ಕಾರ್ಗಿಲ್ ವಿಜಯ ದಿವಸ ಆಚರಣೆ

| Published : Jul 28 2025, 01:39 AM IST

ಸಾರಾಂಶ

ಖಾಸಗಿ ಬಸ್‌ ನಿಲ್ದಾಣದ ಪುಟ್ಟಪ್ಪ ವೃತ್ತದಲ್ಲಿ ವಿಜಯೋತ್ಸವ ಆಚರಿಸಲಾಯಿತು. ಈ ಸಂದರ್ಭ ಹಲವಾರು ಗಣ್ಯರು ಪಾಲ್ಗೊಂಡರು.

ಕನ್ನಡಪ್ರಭವಾರ್ತೆ ಸೋಮವಾರಪೇಟೆ

ಭಾರತದ ವೀರ ಸೈನಿಕರು ಜು. 26 1999 ರಂದು ಪಾಪಿ ಪಾಕಿಸ್ತಾನದ ವಿದ್ರೋಹಿಗಳನ್ನು ಕಾರ್ಗಿಲ್ ಕಣಿವೆಯಿಂದ ಹಿಮ್ಮೆಟಿಸಿ ದೇಶದ ವಿಜಯ ಪಾತಕೆಯನ್ನು ಹಾರಿಸಿದ ಸ್ಮರಣೀಯ ದಿನ ಪ್ರಯುಕ್ತ ಹಿಂದೂ ಜಾಗರಣ ವೇದಿಕೆಯ ವತಿಯಿಂದ ಖಾಸಗಿ ಬಸ್ ನಿಲ್ದಾಣದ ಪುಟ್ಟಪ್ಪ ವೃತ್ತದಲ್ಲಿ ವಿಜಯೋತ್ಸವ ಆಚರಿಸಲಾಯಿತು.ಶೌರ್ಯದ ಸಂಸ್ಕರಣೆಯೊಂದಿಗೆ ಭಾರತದ ಜನಕೋಟಿ ಅಂದಿನಿಂದ ಇಂದಿಗೂ ದೇಶದ ಸೈನ್ಯಕ್ಕೆ ಆತ್ಮಸ್ಥೆರ್ಯ ತುಂಬುವುದರೊಂದಿಗೆ ಪ್ರತಿ ವರ್ಷ ಈ ಅವಿಸ್ಮರಣೀಯ ದಿನವನ್ನು ವಿಜಯ ದಿವಸವೆಂದು ಆಚರಿಸಿಕೊಂಡು ಬರಲಾಗುತ್ತಿದೆ ಎಂದು ಹಿಂದೂ ಜಾಗರಣ ವೇದಿಕೆಯ ತಾಲೂಕು ಸಂಯೋಜಕರಾದ ಎಂ.ಬಿ. ಉಮೇಶ್ ಹೇಳಿದರು. ಈ ಸಂದರ್ಭ ಪ್ರಮುಖರಾದ ಸುಭಾಶ್ ತಿಮ್ಮಯ್ಯ, ಹರ್ಷ, ರೂಪಾ ಸತೀಶ್, ಹೇಮಂತ್ , ಸಾಗರ್, ನೆಹರು, ಮೋಹನ್, ರಮೇಶ್ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.