ಹುಲಿ ದಾಳಿಗೆ ಹಸು ಬಲಿ: ಅರಣ್ಯ ಸಿಬ್ಬಂದಿಗೆ ರೈತರ ತರಾಟೆ

| Published : Aug 12 2025, 12:30 AM IST

ಸಾರಾಂಶ

ಕೆಇಬಿ ಸ್ಟೇಷನ್‌ ಬಳಿ ವಾಸವಿರುವ ಗಂಗಪ್ಪಗೆ ಸೇರಿದ ಮನೆ ಕೊಟ್ಟಗೆಯಲ್ಲಿದ್ದ ಹಸುವನ್ನು ಭಾನುವಾರ ರಾತ್ರಿ ಹುಲಿ ದಾಳಿ ಮಾಡಿ ಸಾಯಿಸಿದೆ.

ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ

ತಾಲೂಕಿನ ಬೊಮ್ಮಲಾಪುರ ಗ್ರಾಮದ ಬಳಿ ಕೊಟ್ಟಿಗೆಯಲ್ಲಿದ್ದ ಹಸುವನ್ನು ಹುಲಿ ಸಾಯಿಸಿದ ಘಟನೆ ಭಾನುವಾರ ರಾತ್ರಿ ನಡೆದಿದೆ. ಈ ಹಿನ್ನೆಲೆಯಲ್ಲಿ ಹುಲಿ ಸೆರೆ ಹಿಡಿಯಬೇಕು ಎಂದು ರೈತರು ಅರಣ್ಯ ಇಲಾಖೆ ಸಿಬ್ಬಂದಿಗೆ ರೈತರು ತರಾಟೆಗೆ ತೆಗದುಕೊಂಡಿದ್ದಾರೆ.ಗ್ರಾಮದ ಕೆಇಬಿ ಸ್ಟೇಷನ್‌ ಬಳಿ ವಾಸವಿರುವ ಗಂಗಪ್ಪಗೆ ಸೇರಿದ ಮನೆ ಕೊಟ್ಟಗೆಯಲ್ಲಿದ್ದ ಹಸುವನ್ನು ಭಾನುವಾರ ರಾತ್ರಿ ಹುಲಿ ದಾಳಿ ಮಾಡಿ ಸಾಯಿಸಿದೆ. ವಿಷಯ ಅರಿತ ಗುಂಡ್ಲುಪೇಟೆ ಬಫರ್‌ ಜೋನ್‌ ವಲಯ ಅರಣ್ಯಾಧಿಕಾರಿ ಶಿವಕುಮಾರ್‌ ಹಾಗೂ ಸಿಬ್ಬಂದಿ ಸ್ಥಳಕ್ಕೆ ಹೋದಾಗ ರೈತರು ಸೇರಿದಂತೆ ಸುತ್ತಮುತ್ತಲಿನ ಗ್ರಾಮದ ರೈತರು ಆಕ್ರೋಶ ಹೊರ ಹಾಕಿದ್ದಾರೆ.

ಹುಲಿ ಸೆರೆ ಇಂದಿನಿಂದಲೇ ಆರಂಭಿಸಬೇಕು ಎಂದು ಅರಣ್ಯ ಸಿಬ್ಬಂದಿಯೊಂದಿಗೆ ಒತ್ತಾಯಿಸಿದಾಗ ಪ್ರತಿಕ್ರಿಯಿಸಿದ ಆರ್‌ಎಫ್‌ಒ ಶಿವಕುಮಾರ್‌ ಹುಲಿ ಸೆರೆ ಈಗಲೇ ಆಗುವುದಿಲ್ಲ. ಬೋನು ಇಡುವ ಜೊತೆಗೆ ಸಿಬ್ಬಂದಿಯಿಂದ ಕೂಂಬಿಂಗ್‌ ಕೂಡ ಮಾಡಿಸುತ್ತೇನೆ ಎಂದು ಹೇಳಿದರೂ ರೈತರು ಪಟ್ಟು ಬಿಟ್ಟಿರಲಿಲ್ಲ.

ನಿಮ್ಮ ಭರವಸೆ ನಮಗೆ ಬೇಕಾಗಿಲ್ಲ, ಹುಲಿ ಹಿಡಿಯಲು ಶುರು ಮಾಡಬೇಕು ಎಂದು ರೈತರು ಆಗ್ರಹಿಸಿದಾಗ ಸ್ಥಳಕ್ಕೆ ಹೋಗಿದ್ದ ಸಿಬ್ಬಂದಿ ಮರು ಮಾತನಾಡದೆ ಮೇಲಾಧಿಕಾರಿಗಳ ಗಮನಕ್ಕೆ ತಂದಿದ್ದಾರೆ.11ಜಿಪಿಟಿ2

ಗುಂಡ್ಲುಪೇಟೆ ತಾಲೂಕಿನ ಬೊಮ್ಮಲಾಪುರ ಬಳಿ ಹುಲಿ ದಾಳಿಗೆ ಹಸು ಬಲಿಯಾಗಿದೆ.