ಸಾರಾಂಶ
ಭದ್ರಾವತಿ ನಗರದ ಭದ್ರಾನದಿ ಸಮೀಪದ ಅಡಕೆ ತೋಟವೊಂದರ ಕಟ್ಟಡದಲ್ಲಿ ಅಪಾರ ಪ್ರಮಾಣದ ಗೋವಿನ ಮೂಳೆಗಳು ಪತ್ತೆಯಾಗಿರುವ ಘಟನೆ ಹಳೇ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಹೊಳೆಹೊನ್ನೂರು ರಸ್ತೆ ಭದ್ರಾನದಿಯ ದಡದಲ್ಲಿನ ಎಚ್.ಎಂ. ಟಿಂಬರ್ ಅಂಡ್ ರ‍್ನಿಚರ್ ಅಂಗಡಿಯ ಹಿಂಭಾಗದ ಸಿಮೆಂಟ್ ಕಟ್ಟಡದಲ್ಲಿ ಗೋವಿನ ಮೂಳೆ, ಚರ್ಮಗಳಿವೆ ಎಂದು ವ್ಯಕ್ತಿಯೊಬ್ಬರು ಇ-ಮೇಲ್ ಮೂಲಕ ಪಿಎಸ್ಐಗೆ ಮಾಹಿತಿ ನೀಡಿದ್ದರು.
ಭದ್ರಾವತಿ: ನಗರದ ಭದ್ರಾನದಿ ಸಮೀಪದ ಅಡಕೆ ತೋಟವೊಂದರ ಕಟ್ಟಡದಲ್ಲಿ ಅಪಾರ ಪ್ರಮಾಣದ ಗೋವಿನ ಮೂಳೆಗಳು ಪತ್ತೆಯಾಗಿರುವ ಘಟನೆ ಹಳೇ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಹೊಳೆಹೊನ್ನೂರು ರಸ್ತೆ ಭದ್ರಾನದಿಯ ದಡದಲ್ಲಿನ ಎಚ್.ಎಂ. ಟಿಂಬರ್ ಅಂಡ್ ರ‍್ನಿಚರ್ ಅಂಗಡಿಯ ಹಿಂಭಾಗದ ಸಿಮೆಂಟ್ ಕಟ್ಟಡದಲ್ಲಿ ಗೋವಿನ ಮೂಳೆ, ಚರ್ಮಗಳಿವೆ ಎಂದು ವ್ಯಕ್ತಿಯೊಬ್ಬರು ಇ-ಮೇಲ್ ಮೂಲಕ ಪಿಎಸ್ಐಗೆ ಮಾಹಿತಿ ನೀಡಿದ್ದರು.ಮಾಹಿತಿ ಆಧಾರದ ಮೇರೆಗೆ ಪಿಎಸ್ ಐ ಶರಣಪ್ಪ ಹಾಂದ್ರಗಲ್ ನೇತೃತ್ವದಲ್ಲಿ ದಾಳಿ ನಡೆಸಲಾಯಿತು. ದಾಳಿಯಲ್ಲಿ ಅಪಾರ ಪ್ರಮಾಣದ ಗೋಮಾಂಸ ಹಾಗೂ ಒಂದು ಕೊಠಡಿಯಲ್ಲಿ ದನಗಳ ಬುರುಡೆ, ಗೋವಿನ ತಲೆ, ಕೊಂಬು, ಚರ್ಮ, ಎಲುಬುಗಳನ್ನು ಸಂಗ್ರಹಿಸಿಟ್ಟಿರುವುದು ಬೆಳಕಿಗೆ ಬಂದಿದೆ.
ಅಂದಾಜು ₹20 ಸಾವಿರ ಮೌಲ್ಯದ 2ರಿಂದ 3 ಟನ್ ತೂಕದ ಗೋವಿನ ಮೂಳೆ ಭಾಗಗಳು, ಮಾಂಸ ಮಾರಾಟ ಮಾಡಿದ್ದು ತಿಳಿದುಬಂದಿದೆ. ₹600 ನಗದು ಜೊತೆಗೆ ಆರೋಪಿಯನ್ನು ವಶಕ್ಕೆ ಪಡೆಯಲಾಗಿದೆ. ಹಳೇ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.- - - -ಡಿ3-ಬಿಡಿವಿಡಿ3: