ಸಾರಾಂಶ
ಕನ್ನಡಪ್ರಭ ವಾರ್ತೆ ಗುಳೇದಗುಡ್ಡ
ಗುಳೇದಗುಡ್ಡ ಪೊಲೀಸ್ ಠಾಣಾ ವ್ಯಾಪ್ತಿಯ ಇಂಜಿನವಾರಿ ಹಾಗೂ ಆಸಂಗಿ ಗ್ರಾಮಗಳಲ್ಲಿ ಮಲಪ್ರಭಾ ನದಿಯಲ್ಲಿ ರೈತರು ಜಮೀನುಗಳಿಗೆ ನೀರು ಹಾಯಿಸಲು ಜೋಡಿಸಿದ್ದ ಮೋಟಾರ್ ಪಂಪ್‌ಸೆಟ್, ಹಂಡೆ ಗಳನ್ನು ಕಳ್ಳತನ ಪ್ರಕರಣದಲ್ಲಿ ಗುಳೇದಗುಡ್ಡ ಪೊಲೀಸರು 5 ಪಂಪಸೆಟ್, 8 ತಾಮ್ರದ ಹಂಡೆಗಳನ್ನು ವಶಪಡಿಸಿಕೊಂಡಿದ್ದಾರೆ.ಜಿಲ್ಲಾಪೋಲಿಸ್ ವರಿಷ್ಠಾಧಿಕಾರಿ, ಹುನಗುಂದ ಡಿಎಸ್‌ಪಿ ಕುಲಕರ್ಣಿ ಹಾಗೂ ಸಿಪಿಐ ಕರೆಯಪ್ಪ ಬನ್ನೆ ಅವರ ಮಾರ್ಗದರ್ಶನದಲ್ಲಿ ತಂಡ ಕಟ್ಟಿಕೊಂಡು ತನಿಖೆಯ ಬೆನ್ನಟ್ಟಿದ ಪಿಎಸ್‌ಐ ಸಿದ್ದಪ್ಪ ಯಡಹಳ್ಳಿ ಹಾಗೂ ಸಿಬ್ಬಂದಿ ಕಳ್ಳತನ ಪ್ರಕರಣವನ್ನು ಭೇದಿಸಿ ಕಳ್ಳರನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ.ಜು.23ರಂದು ಮತ್ತು ಆಸಂಗಿ ಗ್ರಾಮದಲ್ಲಿ ಮೋಟಾರ್ ಪಂಪಸೆಟ್ ಕಳ್ಳತನವಾದ ಬಗ್ಗೆ ಇಂಜಿನವಾರಿ ಗ್ರಾಮದ ಭೀಮನಗೌಡ ಯಲಗೂರದಪ್ಪ ಗೌಡರ, ರಾಮಣ್ಣ ನೂರಂದಪ್ಪ ತಳವಾರ 5 ಮೋಟಾರ್ ಪಂಪಸೆಟ್ ಕಳ್ಳತನವಾದ ಬಗ್ಗೆ ದೂರು ನೀಡಿದ್ದರು. ತನಿಖೆ ನಡೆಸಿದ ಪೊಲೀಸರು ಜು.24 ರಂದು ಮಹಿಂದ್ರಾ ಬೊಲೆರೋ ವಾಹನದಲ್ಲಿ ಕಳ್ಳತನ ಮಾಡಿದ ಪಂಪ್‌ಸೆಟ್ ಸಾಗಿಸುತ್ತಿದ್ದಾಗ ಗುಳೇದಗುಡ್ಡ ಪಟ್ಟಣದ ನಾಕಾಬಂದಿ ತಪಾಸಣೆ ವೇಳೆ ಸಂಶಯ ಬಂದು ಹುನಗುಂದ ನಿವಾಸಿ ಆರೋಪಿ ಸತೀಶ ಮಣಿ ಮಾದರ ಈತನನ್ನು ವಿಚಾರಿಸಿದಾಗ ನಾನು ಹಾಗೂ 4 ಜನರು ಕೂಡಿಕೊಂಡು ಆಸಂಗಿ ಮತ್ತು ಇಂಜಿನವಾರಿ ಗ್ರಾಮದ ಮಲಪ್ರಭಾ ನದಿಯ ದಂಡೆಯ ಮೇಲಿನ 8 ಮೋಟಾರ್ ಪಂಪಸೆಟ್ ಕಳ್ಳತನ ಮಾಡಿರುವುದನ್ನು ಬಾಯ್ಬಿಟ್ಟಿದ್ದಾನೆ.
ಆರೋಪಿಯಿಂದ 5 ಮೋಟಾರ್ ಪಂಪಸೆಟ್ (1.15 ಲಕ್ಷ ಮೌಲ್ಯದ) ಹಾಗೂ ಒಂದು ಬೊಲೆರೋ ವಾಹನ ಜಪ್ತಿ ಮಾಡಿಕೊಂಡಿದ್ದಾರೆ.ಆಸಂಗಿ, ಲಾಯದಗುಂದಿ, ಸಬ್ಬಲಹುಣಸಿ ಗ್ರಾಮದಲ್ಲಿ ಮನೆಯ ಮುಂದೆ ಇಟ್ಟಿದ್ದ 30 ಕೆ.ಜಿ. ತೂಕದ 5 ತಾಮ್ರದ ಹಂಡೆಗಳು ಕಳ್ಳತನವಾಗಿದ್ದರ ಕುರಿತು ಕರಣ ದಾಖಲಾಗಿತ್ತು. ಬಳ್ಳಾರಿ ಜಿಲ್ಲೆಯ ಕುರಗೋಡ ಗ್ರಾಮದ ಮಂಜುನಾಥ ಮರಿಸ್ವಾಮಿ ಹಂಡಿಜೋಗಿ ಎಂಬಾತನನನ್ಉ ಬಂಧಿಸಿ 8 ತಾಮ್ರದ ಹಂಡೆಗಳನ್ನು ವಶಪಡಿಸಿಕೊಂಡಿದ್ದಾರೆ.
ಕಾರ್ಯಾಚರಣೆಯಲ್ಲಿ ಪೊಲೀಸ್ ಠಾಣಿಯ ಪಿಎಸ್‌ಐ ಸಿದ್ದಪ್ಪ ಯಡಹಳ್ಳಿ, ಎಎಸ್‌ಐ ಬಿಳಿಕುದರಿ, ಶರಣು ಕೂಡ್ಲೆಪ್ಪನವರ, ವಿ.ಎಚ್, ತುಂಬದ, ಬಿ.ಎಮ್. ಮೊಘಲನ್ನವರ ಗುರು ಮನ್ನಿಕಟ್ಟಿ, ಅಶೋಕ ಕೋಟಿ, ಸಂತೋಷ ಮೇಟಿ, ಎಂ.ಎಸ್.ಭಾವಿಕಟ್ಟಿ, ರಜಪೂತ ಸೇರಿದಂತೆ ಇತರರ ಸಿಬ್ಬಂದಿಗಳ ಕಾರ್ಯಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಧಿಕಾರಿ, ಡಿವೈಎಸ್‌ಪಿ ಅವರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.