ಸಾರಾಂಶ
ಕನ್ನಡಪ್ರಭ ವಾರ್ತೆ ವಿಜಯಪುರ ಹೃದಯ ಶ್ವಾಸ ಮರುಚೇತನ ಅಂದರೆ ಸಿಪಿಆರ್ ಚಿಕಿತ್ಸೆಯ ಬಗ್ಗೆ ಜನಸಾಮಾನ್ಯರಲ್ಲಿ ಅರಿವು ಮೂಡುವುದರಿಂದ ಹೃದಯ ಸ್ತಂಭನದ ವೇಳೆ ಸಂಜೀವಿನಿಯಂತೆ ಜೀವ ಉಳಿಸಲು ಸಾಧ್ಯವಾಗುವುದು. ಇದರ ಬಗ್ಗೆ ವಿಧಾನದ ಕುರಿತು ತಿಳಿದು ಕೊಳ್ಳುವುದು ಪ್ರತಿಯೊಬ್ಬರ ಜವಾಬ್ದಾರಿ ಎಂದು ವಿಜಯಪುರ ಜಿಲ್ಲಾ ಕ್ಷಯ ರೋಗ ನಿರ್ಮೂಲನೆ ಅಧಿಕಾರಿ ಡಾ.ಮಲ್ಲನಗೌಡ ಬಿರಾದಾರ್ ತಿಳಿಸಿದರು.
ಕನ್ನಡಪ್ರಭ ವಾರ್ತೆ ವಿಜಯಪುರ
ಹೃದಯ ಶ್ವಾಸ ಮರುಚೇತನ ಅಂದರೆ ಸಿಪಿಆರ್ ಚಿಕಿತ್ಸೆಯ ಬಗ್ಗೆ ಜನಸಾಮಾನ್ಯರಲ್ಲಿ ಅರಿವು ಮೂಡುವುದರಿಂದ ಹೃದಯ ಸ್ತಂಭನದ ವೇಳೆ ಸಂಜೀವಿನಿಯಂತೆ ಜೀವ ಉಳಿಸಲು ಸಾಧ್ಯವಾಗುವುದು. ಇದರ ಬಗ್ಗೆ ವಿಧಾನದ ಕುರಿತು ತಿಳಿದು ಕೊಳ್ಳುವುದು ಪ್ರತಿಯೊಬ್ಬರ ಜವಾಬ್ದಾರಿ ಎಂದು ವಿಜಯಪುರ ಜಿಲ್ಲಾ ಕ್ಷಯ ರೋಗ ನಿರ್ಮೂಲನೆ ಅಧಿಕಾರಿ ಡಾ.ಮಲ್ಲನಗೌಡ ಬಿರಾದಾರ್ ತಿಳಿಸಿದರು.ನಗರದ ಬಸ್ ನಿಲ್ದಾಣದ ಆವರಣದಲ್ಲಿ, ಭಾರತಿಯ ವೈದ್ಯಕೀಯ ಸಂಘದ ಕಿರಿಯ ವೈದ್ಯರ ಸಮಿತಿ ಹಾಗೂ ಪಬ್ಲಿಕ್ ಹೆಲ್ತ್ ಸಮಿತಿ ಸಯೋಗದೊಂದಿಗೆ ಕೃತಕ ಗೊಂಬೆಗೆ ಹೃದಯ ಸ್ತಂಭನದ ಮರುಚೇತನ ವಿಧಾನಗಳನ್ನು ವಿವರಿಸಿ ತಿಳಿಸಿ ಮಾತನಾಡಿದರು.
ಈ ವೇಳೆ ಸಂಘದ ಅಧ್ಯಕ್ಷ ಡಾ.ಸಾಗರ್ ಮಾತನಾಡಿ, ಇಂಥ ಕಾರ್ಯಕ್ರಮಗಳು ನಡೆಯಲು ಸಮಾಜದ ಪ್ರತಿಯೊಬ್ಬರು ಇದರ ಬಗ್ಗೆ ತಿಳಿದುಕೊಳ್ಳಬೇಕು ಎಂದರು.ಪಬ್ಲಿಕ್ ಹೆಲ್ತ್ ಸಮಿತಿಯ ರಾಜ್ಯ ಚೇರ್ಮನ್ ಡಾ.ಸುರೇಶ್ ಕಾಗಲ್ಕರ್ ಮಾತನಾಡಿ, ನೆರೆಹೊರೆಯ ಅನೇಕ ಜಿಲ್ಲೆಗಳಲ್ಲಿ ಇತ್ತೀಚೆಗೆ ಹೃದಯ ಸ್ತಂಭನದಿಂದ ಮರಣ ಸಂಭವಿಸುತ್ತಿದ್ದು, ಅದರಲ್ಲಿ ಹೆಸರಾಂತ ನಟ ಪುನೀತ್ ರಾಜಕುಮಾರ್ ಹೃದಯಸ್ತಂಭನಕ್ಕೆ ಒಳಗಾಗಿ ಮೃತಪಟ್ಟರು. ಇಂತಹ ಪ್ರತ್ಯಕ್ಷಗಳಿಂದ ಹೃದಯ ಶ್ವಾಸ ಮರುಚೇತನ ವಿಧಾನಗಳನ್ನು ಪ್ರತಿಯೊಬ್ಬರು ತಿಳಿಯಬೇಕು. ಹೃದಯ ಸ್ತಂಭನ ಆದಾಗ ಎದೆಯ ಮಧ್ಯಭಾಗದಲ್ಲಿ, ಎರಡು ಕೈಗಳ ಮುಷ್ಠಿಯ ಮೇಲೆ ಮುಷ್ಟಿಯಿಂದ 30 ಸಲ ಒತ್ತಬೇಕು. ಎರಡು ಸಲ ಬಾಯಿಂದ ಬಾಯಿಗೆ ಶ್ವಾಸ ಊದುವುದರಿಂದ ಹೃದಯ ಮರುಚೇತನ ಹಾಗೂ ಆಮ್ಲಜನಕವು ಸ್ವಾಶಕೋಶದಲ್ಲಿ ನಿಲ್ಲುವಂತೆ ಮಾಡುತ್ತದೆ. ನಂತರ ಹತ್ತಿರದ ಆಸ್ಪತ್ರೆಗೆ ಸ್ಥಳಾಂತರ ಮಾಡುವುದರಿಂದ ಆ ವ್ಯಕ್ತಿಗೆ ಮರುಜೀವ ಕೊಡಲು ಸಹಾಯಕವಾಗಲಿದೆ ಎಂದು ಹೇಳಿದರು.ಸಂಘದ ಕಾರ್ಯದರ್ಶಿ ಡಾ.ಚಿರಂಜೀವಿ ಮಾತನಾಡಿ, ಅನೇಕ ಜನರಲ್ಲಿ ತಪ್ಪು ತಿಳುವಳಿಕೆ ಅಂದರೆ ಹೃದಯ ಸ್ತಂಭನವು ಹೃದಯಾಘಾತವಲ್ಲ. ಆದರೆ ಹೃದಯಾಘಾತದಿಂದ ಹೃದಯ ಸ್ತಂಭನ ಆಗಬಹುದು. ವರ್ಷಕ್ಕೊಮ್ಮೆಯಾದರೂ ಹೃದಯದ ತಪಾಸಣೆ ಮಾಡಿಕೊಳ್ಳುವುದು ಅತ್ಯವಶ್ಯ. ರಕ್ತದೊತ್ತಡ, ಮಧುಮೇಹ, ಬೊಜ್ಜು, ಕೌಟುಂಬಿಕ ಹೃದಯದ ರೋಗಗಳು ಇದ್ದವರು ಬೇಗನೆ ಇಸಿಜಿ, ಟುಡಿ ಈಕೋ, ಟಿಎಂಟಿ ಮಾಡಿಸಿಕೊಳ್ಳಬೇಕು ಎಂದರು.ಕಾರ್ಯಕ್ರಮದಲ್ಲಿ ಡಾ. ಬರಿದ ನಿಶಬ್, ಡಾ.ಸುಮಯ್ಯ, ಡಾ. ಸಮ್ ರಿಂನೀ, ಡಾ.ಸುಲೇಮಾನ್, ಡಾ. ಪಾಷಾ, ಡಾ. ಸಮೀದ್ ನದಾಫ, ಬಸ್ ನಿಲ್ದಾಣದ ವ್ಯವಸ್ಥಾಪಕರು ಹಾಗೂ ಸಿಬ್ಬಂದಿ ಭಾಗವಹಿಸಿದ್ದರು.