ಮಕ್ಕಳನ್ನು ಮೊಬೈಲ್‌ಗಳಿಂದ ದೂರವಿರಿಸಲು ಜಾಗೃತಿ ಮೂಡಿಸಿ

| Published : Nov 05 2025, 02:00 AM IST

ಮಕ್ಕಳನ್ನು ಮೊಬೈಲ್‌ಗಳಿಂದ ದೂರವಿರಿಸಲು ಜಾಗೃತಿ ಮೂಡಿಸಿ
Share this Article
  • FB
  • TW
  • Linkdin
  • Email

ಸಾರಾಂಶ

ಕನಕಪುರ: ಇತ್ತೀಚಿನ ದಿನಗಳಲ್ಲಿ ಮಾನವ ಸಮೂಹ ಒತ್ತಡದ ಜೀವನದಲ್ಲಿ ಸಾಗುತ್ತಿದೆ. ಇದರಿಂದ ಖಿನ್ನತೆ ಸಮಸ್ಯೆಗಳು ನಿಮಾನ್ಸ್‌ನಲ್ಲಿ ಹೆಚ್ಚಾಗಿ ದಾಖಲಾಗುತ್ತಿವೆ. ಮಕ್ಕಳು ಮೊಬೈಲ್ ವ್ಯಸನಿಗಳಾಗುತ್ತಿರುವುದು ಅಪಾಯಕಾರಿ ಬೆಳವಣಿಗೆ. ಇದರಿಂದ ಹೊರಬರಲು ಮಕ್ಕಳಲ್ಲಿ ಜಾಗೃತಿ ಮೂಡಿಸುವುದು ಅವಶ್ಯ ಎಂದು ಮನೋಶಾಸ್ತ್ರಜ್ಞ ಡಾ.ಶ್ರೀಧರಮೂರ್ತಿ ಹೇಳಿದರು.

ನಗರದ ರೂರಲ್ ಪದವಿ ಕಾಲೇಜಿನಲ್ಲಿ ವಿಶೇಷ ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದ ಅವರು,

ರಾತ್ರಿ 9ರ ನಂತರ ಅಥವಾ ವಾರದಲ್ಲಿ ಒಂದು ದಿನ ಮೊಬೈಲ್ ಬಳಸುವುದನ್ನು ಕಡಿಮೆ ಮಾಡಬೇಕು. ಇದರಿಂದ ಉತ್ತಮ ನಿದ್ರೆ ಪಡೆಯಬಹುದು. ಅದು ಆರೋಗ್ಯಕ್ಕೆ ಉತ್ತಮ. ಪ್ರತಿಯೊಬ್ಬರು ನೆಮ್ಮದಿಯ ಬದುಕಿನತ್ತ ಸಾಗಲು ಸಕಾರಾತ್ಮಕ ಚಿಂತನೆಗಳನ್ನು ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.

ಮನಸಿನ ಒತ್ತಡ ಕಡಿಮೆ ಮಾಡಲು ಯೋಗ ಧ್ಯಾನದಂತಹ ಅಭ್ಯಾಸಗಳು ಸಹಾಯ ಮಾಡುತ್ತವೆ. ಜನಸಮುದಾಯ ಮತ್ತೊಬ್ಬರ ಮೇಲಿನ ಅಸೂಯೆಯಿದ ಮಾನಸಿಕ ರೋಗಕ್ಕೆ ತುತ್ತಾಗುತ್ತಿರುವುದು ವಿಷಾದನೀಯ. ಮನುಷ್ಯ ಒತ್ತಡದಿಂದ ಮತ್ತು ದ್ವೇಷ, ಅಸೂಯ ಗುಣಗಳಿಂದ ಹೊರಬರಲು ಉತ್ತಮ ಹವ್ಯಾಸಗಳಲ್ಲಿ ತೊಡಗಿಸಿಕೊಳ್ಳಬೇಕು. ಓದುವುದು, ಬರೆಯುವುದು, ಕ್ರೀಡೆಗಳಲ್ಲಿ ಪಾಲ್ಗೊಳ್ಳುವುದು, ಉತ್ತಮ ಕಾರ್ಯಕ್ರಮಳಲ್ಲಿ ಭಾಗವಹಿಸುವುದು, ದೇಗುಲ ಅಥವಾ ಉತ್ತಮ ತಾಣಗಳಿಗೆ ಭೇಟಿ ನೀಡುವುದು ಇತ್ಯಾದಿಗಳನ್ನು ರೂಢಿಸಿಕೊಂಡಾಗ ಮನಸ್ಸು ಪ್ರಫುಲ್ಲಗೊಳ್ಳುತ್ತದೆ. ಉತ್ತಮ ಆಲೋಚನೆಗಳು ಮನದಲ್ಲಿ ಬೇರೂರುತ್ತವೆ. ಅಲ್ಲದೆ, ಮನಸ್ಸು ಲವಲವಿಕೆಯಿಂದ ಇರುತ್ತದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ರೂರಲ್ ಪದವಿ ಕಾಲೇಜಿನ ಪ್ರಾಂಶುಪಾಲರಾದ ಪ್ರೊ.ಎಂ.ಟಿ.ಬಾಲಕೃಷ್ಣ, ಉಪ ಪ್ರಾಂಶುಪಾಲರಾದ ದೇವರಾಜು, ಪ್ರೊ. ಪುಟ್ಟರಾಜು, ಪ್ರೊ. ಸಿದ್ದರಾಮೇಗೌಡ, ವಿಜೇಂದ್ರ, ಎ.ಪಿ.ಪ್ರಕಾಶ್, ಹಿರಿಯ ಉಪನ್ಯಾಸಕರು ಹಾಗೂ ಪದವಿ ಕಾಲೇಜಿನ ಮತ್ತು ಎಸ್.ಕರಿಯಪ್ಪ ಕೃಷಿ ಕಾಲೇಜಿನ ವಿದ್ಯಾರ್ಥಿಗಳು ಹಾಜರಿದ್ದರು.

(ಫೋಟೋ ಅಗತ್ಯವಿಲ್ಲ)