ 9ಕ್ಕೆ 13 ವರ್ಷಗಳು ತುಂಬುತ್ತಿದ್ದು ಇನ್ನೂ ಆರೋಪಿಗಳನ್ನು ಬಂಧಿಸಲು ಸಾಧ್ಯವಾಗದ ಹಿನ್ನೆಲೆಯಲ್ಲಿ ರ್ಮಸ್ಥಳ ದೌರ್ಜನ್ಯ ವಿರೋಧಿ ವೇದಿಕೆಯು ರಾಜ್ಯವ್ಯಾಪಿ ನ್ಯಾಯಕ್ಕಾಗಿ ಜನಾಗ್ರಹ ದಿನ ಕರೆಯ ಮೇರೆಗೆ ಜನಪರ ಮತ್ತು ಪ್ರಗತಿಪರ ಸಂಘಟನೆಗಳ ಒಕ್ಕೂಟದಿಂದ ಮುಖ್ಯ ಮಂತ್ರಿಗಳಿಗೆ ಜಿಲ್ಲಾಧಿಕಾರಿಗಳ ಮೂಲಕ ಮನವಿ ಮಾಡಲಾಯಿತು.

ಸಭೆಯನ್ನು ಉದ್ದೇಶಿಸಿ ಮಾತನಾಡಿದ ರೈತ-ಕಾರ್ಮಿಕ ಸಂಘಟನೆ ಬಿ.ಉಮೇಶ್ ರಾಜ್ಯ ಸರ್ಕಾರ ಯಾವುದೇ ಪ್ರಭಾವಿಗಳ ಒತ್ತಡಕ್ಕೆ ಮಣಿಯಬಾರದು. ವಿರೋಧ ಪಕ್ಷವಾಗಿರುವ ಬಿಜೆಪಿ ಬಹಿರಂಗವಾಗಿ ಎಸ್.ಐ.ಟಿ. ತನಿಖೆಗೆ ಒಪ್ಪಿ ಇನ್ನೊಂದು ಕಡೆ ಬೆದರಿಕೆ ಹಾಕುವುದನ್ನು ಬಿಟ್ಟು ಸಂತ್ರಸ್ತರ ಪರವಾಗಿ ಧ್ವನಿ ಎತ್ತಿ ಸಾಂವಿಧಾನಿಕ ಕರ್ತವ್ಯ ಮಾಡಬೇಕೆಂದರು.ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷರಾದ ಬಾ.ಹ. ರಮಾಕುಮಾರಿ ಮಾತನಾಡಿ, ಸೌಜನ್ಯ ಅತ್ಯಾಚಾರ-ಕೊಲೆಯಾಗಿ 13 ವರ್ಷಗಳು ಸಂದರೂ ನೈಜ ಆರೋಪಿಗಳನ್ನು ಬಂಧಿಸದಿರುವುದು ನಾಗರಿಕ ಸಮಾಜಕ್ಕೆ ಮಾಡಿರುವ ಅಪಮಾನವಾಗಿದೆ. ಆದ್ದರಿಂದ ಈಗ ನಡೆಯುತ್ತಿರುವ ಎಸ್‌ಐಟಿ ತನಿಖೆ ಪ್ರಾಮಾಣಿಕ, ಪಾರದರ್ಶಕವಾಗಿ ಗಡುವಿನೊಂದಿಗೆ ನಡೆದು ಅಪರಾಧಿಗಳಿಗೆ ಶಿಕ್ಷೆನೀಡಬೇಕೆಂದರು. ಕೆ. ದೊರೈರಾಜು ಮಾತನಾಡಿ, ನ್ಯಾಯಕ್ಕಾಗಿ ಚಳುವಳಿನ ಡೆಸಿದರೆ ಅದನ್ನು ಕೆಲವು ಶಕ್ಕಿಗಳು ವಿಕೃತಗೊಳಿಸಿ ಸಂತ್ರಸ್ಥರನ್ನು ಗುರಿಯಾಗಿಸಿ ದಾಳಿಮಾಡುವುದನ್ನು ಜನರು ಹಿಮ್ಮೆಟ್ಟಿಸಬೇಕೆಂದರು.

ಕಾರ್ಮಿಕ ಮುಖಂಡ ಕಂಬೇಗೌಡ ಮಾತನಾಡಿ, ಅಪರಾಧಿಗಳಿಗೆ ಕಾನೂನು ಶಿಕ್ಷೆ ನೀಡದಿದ್ದರೆ ಜನರಲ್ಲಿ ಕಾನೂನಿನ ಬಗ್ಗೆ ಭಯ ಹೋಗುತ್ತದೆ ಎಂದರು.ಸ್ಲಂ ಜನಾಂದೋಳನ ಸಂಘಟನೆಯ ಎ. ನರಸಿಂಹಮೂರ್ತಿ, ಮಹಿಳಾ ಮುಖಂಡರಾದ ಕಲ್ಯಾಣಿ ಮಹಿಳಾ ಸಂಘಟನೆಯ ಎನ್.ಇಂದ್ರಮ್ಮ, ಜನವಾದಿ ಮಹಿಳಾ ಸಂಘಟನೆಯ ಕಲ್ಪನ, ಸ್ಲಂ ಜನಾಂದೋಲನದ ಅನುಪಮ, ಅರುಣ್, ರೈತ ಸಂಘದ ಅಜ್ಜಪ್ಪ ಕಾರ್ಮಿಕ ಸಂಘಟನೆಯ ಎನ್.ಕೆ.ಸುಬ್ರಮಣ್ಯ, ಗಿರೀಶ್ ಮಾತನಾಡಿದರು. ನೇತೃತ್ವವನ್ನು ಸೈಯದ್ ಮುಜೀಬ್, ಲೋಕೇಶ್ ಇಂತು, ಷಣ್ಮುಖಪ್ಪ, ಮಂಜುಳ, ಉಮಾದೇವಿ, ವಕೀಲರಾದ ಕಿಶೋರ್, ಜವಾಹರ್ ಅಶ್ವತ್ಥಯ್ಯ, ತಾಜುದ್ಧೀನ್ ವಹಿಸಿದ್ದರು. ಜಿಲ್ಲಾಧಿಕಾರಿಗಳ ಪರವಾಗಿ ತಹಸೀಲ್ದಾರ್ ರಾಜೇಶ್ವರಿಯವರು ಮನವಿ ಸ್ವೀಕರಿಸಿದರು.