ಕನ್ನಡಪ್ರಭ ವಾರ್ತೆ ಬಾಗಲಕೋಟೆಸಾರ್ವಜನಿಕರಲ್ಲಿ ಸ್ಟ್ರೋಕ್ ಕುರಿತು ಅರಿವು ಮೂಡಿಸಿ, ಸಮಯಕ್ಕೆ ಸರಿಯಾದ ಚಿಕಿತ್ಸೆ ಮೂಲಕ ಜೀವ ಹಾಗೂ ಅಂಗವೈಕಲ್ಯವನ್ನು ಉಳಿಸುವ ಉದ್ದೇಶದಿಂದ ಈ ಪುಸ್ತಕವನ್ನು ಡಾ.ರಾಕೇಶ್ ಎ.ವಿ. ಅವರು ರಚಿಸಿದ್ದಾರೆ ಎಂದು ಬಿವಿವಿ ಸಂಘದ ಕಾರ್ಯಾಧ್ಯಕ್ಷ ಡಾ.ವೀರಣ್ಣ ಚರಂತಿಮಠ ತಿಳಿಸಿದರು.
ಕನ್ನಡಪ್ರಭ ವಾರ್ತೆ ಬಾಗಲಕೋಟೆ
ಸಾರ್ವಜನಿಕರಲ್ಲಿ ಸ್ಟ್ರೋಕ್ ಕುರಿತು ಅರಿವು ಮೂಡಿಸಿ, ಸಮಯಕ್ಕೆ ಸರಿಯಾದ ಚಿಕಿತ್ಸೆ ಮೂಲಕ ಜೀವ ಹಾಗೂ ಅಂಗವೈಕಲ್ಯವನ್ನು ಉಳಿಸುವ ಉದ್ದೇಶದಿಂದ ಈ ಪುಸ್ತಕವನ್ನು ಡಾ.ರಾಕೇಶ್ ಎ.ವಿ. ಅವರು ರಚಿಸಿದ್ದಾರೆ ಎಂದು ಬಿವಿವಿ ಸಂಘದ ಕಾರ್ಯಾಧ್ಯಕ್ಷ ಡಾ.ವೀರಣ್ಣ ಚರಂತಿಮಠ ತಿಳಿಸಿದರು.ನ್ಯಾಷನಲ್ ಮೆಡಿಕೋಸ್ ಅರ್ಗನೈಜೇಶನ್ ಹಾಗೂ ಆರ್.ಎನ್.ಸಿ. ಆಸ್ಪತ್ರೆ ಸಹಯೋಗದಲ್ಲಿ ಅವರು ನಗರದ ಎಸ್ಎನ್ಎಮ್ಸಿ ಮೆಡಿಕಲ್ ಕಾಲೇಜನ ಅತ್ರೇಯ ಹಾಲ್ ನಲ್ಲಿ ಭಾನುವಾರ ನಡೆದ ಕಾರ್ಯಕ್ರಮದಲ್ಲಿ ಪುಸ್ತಕ ಬಿಡುಗಡೆಗೊಳಿಸಿ ಮಾತನಾಡಿದರು. ಪಾರ್ಶ್ವವಾಯು (ಸ್ಟ್ರೋಕ್) ಸಂಭವಿಸಿದಾಗ ಸಕಾಲದಲ್ಲಿ ಚಿಕಿತ್ಸೆ ದೊರೆತರೆ ರೋಗಿಯ ಜೀವ ಉಳಿಸುವುದರ ಜತೆಗೆ ಅಂಗವೈಕಲ್ಯವನ್ನೂ ಕಡಿಮೆ ಮಾಡಬಹುದು. ಆದ್ದರಿಂದ ಪಾರ್ಶ್ವವಾಯುವಿನ ಲಕ್ಷಣಗಳನ್ನು ಗುರುತಿಸಿ ತಕ್ಷಣ ಆಸ್ಪತ್ರೆಗೆ ಕರೆದ್ಯೂಯುವ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಅಗತ್ಯವಿದೆ ಎಂದರು.
ಲೇಖಕರಾದ ಡಾ.ರಾಕೇಶ ಎ.ವಿ ಮಾತನಾಡಿ, ಪ್ರತಿ ಕುಟುಂಬಕ್ಕೂ ಅಗತ್ಯವಿರುವ ಪಾರ್ಸಿ/ ಲಕ್ವಾ ಕುರಿತು ಪುಸ್ತಕ ಬಿಡುಗಡೆ ಮಾಡಲಾಗಿದೆ, ಸ್ಟ್ರೋಕ್ನ ಪ್ರಮುಖ ಲಕ್ಷಣಗಳನ್ನು ಸಾರ್ವಜನಿಕರು ಸುಲಭವಾಗಿ ಗುರುತಿಸಲು ಕೆಲವು ವಿಧಾನವನ್ನು ತಿಳಿದುಕೊಳ್ಳಬೇಕು. ದೇಹದ ಸಮತೋಲನ ಕಳೆದುಕೊಳ್ಳುವುದು, ಕಣ್ಣಿನ ದೃಷ್ಟಿಯಲ್ಲಿ ಬದಲಾವಣೆ, ಮುಖದ ಒಂದು ಭಾಗ ಬಾಗುವುದು, ಕೈ ಅಥವಾ ಕಾಲಿನಲ್ಲಿ ಬಲ ಕುಂದುವುದು ಹಾಗೂ ಮಾತಿನಲ್ಲಿ ತೊದಲುವಿಕೆ ಕಂಡುಬಂದರೆ ತಕ್ಷಣ ವೈದ್ಯಕೀಯ ನೆರವು ಪಡೆಯಬೇಕು ಎಂದರು.ಈ ಪುಸ್ತಕದ ಮೂಲಕ ತಮ್ಮ ಮುಖ್ಯ ಉದ್ದೇಶ ಪುಸ್ತಕ ಮಾರಾಟವಲ್ಲ, ಸ್ಟ್ರೋಕ್ ಬಗ್ಗೆ ಸಾರ್ವಜನಿಕ ಜಾಗೃತಿ ಮೂಡಿಸಿ, ಸಾಧ್ಯವಾದಷ್ಟು ಕುಟುಂಬಗಳಿಗೆ ಜೀವ ಉಳಿಸುವ ಮಾಹಿತಿ ತಲುಪಿಸುವುದು ಎಂದರು.
ಕಾರ್ಯಕ್ರಮದಲ್ಲಿ ಮಲ್ಲಿಕಾರ್ಜುನ ಸ್ವಾಮೀಜಿ ದಿವ್ಯ ಸಾನ್ನಿಧ್ಯ ವಹಿಸಿದ್ದರು. ಡಾ.ಬಿ.ಎಸ್.ಪಾಟೀಲ್ ಅಧ್ಯಕ್ಷತೆ ವಹಿಸಿದ್ದರು. ಡಾ.ಎಸ್.ವೈ.ಮುಲ್ಕಿಪಾಟೀಲ್ ಅತಿಥಿಗಳಾಗಿ ಉಪಸ್ಥಿತರಿದ್ದರು.