ಸಾರಾಂಶ
ವಡ್ಡನಹೊಸಹಳ್ಳಿ ಗ್ರಾಮದ ಮಾರಶೆಟ್ಟಿಗೆ ಸೇರಿದ ಹಸು ಮೇಯುತ್ತಿದ್ದ ಸಮಯದಲ್ಲಿ ದಿಡೀರ್ ಹುಲಿ ದಾಳಿ ನಡೆಸಿದ್ದು, ಹಸುವಿನ ಕುತ್ತಿಗೆ ತೀವ್ರವಾಗಿ ಗಾಯಗೊಳಿಸಿದ್ದು,ರೈತರು ಕೂಗಿಕೊಂಡಾಗ ಹುಲಿ ಓಡಿ ಹೋಗಿದೆ.
ಗುಂಡ್ಲುಪೇಟೆ: ತಾಲೂಕಿನ ವಡ್ಡನಹೊಸಹಳ್ಳಿ ಗ್ರಾಮದ ಬಳಿ ಹುಲಿ ದಾಳಿಗೆ ಹಸುಯೊಂದು ತೀವ್ರವಾಗಿ ಗಾಯಗೊಂಡ ಘಟನೆ ಶನಿವಾರ ಬೆಳಗ್ಗೆ 11 ಗಂಟೆ ಸಮಯದಲ್ಲಿ ನಡೆದಿದೆ.
ವಡ್ಡನಹೊಸಹಳ್ಳಿ ಗ್ರಾಮದ ಮಾರಶೆಟ್ಟಿಗೆ ಸೇರಿದ ಹಸು ಮೇಯುತ್ತಿದ್ದ ಸಮಯದಲ್ಲಿ ದಿಡೀರ್ ಹುಲಿ ದಾಳಿ ನಡೆಸಿದ್ದು, ಹಸುವಿನ ಕುತ್ತಿಗೆ ತೀವ್ರವಾಗಿ ಗಾಯಗೊಳಿಸಿದ್ದು,ರೈತರು ಕೂಗಿಕೊಂಡಾಗ ಹುಲಿ ಓಡಿ ಹೋಗಿದೆ.ಈ ಸಂಬಂಧ ಗುಂಡ್ಲುಪೇಟೆ ಬಫರ್ ಜೋನ್ ಅರಣ್ಯ ಸಿಬ್ಬಂದಿ ಸ್ಥಳಕ್ಕೆ ದಾವಿಸಿ,ಹುಲಿ ಹುಡುಕಾಡಿದರೂ ಹುಲಿ ಮಾತ್ರ ಯಾರ ಕಣ್ಣಿಗೂ ಬಿದ್ದಿಲ್ಲ. ಗಾಯಗೊಂಡ ಹುಲಿಗೆ ಪರಿಹಾರ ನೀಡಬೇಕು ಎಂದು ರೈತರು ಆಗ್ರಹಿಸಿದ್ದಾರೆ.೪ಜಿಪಿಟಿ೩
ಗುಂಡ್ಲುಪೇಟೆ ತಾಲೂಕಿನ ವಡ್ಡನಹೊಸಹಳ್ಳಿ ಬಳಿ ಹುಲಿ ದಾಳಿ ನಡೆಸಿ ಹಸು ಗಾಯಗೊಳಿಸಿದೆ.130.4 kB