ಮಕ್ಕಳಿಗೆ ಸಂಸ್ಕಾರಯುತ ಬದುಕು ರೂಪಿಸಿ: ಯೋಗಿರಾಜೇಂದ್ರ ಶಿವಾಚಾರ್ಯ

| Published : Nov 26 2024, 12:46 AM IST

ಮಕ್ಕಳಿಗೆ ಸಂಸ್ಕಾರಯುತ ಬದುಕು ರೂಪಿಸಿ: ಯೋಗಿರಾಜೇಂದ್ರ ಶಿವಾಚಾರ್ಯ
Share this Article
  • FB
  • TW
  • Linkdin
  • Email

ಸಾರಾಂಶ

ನೈತಿಕ ಶಿಕ್ಷಣವನ್ನು ಮೊದಲ ಹಂತದಲ್ಲಿಯೇ ನೀಡುವಂತಾಗಬೇಕು.

ಕೊಟ್ಟೂರು: ಮಕ್ಕಳಿಗೆ ಸಂಸ್ಕಾರಯುತ ಬದುಕು ರೂಪಿಸಿಕೊಳ್ಳಲು ಪ್ರತಿ ತಾಯಂದಿರು ಕಲಿಸಿ ಕೊಡಬೇಕು. ಈ ಮೂಲಕ ಉತ್ತಮ ಸಮಾಜ ನಿರ್ಮಾಣ ಮಾಡಲು ಉತ್ತೇಜನ ನೀಡುವಂತಾಗುತ್ತದೆ ಎಂದು ಯೋಗಿರಾಜೇಂದ್ರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ತಾಲೂಕಿನ ಕೋಗಳಿ ಗ್ರಾಮದಲ್ಲಿ ಹಮ್ಮಿಕೊಂಡಿದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದ ನೇತೃತ್ವ ವಹಿಸಿ ಅವರು ಮಾತನಾಡಿದರು.ನೈತಿಕ ಶಿಕ್ಷಣವನ್ನು ಮೊದಲ ಹಂತದಲ್ಲಿಯೇ ನೀಡುವಂತಾಗಬೇಕು. ಇದು ವ್ಯಕ್ತಿಯೊಬ್ಬನ ಸರ್ವಾಂಗೀಣ ಬೆಳವಣೆಗೆಗೆ ಕಾರಣವಾಗುತ್ತದೆ ಎಂದರು.

ಶ್ರೀಗಳು ಇದೇ ಸಂದರ್ಭದಲ್ಲಿ ನೂರಾರು ಮಹಿಳೆಯರಿಗೆ ಉಡಿ ತುಂಬಿ ಆರ್ಶೀವದಿಸಿದರು.

ಹಾರಿಕಾ ಮಂಜುನಾಥ ಮಾತನಾಡಿ, ಕನ್ನಡ ನಾಡು ಭಾಷೆ ಸಂಸ್ಕೃತಿಗೆ ಕೋಗಳಿ ಗ್ರಾಮ ಹೇಳಿ ಮಾಡಿಸಿದ ಸ್ಥಳವಾಗಿದ್ದು ಹಲವು ಪ್ರಾಜ್ಞರ ಉದಯಕ್ಕೆ ಈ ಗ್ರಾಮ ಕಾರಣವಾಗಿರುವುದು ಹೆಮ್ಮೆಯ ವಿಷಯ ಎಂದರು.

ಕಾರ್ಯಕ್ರಮದಲ್ಲಿ ರಾಜ್ಯೋತ್ಸವ ಪ್ರಶಸ್ತಿ ಪಡೆದಿರುವ ಜೆ.ಎಂ ವೀರ ಸಂಘಯ್ಯ ಮತ್ತು ಕಲಾವಿದ ಕೊಟ್ರೇಶ್ ಅವರನ್ನು ಸನ್ಮಾನಿಸಲಾಯಿತು.

ಬಿಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಐ.ದಾರುಕೇಶ್, ಕೊಟ್ಟೂರು ಪಪಂ ಉಪಾಧ್ಯಕ್ಷ ಜಿ.ಸಿದ್ದಯ್ಯ ಕೋಗಳಿ, ವಿಎಸ್.ಎಸ್ ಅಧ್ಯಕ್ಷ ಹೇಮಗಿರಿ ಗೌಡ, ರೇಣುಕಮ್ಮ, ಪದ್ಮಣ್ಣ, ಕೆ.ನಿಜಗುಣ, ಎನ್.ರಾಜಣ್ಣ, ಶೆಟ್ರು ಪಂಪಣ್ಣ, ಮರಳು ಸಿದ್ದಯ್ಯ, ಎಂ.ಮಲ್ಲಿಕಾರ್ಜುನ, ಕಂಬಿ ಕೊಟ್ರಪ್ಪ, ಕುರುಬರ ಸಿದ್ದೇಶ್, ಸುದೇಶ್, ಉಮೇಶ್, ಚಂದ್ರಧರ ಇದ್ದರು.

ವಿ.ರವಿ ಸ್ವಾಗತಿಸಿದರು. ವೀರಭದ್ರ ಶೆಟ್ಟರ್ ಪ್ರಾರ್ಥಿಸಿದರು. ಕೆ.ರಾಜು ವಂದಿಸಿದರು. ಕವಿತಾ ಕುಮಾರಸ್ವಾಮಿ ನಿರೂಪಿಸಿದರು.