ಸಾರಾಂಶ
ಕನ್ನಡಪ್ರಭ ವಾರ್ತೆ ತರೀಕೆರೆ
ಗ್ರಾಮೀಣ ಪ್ರದೇಶದಲ್ಲಿ ಸಾರ್ವಜನಿಕರಿಗೆ ಕಾನೂನು ಅರಿವು ಮೂಡಿಸಬೇಕೆಂದು ಸಿವಿಲ್ ನ್ಯಾಯಾಧೀಶರಾದ ರಾಹುಲ್ ಶೆಟ್ಟಿಗಾರ್ಹೇಳಿದ್ದಾರೆ.
ಅವರು, ತಾಲೂಕು ಕಾನೂನು ನೆರವು ಸಮಿತಿ ವಕೀಲರ ಸಂಘ ಶಿಶು ಅಭಿವೃದ್ಧಿ ಇಲಾಖೆ ಆರೋಗ್ಯ ಇಲಾಖೆ ಇವರ ಸಂಯುಕ್ತ ಆಶ್ರಯದಲ್ಲಿ, ಮಹಿಳಾ ವಕೀಲರ ಸಂಘದಲ್ಲಿ ಅರೆಕಾಲಿಕ ಸೇವಕರಿಗೆ ಏರ್ಪಾಡಾಗಿದ್ದ ಒಂದು ದಿನದ ಕಾರ್ಯಾಗಾರ ಉದ್ಘಾಟನೆ ನೆರವೇರಿಸಿ ಮಾತನಾಡುತ್ತಿದ್ದರು.ಸ್ವಯಂ ಸೇವಕರು ಯಾವುದೇ ಪ್ರತಿಫಲವನ್ನು ಅಪೇಕ್ಷಿಸಬಾರದು ಎಂದು ಅವರು ಹೇಳಿದರು,
ಹೆಚ್ಚುವರಿ ಸಿವಿಲ್ ನ್ಯಾಯಾಧೀಶೆ ಊರ್ಮಿಳ ಮಾತನಾಡಿ, ಇಂದು ಜನರಿಗೆ ಕಾನೂನಿನ ಅರಿವು ಮೂಡಿಸಬೇಕು, ಕಾನೂನು ಎಲ್ಲರಿಗೂ ಒಂದೇ ಈ ಬಗ್ಗೆ ಸಾರ್ವಜನಿಕರಿಗೆ ತಿಳಿಸಬೇಕು ಎಂದು ಅವರು ಹೇಳಿದರು.ಹಿರಿಯ ವಕೀಲರಾದ ಎಸ್. ಸುರೇಶ್ ಚಂದ್ರ ಮಾತನಾಡಿ, ಸಮಾಜದ ಕಟ್ಟಕಡೆಯ ವ್ಯಕ್ತಿಯು ಕಾನೂನಿನಿಂದ ವಂಚಿತರಾಗಬಾರದು ಎಂಬುದು ಕಾನೂನು ನೆರವು ಸಮಿತಿಯ ಉದ್ದೇಶ, ಅರೆಕಾಲಿಕ ಸ್ವಯಂಸೇವಕರ ಕಾರ್ಯಕ್ರಮಗಳು ವರ್ಷಗಳಿಂದ ನಡೆಯುತ್ತ ಬಂದಿತ್ತು, ಕೋವಿಡ್ ಕಾರಣ ಈ ಕಾರ್ಯಕ್ರಮ ನಿಂತಿದ್ದು, ಈಗ ಪ್ರಾರಂಭವಾಗಿದೆ ಇದು ಮುಂದುವರಿಯಬೇಕು ಎಂದು ಅವರು ತಿಳಿಸಿದರು.
ವಕೀಲರ ಸಂಘದ ಅಧ್ಯಕ್ಷ ಬಿ ಶೇಖರ್ ನಾಯ್ಕ ಅವರು ಮಾತನಾಡಿ, ಸ್ವಯಂಸೇವಕರ ಪಾತ್ರ ಬಹಳ ಮುಖ್ಯ ಅವರ ಕಾರ್ಯವನ್ನು ಶ್ಲಾಘನೆ ಮಾಡಬೇಕು ಎಂದು ಅವರು ಹೇಳಿದರು,ಸಿಡಿಪಿಒ ಚರಣ್‌ರಾಜ್, ಹಿರಿಯ ವಕೀಲ ಎಂ, ಕೆ, ತೇಜಮೂರ್ತಿ ಸಿ.ಬಿ.ವಿಶ್ವನಾಥ್, ಅಪರ ಸರ್ಕಾರಿ ವಕೀಲರಾದ ಟಿ.ಜೆ. ಜಗದೀಶ್ ಅವರು ಕಾನೂನು ಉಪನ್ಯಾಸ ನೀಡಿದರು.ನ್ಯಾಯಾಲಯದ ಸಿಬ್ಬಂದಿ ಶಶಿಧರ್, ದಾಕ್ಷಾಯಿಣಿ ಮತ್ತಿತರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
-------------------ಫೋಟೋ: ತರೀಕೆರೆಯಲ್ಲಿ ಕಾನೂನು ಸ್ವಯಂಸೇವಕರಿಗೆ ಒಂದು ದಿನದ ಕಾರ್ಯಾಗಾರದ ಉದ್ಘಾಟನೆಯನ್ನು ಸಿವಿಲ್ ನ್ಯಾ. ರಾಹುಲ್ ಶೆಟ್ಟಿಗಾರ್ ನೆರವೇರಿಸಿದರು. ಹೆಚ್ಚುವರಿ ಸಿವಿಲ್ ನ್ಯಾ. ಊರ್ಮಿಳ, ಸಂಘದ ಅಧ್ಯಕ್ಷ ಬಿ.ಶೇಖರ್ ನಾಯ್ಕ, ಹಿರಿಯ ವಕೀಲ ಎಸ್.ಸುರೇಶ್ ಚಂದ್ರ, ಎಂ, ಕೆ, ತೇಜಮೂರ್ತಿ ಇದ್ದಾರೆ.
24ಕೆಟಿಆರ್.ಕೆ.5