ಸಾರಾಂಶ
ರಾಷ್ಟ್ರೀಯ ಸೇವಾ ಯೋಜನೆಯ ಸ್ವಯಂ ಸೇವಕರು ಸಾರ್ವಜನಿಕರಲ್ಲಿ ಸ್ವಚ್ಛತೆ ಜಾಗೃತಿ ಮೂಡಿಸಬೇಕು. ವಿದ್ಯಾರ್ಥಿಗಳು ಗ್ರಾಮದ ಜನತೆಯೊಂದಿಗೆ ಬೆರೆತು ಗ್ರಾಮೀಣ ಸಮಸ್ಯೆ ಅರಿತು ಸಹಬಾಳ್ವೆ ಮೂಡಿಸಬೇಕು ಎಂದು ಸ್ಥಳೀಯ ಆರ್.ಎನ್. ದೇಶಪಾಂಡೆ ಕಾಲೇಜು ಪ್ರಾ. ಆರ್.ಎಂ. ಕಲ್ಲನಗೌಡ ಹೇಳಿದರು.
ಮುಳಗುಂದ: ರಾಷ್ಟ್ರೀಯ ಸೇವಾ ಯೋಜನೆಯ ಸ್ವಯಂ ಸೇವಕರು ಸಾರ್ವಜನಿಕರಲ್ಲಿ ಸ್ವಚ್ಛತೆ ಜಾಗೃತಿ ಮೂಡಿಸಬೇಕು. ವಿದ್ಯಾರ್ಥಿಗಳು ಗ್ರಾಮದ ಜನತೆಯೊಂದಿಗೆ ಬೆರೆತು ಗ್ರಾಮೀಣ ಸಮಸ್ಯೆ ಅರಿತು ಸಹಬಾಳ್ವೆ ಮೂಡಿಸಬೇಕು ಎಂದು ಸ್ಥಳೀಯ ಆರ್.ಎನ್. ದೇಶಪಾಂಡೆ ಕಾಲೇಜು ಪ್ರಾ. ಆರ್.ಎಂ. ಕಲ್ಲನಗೌಡ ಹೇಳಿದರು.
ಸಮೀಪದ ಯಳವತ್ತಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆರ್.ಎನ್. ದೇಶಪಾಂಡೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಮುಳಗುಂದ, ಜಿಪಂ ಗದಗ, ತಾಪಂ ಲಕ್ಷ್ಮೇಶ್ವರ ಹಾಗೂ ಗ್ರಾಪಂ ಯಳವತ್ತಿ ಸಹಯೋಗದಲ್ಲಿ ಸ್ವಚ್ಛತೆಗಾಗಿ ಯುವ ಜನತೆ ಎಂಬ ಧ್ಯೇಯದೊಂದಿಗೆ ಹಮ್ಮಿಕೊಂಡ ರಾಷ್ಟ್ರೀಯ ಸೇವಾ ಯೋಜನೆಯ ವಿಶೇಷ ವಾರ್ಷಿಕ ಶಿಬಿರದ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ, ನಾವು ಕೇವಲ ನಮ್ಮ ಹಿತಕ್ಕಾಗಿ ಬದುಕದೇ ಸಮಾಜದ ಹಿತಕ್ಕಾಗಿ ಸಮಾಜದ ಏಳಿಗೆಗಾಗಿ ಬದುಕಬೇಕು. ವಿದ್ಯಾರ್ಥಿಗಳು ಸಾರ್ವಜನಿಕರಲ್ಲಿ ತಂಬಾಕಿನಿಂದಾಗುವ ದುಷ್ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸುವಂತೆ ತಿಳಿಸಿದರು.ಈ ವೇಳೆ ವಾಣಿಜ್ಯಶಾಸ್ತ್ರ ಸಹಾಯಕ ಪ್ರಾಧ್ಯಾಪಕಿ ಅನುಪಮಾ ಪ್ರಾಸ್ತಾವಿಕವಾಗಿ ಮಾತನಾಡಿದರು. ಯಳವತ್ತಿ ಗ್ರಾಪಂ ಅಧ್ಯಕ್ಷೆ ರೇಷ್ಮಾಬಾನು ಹಳೆಮನೆ, ಸದಸ್ಯ ವೀರಣ್ಣಗೌಡ ಬಾಗೇವಾಡಿ, ಬಸವಣ್ಣಪ್ಪ ಚಿಣಿಗಿ, ಉಪನ್ಯಾಸಕ ಡಾ. ಪರಸಪ್ಪ ಬಾರಕೇರ, ವಿದ್ಯಾರ್ಥಿಗಳು, ಮುಖಂಡರು, ಬೋಧಕ, ಬೋಧಕೇತರ ಸಿಬ್ಬಂದಿಗಳು ಇದ್ದರು. ಕನ್ನಡ ಉಪನ್ಯಾಸಕಿ ಶಿವಲೀಲಾ ಶಿವರಂಜನಿ ನಿರೂಪಿಸಿದರು. ರಾಷ್ಟ್ರೀಯ ಸೇವಾ ಯೋಜನೆಯ ಸಂಯೋಜಕ ಪ್ರಸನ್ನ.ಎಸ್ ಸ್ವಾಗತಿಸಿದರು. ಪ್ರಾಧ್ಯಾಪಕಿ ಜಾನಕಿ ಮರಾಠಿ ವಂದಿಸಿದರು.