ಶೀಘ್ರ ಚಡ್ಡಿ ಗ್ಯಾಂಗ್‌ ಹೆಡೆಮುರಿ ಕಟ್ಟುತ್ತೇವೆ

| Published : Jul 28 2025, 01:40 AM IST

ಶೀಘ್ರ ಚಡ್ಡಿ ಗ್ಯಾಂಗ್‌ ಹೆಡೆಮುರಿ ಕಟ್ಟುತ್ತೇವೆ
Share this Article
  • FB
  • TW
  • Linkdin
  • Email

ಸಾರಾಂಶ

ಕನ್ನಡಪ್ರಭ ವಾರ್ತೆ ತಾಳಿಕೋಟೆ ಇತ್ತೀಚಿಗೆ ತಾಳಿಕೋಟೆ ಪಟ್ಟಣದಲ್ಲಿ ಗಣೇಶ ಬಡಾವಣೆಯಲ್ಲಿ ಕಂಡುಬಂದ ಚಡ್ಡಿಗ್ಯಾಂಗ್ ಎಂಬ ಕಳ್ಳರ ಗ್ಯಾಂಗ್ ಅನ್ನು ಬೇಧಿಸಲು ಹಾಗೂ ಶೋಧಕ್ಕೆ ಮುಂದಾಗಿದ್ದು, ಶೀಘ್ರವೇ ಅವರ ಹೆಡೆಮುರಿ ಕಟ್ಟಿ ನ್ಯಾಯಾಲಯಕ್ಕೆ ಒಪ್ಪಿಸುತ್ತೇವೆ ಎಂದು ಮುದ್ದೇಬಿಹಾಳದ ಸಿಪಿಐ ಮಹ್ಮದಪಶುಉದ್ದೀನ ವಿಶ್ವಾಸ ವ್ಯಕ್ತಪಡಿಸಿದರು.

ಕನ್ನಡಪ್ರಭ ವಾರ್ತೆ ತಾಳಿಕೋಟೆ

ಇತ್ತೀಚಿಗೆ ತಾಳಿಕೋಟೆ ಪಟ್ಟಣದಲ್ಲಿ ಗಣೇಶ ಬಡಾವಣೆಯಲ್ಲಿ ಕಂಡುಬಂದ ಚಡ್ಡಿಗ್ಯಾಂಗ್ ಎಂಬ ಕಳ್ಳರ ಗ್ಯಾಂಗ್ ಅನ್ನು ಬೇಧಿಸಲು ಹಾಗೂ ಶೋಧಕ್ಕೆ ಮುಂದಾಗಿದ್ದು, ಶೀಘ್ರವೇ ಅವರ ಹೆಡೆಮುರಿ ಕಟ್ಟಿ ನ್ಯಾಯಾಲಯಕ್ಕೆ ಒಪ್ಪಿಸುತ್ತೇವೆ ಎಂದು ಮುದ್ದೇಬಿಹಾಳದ ಸಿಪಿಐ ಮಹ್ಮದಪಶುಉದ್ದೀನ ವಿಶ್ವಾಸ ವ್ಯಕ್ತಪಡಿಸಿದರು.

ಗ್ಯಾಂಗ್‌ ಬಗ್ಗೆ ಇಲಾಖೆ ಕೈಗೊಂಡಿರುವ ಕಾರ್ಯಗಳ ಬಗ್ಗೆ ಮಾಹಿತಿ ನೀಡಲು ಸ್ಥಳೀಯ ವಿಠ್ಠಲ ಮಂದಿರದಲ್ಲಿ ಕರಿದಿದ್ದ ವಿವಿಧ ವ್ಯಾಪಾರಸ್ಥರ ಹಾಗೂ ಸಾರ್ವಜನಿಕರ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ನಿಮ್ಮ ರಕ್ಷಣೆಗೆ ನಾವು ೨೪ ಗಂಟೆ ಕಾಲ ಸದಾ ಸಿದ್ಧರಿದ್ದೆವೆ. ಮುಖ್ಯವಾಗಿ ಪ್ರತಿಯೊಬ್ಬ ವ್ಯಾಪಾರಸ್ಥರು ಹಾಗೂ ಮುಖ್ಯ ಬಡಾವಣೆಯಲ್ಲಿ ಸಿಸಿ ಕ್ಯಾಮರಾವನ್ನು ಅಳವಡಿಸಿಕೊಳ್ಳಬೇಕೆಂಬ ಕಾನೂನು ಕಡ್ಡಾಯವಾಗಿದೆ. ಈ ಕುರಿತು ೨೦೧೭ರಲ್ಲಿಯೇ ಸರ್ಕಾರ ಕಾನೂನು ಜಾರಿ ಮಾಡಿದೆ. ಈ ಹಿಂದೆ ನೋಟಿಸ್ ಸಹ ಜಾರಿ ಮಾಡಿದ್ದೇವೆ. ಮುಖ್ಯವಾಗಿ ನೈಟ್ ವಿಷನ್ ಕ್ಯಾಮರಾವನ್ನು ಅಳವಡಿಸಿಕೊಂಡರೆ ಅಪರಿಚಿತರಾಗಲಿ, ಕಳ್ಳರಾಗಲಿ ಹಾಗೂ ಅವರು ತಂದಂತಹ ಗಾಡಿಯ ನಂಬರ್ ಸಹ ಸ್ವಚ್ಛವಾಗಿ ಗೋಚರಿಸುತ್ತದೆ. ಅಂತಹ ಹೈ ಕ್ಯಾಮರಾ ವ್ಯಾಪಾರಸ್ಥರು ಅಳವಡಿಸಿಕೊಳ್ಳಬೇಕು. ಈ ಚಡ್ಡಿ ಗ್ಯಾಂಗ್‌ ಹಾವಳಿ ಈ ಹಿಂದೆ ವಿಜಯಪುರ ಜಿಲ್ಲೆಯಲ್ಲಿಯೂ ಸಹ ನಡೆದಿತ್ತು. ಅಲ್ಲಿ ಈಗಾಗಲೇ ನಿಯಂತ್ರಣವಾಗಿದೆ. ಇಂತಹ ಪ್ರಕರಣಗಳು ಇಲ್ಲಿ ನಡೆಯಬಾರದು ಎಂಬ ಉದ್ಧೇಶದಿಂದ ೭ ದಿನದೊಳಗಾಗಿ ಪ್ರಮುಖ ಬಡಾವಣೆಯಲ್ಲಿ ಕ್ಯಾಮರಾ ಅಳವಡಿಸಿಕೊಳ್ಳಬೆಕೇಂದು ಅಧಿಕಾರಿಗಳು ಸುಚಿಸಿದರು.

೧೧೨ ತುರ್ತು ಸಂಖ್ಯೆಗೆ ದೂರು ನೀಡಿದವರು ವಿಳಾಸ ತಿಳಿಸಿದರೇ ಆ ಸ್ಥಾನಕ್ಕೆ ಮಿಂಚಿನ ವೇಗದಲ್ಲಿ ಸಿಬ್ಬಂದಿ ಬರುತ್ತಾರೆ. ನಾಗರಿಕರು ನಿಮ್ಮ ನಿಮ್ಮ ವಸ್ತು ವಡವೆಗಳನ್ನು ಜೋಪಾನು ಮಾಡಿಕೊಳ್ಳುವ ವ್ಯವಸ್ಥೆಯಲ್ಲಿರಬೇಕು. ಸೈಬರ್ ಕ್ರೈಂ ಕುರಿತು ಉತ್ತರ ಪ್ರದೇಶದಲ್ಲಿ ನಡೆಯುತ್ತಿರುವ ಪ್ರಕರಣಗಳ ಕುರಿತು ಮಾಹಿತಿ ನೀಡಿದರು. ೨೫ ಹಾಗೂ ೩೦ ಕೇಸುಗಳು ತಾಳಿಕೋಟೆ ಹಾಗೂ ಮುದ್ದೇಬಿಹಾಳದಲ್ಲಿ ರಜಿಸ್ಟರ್‌ ಆಗಿವೆ. ಬಾಲ್ಯ ವಿವಾಹಗಳಂತಹ ವರದಿಗಳು ಬಹಳ ನಡೆಯುತ್ತಿವೆ. ಈ ಕಾರ್ಯ ಮಾಡಿದವರಿಗೆ ₹ ೨೦ ರಿಂದ ೫೦ ಸಾವಿರ ದಂಡ ಹಾಕಲಾಗುತ್ತದೆ. ಚಿಕ್ಕ ಮಕ್ಕಳ ಕೈಯಲ್ಲಿ ದ್ವಿ ಚಕ್ರ ವಾಹನ ಅಥವಾ ೪ ಚಕ್ರ ವಾಹನಗಳನ್ನು ಕೊಡಬೇಡಿ. ಇದು ಅಪಘಾತಕ್ಕೆ ಕಾರಣವಾಗಲಿದೆ ಎಂದು ಸಿಪಿಐ ಎಚ್ಚರಿಕೆ ನೀಡಿದರು.ಪಿಎಸ್‌ಐ ಜ್ಯೋತಿ ಖೋತ್ ಮಾತನಾಡಿ, ಇತ್ತೀಚೆಗೆ ಚಡ್ಡಿ ಗ್ಯಾಂಗ್‌ನವರು ಗಣೇಶ ನಗರ ಬಡಾವಣೆಗೆ ತೆರಳಿ ಕಳುವಿಗೆ ಯತ್ನಿಸಿದ್ದು, ನಾಗರಿಕರು ದೂರವಾಣಿ ಮಾಡಿದಾಗ ಕೂಡಲೇ ಸ್ಪಂದಿಸಿದ್ದೇವೆ. ತಾಳಿಕೋಟೆ ಪಟ್ಟಣ ಸುತ್ತವರೆದು ಆ ಗ್ಯಾಂಗ್‌ನ್ನು ಬಂಧಿಸಬೇಕೆಂಬ ಆತುರದಲ್ಲಿದ್ದಾಗ ಪರಾರಿಯಾಗಿದ್ದಾರೆ. ಅ್ಲದೇ, ೬೫ ಸಿಬ್ಬಂದಿ ಇರಬೇಕಾದ ನಮ್ಮ ಕಚೇರಿಯಲ್ಲಿ ೪೨ ಜನ ಸಿಬ್ಬಂದಿ ಇದ್ದಾರೆ. ಕಾರಣ ಅಲ್ಲಲ್ಲಿ ಸಿಬ್ಬಂದಿ ನೇಮಕ ಮಾಡುತ್ತಿರುವುದರಿಂದ ಸ್ವಲ್ಪ ವಿಳಂತೆವಾಗುತ್ತಿದೆ. ಈ ಚಡ್ಡಿ ಗ್ಯಾಂಗ್ ಕುರಿತು ಯಾವುದೇ ಭಯ ಬೇಡ. ಈಗಾಗಲೇ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿದ್ದೇವೆ ಇಂತಹ ಕಾರ್ಯಗಳನ್ನು ಹತೋಟೆಗೆ ತರಲಿದ್ದೇವೆ. ಈ ಹಿಂದೆ ಬೆಂಗಳೂರಿನಲ್ಲಿಯೂ ಕೂಡ ಕೆಲವು ಪ್ರಕರಣಗಳು ನಡೆದಿದ್ದರೂ, ಅವುಗಳನ್ನು ಬೇಧಿಸಿದ್ದೇವೆ ಎಂದು ತಿಳಿಸಿದರು.ಅಪರಾಧ ವಿಭಾಗ ಪಿಎಸ್‌ಐ ಆರ್.ಎಸ್.ಭಂಗಿ ಮಾತನಾಡಿ, ತಾಳಿಕೋಟೆ ಪಟ್ಟಣದಲ್ಲಿ ಸಿಸಿ ಕ್ಯಾಮರಾಗಳನ್ನು ಅಳವಡಿಸಿಕೊಳ್ಳುವ ಕಾರ್ಯವಾಗಬೇಕು. ಅಲ್ಲಲ್ಲಿ ಕೆಲವು ಕ್ಯಾಮರಾಗಳಿವೆ. ಇನ್ನೂ ಕ್ಯಾಮರಾಗಳನ್ನು ಅಳವಡಿಸಬೇಕು. ಈ ವ್ಯವಸ್ಥೆಗೆ ನಾಗರಿಕರು ಹಾಗೂ ವ್ಯಾಪಾರಸ್ಥರು ಮುಂದಾಗಿ ಪೊಲೀಸ್ ಇಲಾಖೆಯೊಂದಿಗೆ ಸಹಕರಿಸಬೇಕು ಎಂದರು.ಈ ಸಮಯದಲ್ಲಿ ಕಾಶಿನಾಥ ಮುರಾಳ, ಎಂ.ಎಸ್.ಸರಶೆಟ್ಟಿ, ವಿಜಯಸಿಂಗ್ ಹಜೇರಿ, ಬಸವರಾಜ ಕಟ್ಟಿಮನಿ, ಜಿ.ಟಿ.ಘೋರ್ಪಡೆ, ಪ್ರಭುಗೌಡ ಮದರಕಲ್ಲ, ಪ್ರಕಾಶ ಹಜೇರಿ ಸೇರಿದಂತೆ ಹಲವರು ಹಾಜರಿದ್ದರು.