ಸ್ವಚ್ಛ ಪರಿಸರ ನಿರ್ಮಿಸಿ

| Published : Feb 01 2024, 02:00 AM IST

ಸಾರಾಂಶ

ಗಾಂಧೀಜಿಯವರ ಹುತಾತ್ಮ ದಿನದಂಗವಾಗಿ ಕಾನೂನು ಸೇವಾ ಪ್ರಾಧಿಕಾರ ಬಾಗಲಕೋಟೆ, ತಾಲೂಕು ಕಾನೂನು ಸೇವಾ ಸಮೀತಿ ಮುಧೋಳ, ವಕೀಲರ ಸಂಘ ಮುಧೋಳ ಮತ್ತು ನಗರಸಭೆ ಇವುಗಳ ಸಂಯುಕ್ತ ಆಶ್ರಯದಲ್ಲಿ ಮಂಗಳವಾರ ಬೆಳಗ್ಗೆ ಕೋರ್ಟ್

ಕನ್ನಡ ಪ್ರಭ ವಾರ್ತೆ ಮುಧೋಳ

ಸ್ವಚ್ಛತೆಯಿಂದ ಸುಂದರ ಪರಿಸರ ನಿರ್ಮಾಣ ಮಾಡಲು ಪ್ರತಿಯೊಬ್ಬರ ಸಹಕಾರ ಮತ್ತು ಹೊಣೆಗಾರಿಕೆ ಮುಖ್ಯವಾಗಿದೆ. ಗಾಂಧೀಜಿಯವರ ನಡೆ, ನುಡಿ ಅವರ ಕಂಡ ಕನಸನ್ನು ಪ್ರಧಾನಿ ಮೋದಿ ಅವರ ಕನಸು ನನಸು ಮಾಡಲು ಗಾಂಧಿ ಜಯಂತಿಯಂದು ಸ್ವಚ್ಛತಾ ಅಭಿಯಾನಕ್ಕೆ ಚಾಲನೆ ನೀಡಿ ಮನೆಗೊಂದು ಶೌಚಾಲಯ ನಿರ್ಮಿಸೋಣ, ಬಯಲು ಶೌಚಾಲಯ ಮುಕ್ತ ಭಾರತ ದೇಶ ಕಟ್ಟೋಣ ಎಂದು ಮುಧೋಳ ನ್ಯಾಯಾಲಯದ ಪ್ರಧಾನ ಹಿರಿಯ ದಿವಾಣಿ ನ್ಯಾಯಾಧೀಶೆ ಗೀತಾಮಣಿ ಹೇಳಿದರು.

ಗಾಂಧೀಜಿಯವರ ಹುತಾತ್ಮ ದಿನದಂಗವಾಗಿ ಕಾನೂನು ಸೇವಾ ಪ್ರಾಧಿಕಾರ ಬಾಗಲಕೋಟೆ, ತಾಲೂಕು ಕಾನೂನು ಸೇವಾ ಸಮೀತಿ ಮುಧೋಳ, ವಕೀಲರ ಸಂಘ ಮುಧೋಳ ಮತ್ತು ನಗರಸಭೆ ಇವುಗಳ ಸಂಯುಕ್ತ ಆಶ್ರಯದಲ್ಲಿ ಮಂಗಳವಾರ ಬೆಳಗ್ಗೆ ಕೋರ್ಟ್ ಆವರಣದಲ್ಲಿ ಹಮ್ಮಿಕೊಂಡಿದ್ದ ಸ್ವಚ್ಛತಾ ಅಭಿಯಾನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿ, ನಗರ, ಪಟ್ಟಣ, ಗ್ರಾಮೀಣ ಪ್ರದೇಶಗಳಲ್ಲಿ ಸ್ವಚ್ಛತೆಯಿಂದ ಸುಂದರ ಪರಿಸರ ನಿರ್ಮಾಣ ಮಾಡಲು ಪ್ರತಿಯೊಬ್ಬರ ಸಹಕಾರ ಮತ್ತು ಹೊಣೆಗಾರಿಕೆ ಇದೆ ಎಂದು ಹೇಳಿದರು.

ಪ್ರಧಾನ ದಿವಾಣಿ ನ್ಯಾಯಾಧೀಶ ಸಿದ್ದನಗೌಡ ಪಾಟೀಲ್ ಮಾತನಾಡಿ, ಪ್ರತಿಜೀವಿಗೂ ಬದುಕಲು ನೀರು ಅಮೂಲ್ಯವಾಗಿದೆ. ಬೇಸಿಗೆಕಾಲ ಪ್ರಾರಂಭವಾಗಿದೆ ಮಿತವಾಗಿ ಬಳಸಿ ನೀರು ಪೋಲಾಗದಂತೆ ನೋಡಿಕೊಳ್ಳೋದು ನಮ್ಮ ನಿಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದರು.

ನಗರಸಭೆ ಪೌರಾಯುಕ್ತ ಗೋಪಾಲ ಕಾಸೆ ಮತ್ತು ವಕೀಲರ ಸಂಘದ ಅಧ್ಯಕ್ಷ ವಿ.ಡಿ. ಕತ್ತಿ ಅವರು ಪರಿಸರದ ಕುರಿತು ಸಾಂದರ್ಭಿಕವಾಗಿ ಮಾತನಾಡಿದರು

ಪ್ರಕಾಶ ಎಂ. ವಸ್ತ್ರದ, ಆರ್.ಜಿ. ಕಾತರಕಿ, ಬಿ.ಆರ್. ಸೊನ್ನದ ಹಾಗೂ ಕೋರ್ಟ ಸಿಬ್ಬಂದಿ ಇತರರು ಉಪಸ್ಥಿತರಿದ್ದರು.