ಮಾಳಿ ಸಮಾಜಕ್ಕೆ ನಿಗಮ ಮಂಡಳಿ ರಚಿಸಿ

| Published : May 29 2024, 12:51 AM IST

ಸಾರಾಂಶ

ಮಾಳಿ ಮಾಲಗಾರ ಸಮಾಜಕ್ಕೆ ಶೀಘ್ರ ನಿಗಮ ಮಂಡಳಿ ರಚನೆ ಮಾಡಿ, ಹಿಂದುಳಿದ ಸಮುದಾಯವನ್ನು ಮೇಲೆತ್ತುವ ಕೆಲಸವನ್ನು ರಾಜ್ಯ ಸರ್ಕಾರ ಮಾಡಬೇಕಾಗಿದೆ. ಈ ನಿಟ್ಟಿನಲ್ಲಿ ನಾವೆಲ್ಲರೂ ಒಗ್ಗಟ್ಟಿನಿಂದ ಸರ್ಕಾರವನ್ನು ಒತ್ತಾಯಿಸೋಣ ಎಂದು ಸಮಾಜದ ಹಿರಿಯ ಮುಖಂಡ ಡಾ.ಸಿ.ಬಿ.ಕುಲಗೋಡ ಹೇಳಿದರು.

ಕನ್ನಡಪ್ರಭ ವಾರ್ತೆ ಅಥಣಿ

ಮಾಳಿ ಮಾಲಗಾರ ಸಮಾಜಕ್ಕೆ ಶೀಘ್ರ ನಿಗಮ ಮಂಡಳಿ ರಚನೆ ಮಾಡಿ, ಹಿಂದುಳಿದ ಸಮುದಾಯವನ್ನು ಮೇಲೆತ್ತುವ ಕೆಲಸವನ್ನು ರಾಜ್ಯ ಸರ್ಕಾರ ಮಾಡಬೇಕಾಗಿದೆ. ಈ ನಿಟ್ಟಿನಲ್ಲಿ ನಾವೆಲ್ಲರೂ ಒಗ್ಗಟ್ಟಿನಿಂದ ಸರ್ಕಾರವನ್ನು ಒತ್ತಾಯಿಸೋಣ ಎಂದು ಸಮಾಜದ ಹಿರಿಯ ಮುಖಂಡ ಡಾ.ಸಿ.ಬಿ.ಕುಲಗೋಡ ಹೇಳಿದರು.

ರಾಮಲಿಂಗೇಶ್ವರ ದೇವಸ್ಥಾನದ ಆವರಣದಲ್ಲಿ ಅಥಣಿ ತಾಲೂಕು ಮಾಳಿ ಸಮಾಜ ಹಾಗೂ ಮಹಾತ್ಮ ಜ್ಯೋತಿಬಾ ಫುಲೆ ಯುವಕ ಸಂಘದ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಮ್ಮ ಸಮಾಜದ ಹಕ್ಕೋತ್ತಾಯಕ್ಕಾಗಿ ಅತೀ ಶೀಘ್ರದಲ್ಲಿ ಎಲ್ಲ ಸಮಾಜದವರು ಸೇರಿ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಎಲ್ಲರೂ ಸೇರಿ ಪ್ರತಿಭಟನೆ ಮಾಡೋಣ. ಸರ್ಕಾರ ನಮ್ಮ ಬೇಡಿಕೆ ಈಡೇರಿಸುವವರೆಗೆ ಎಲ್ಲರೂ ಒಗ್ಗಟ್ಟಿನಿಂದ ಹೋರಾಟ ಮಾಡಿ ಸಾಮಾಜಿಕ ನ್ಯಾಯ ಪಡೆಯೋಣ ಎಂದರು.ಮಾಳಿ ಸಮಾಜ ರಾಜ್ಯಾಧ್ಯಕ್ಷ ಕಾಡು ಮಾಳಿ ಮಾತನಾಡಿ, ಇಡೀ ಕರ್ನಾಟಕದಲ್ಲಿ ಅಲ್ಲಲ್ಲಿ ಹರಡಿದ್ದ ಮಾಳಿ ಸಮಾಜದವರು ಆರ್ಥಿಕವಾಗಿ, ಸಾಮಾಜಿಕವಾಗಿ ಹಿಂದುಳಿದಿದ್ದು ಎಲ್ಲರೂ ಸೇರಿ ಸಮಾಜ ಎಚ್ಚರಿಸಿ ನಮ್ಮ ಸೌಲಭ್ಯಗಳನ್ನು ಪಡೆದುಕೊಳ್ಳೋಣ. ಜತೆಗೆ ಪ್ರತಿಭಾ ಪುರಸ್ಕಾರದಲ್ಲಿ ಸನ್ಮಾನ ಪಡೆದ ವಿದ್ಯಾರ್ಥಿಗಳು ಮುಂಬರುವ ದಿನಮಾನಗಳಲ್ಲಿ ಸಮಾಜಕ್ಕೆ ಉತ್ತಮ ಕೊಡುಗೆ ಕೊಡುವಂತಾಗಬೇಕು ಎಂದು ಸಲಹೆ ನೀಡಿದರು.ಮುಖಂಡರಾದ ಶಿವಾನಂದ ದಿವಾನಮಳ, ಗಿರೀಶ ಬುಟಾಳಿ, ಬಸವರಾಜ ಬುಟಾಳಿ, ಅರಣ್ಯಾಧಿಕಾರಿ ಪ್ರಶಾಂತ ಗೌರಾಣಿ, ಹಿರಿಯ ಅಭಿಯಂತರ ಎಸ್.ಬಿ.ಬಾಗಿ ಮಾತನಾಡಿದರು. ಶೆಟ್ಟರಮಠದ ಶ್ರೀ ಮರುಳಸಿದ್ದ ಮಹಾಸ್ವಾಮಿಗಳು ಆಶೀರ್ವಚನ ನೀಡಿದರು. ಸಮಿತಿ ವತಿಯಿಂದ ಸುಮಾರು 120ಕ್ಕೂ ಅಧಿಕ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸನ್ಮಾನ ಮಾಡಲಾಯಿತು. ಈ ವೇಳೆ ಸಚಿನ ಬುಟಾಳಿ, ಗಿರೀಶ ದಿವಾನಮಳ, ಸುರೇಶ ಕಾಗಲೆ, ಚಿದಾನಂದ ಮಾಳಿ, ಬಿ.ಎಸ್.ಯಾದವಾಡ, ಕಲ್ಲಪ್ಪಾ ನರೋಡೆ, ಮೃತ್ಯುಂಜಯ ಮಲ್ಲುಖಾನ, ಸಂತೋಷ ನಿಡೋಣಿ, ಚಿದಾನಂದ ಬಡಕಂಬಿ, ಡಾ ಆನಂದ ಲಗಳಿ ವೇದಿಕೆ ಮೇಲೆ ಉಪಸ್ಥಿತರಿದ್ದರು.ಈ ವೇಳೆ ಮಹಾಂತೇಶ ಮಾಳಿ, ರವಿ ಬಡಕಂಬಿ, ಪ್ರಶಾಂತ ತೋಡಕರ, ರಮೇಶ ಮಾಳಿ, ಶಿವಲಿಂಗ ಬೆಳ್ಳಂಕಿ, ಮಹಾದೇವ ಚಮಕೇರಿ, ರಾಮನಿಂಗ ಬಡಕಂಬಿ, ಮಾಂತೇಶ ಭಾಸಿಂಗಿ, ರವಿ ಬಕಾರಿ, ಮಲ್ಲಿಕಾರ್ಜುನ ಪ್ಯಾಟಿ, ನಾಗಪ್ಪಾ ಉಗಾರೆ, ಶ್ರೀಶೈಲ ಕಿವಡಿ, ಪ್ರವೀಣ ಕವಲಾಪೂರ, ಶಿವಪ್ಪಾ ಹಲವೇಗಾರ, ಕೇದಾರಿ ದಿವಾನಮಳ, ತ್ರಿಮೂರ್ತಿ ಶೇಡಬಾಳ, ಸಚಿನ ಬಡಕಂಬಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. ಸಂತೋಷ ಬಡಕಂಬಿ ಸ್ವಾಗತಿಸಿದರು. ಪ್ರಶಾಂತ ತೋಡಕರ ವಂದಿಸಿದರು.