ನೂರು ದಿನಗಳ ಉದ್ಯೋಗ ಸೃಷ್ಟಿಸಿದರೆ ಅನುಕೂಲ: ಮಂಜುನಾಥ್‌

| Published : Jun 20 2024, 01:09 AM IST

ಸಾರಾಂಶ

ರಾಜಕೀಯ ಒತ್ತಡಕ್ಕೆ ಪದೇ ಪದೇ ಒಂದೇ ಕುಟುಂಬಕ್ಕೆ ಉದ್ಯೋಗ ಖಾತ್ರಿ ನರೇಗಾ ಯೋಜನೆಯ ವೈಯಕ್ತಿಕ ಕಾಮಗಾರಿ ನೀಡದೆ ಎಲ್ಲಾ ಫಲಾನುಭವಿಗಳಿಗೂ ಉದ್ಯೋಗ ದೊರಕುವಂತೆ ನೋಡಿಕೊಳ್ಳಿ ಅಧಿಕಾರಿಗಳು ಜೊತೆಗೆ ಮಳೆಗಾಲ ಆಗಿರುವುದರಿಂದ ಜಾನುವಾರುಗಳ ಶೆಡ್‌ ಸೇರಿ ನಾಲೆಗಳ ಅಭಿವೃದ್ಧಿ ಬಗ್ಗೆ ಹೆಚ್ಚು ಆದ್ಯತೆ ನೀಡಿ ನೀರಿನ ಟ್ಯಾಂಕರ್ ಗಳನ್ನು ನಿಗದಿತ ಸಮಯದಲ್ಲಿ ಶುಚಿತ್ವಕ್ಕೆ ಒತ್ತು ನೀಡಿ ಮುಂದಿನ ವರ್ಷದವರೆಗೆ ಒಟ್ಟು 56 ಕಡೆ ಕೈತೋಟವನ್ನು ನಿರ್ಮಾಣ ಮಾಡಬೇಕು.

ಕನ್ನಡಪ್ರಭ ವಾರ್ತೆ, ಹನೂರು

ಖಾತ್ರಿ ಯೋಜನೆಯಲ್ಲಿ ನೂರು ದಿನಗಳ ಉದ್ಯೋಗ ಸೃಷ್ಟಿಸಿದರೆ ಅನುಕೂಲವಾಗುತ್ತದೆ. ಈ ಬಗ್ಗೆ ಗ್ರಾಮ ಪಂಚಾಯತಿ ಅಧಿಕಾರಿಗಳು ಕ್ರಮ ಕೈಗೊಳ್ಳುವಂತೆ ಶಾಸಕ ಎಂ ಆರ್ ಮಂಜುನಾಥ್ ತಿಳಿಸಿದರು. ಪಟ್ಟಣದ ಅಂಬೇಡ್ಕರ್ ಭವನದಲ್ಲಿ ಬುಧವಾರ ಜಿಲ್ಲಾಧಿಕಾರಿ ಶಿಲ್ಪಾನಾಗ್ ನೇತ್ರತ್ವದಲ್ಲಿ ಪ್ರಗತಿಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು. ಖಾತ್ರಿ ಯೋಜನೆಯಲ್ಲಿ ನೀಡುವ ನೂರು ದಿನಗಳ ಉದ್ಯೋಗದ ಜೊತೆ ನಿಗದಿತ ಸಮಯಕ್ಕೆ ಕೂಲಿ ಮೊತ್ತವನ್ನು ನೀಡಬೇಕು. ಸಂಬಂಧಪಟ್ಟ ಎಲ್ಲ ಗ್ರಾಮ ಪಂಚಾಯಿತಿ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದರು.

ಕಳೆದು ತಿಂಗಳು ತಾಲೂಕು ವ್ಯಾಪ್ತಿಯ ಅಜ್ಜಿಪುರ ಶಾಗ್ಯ ಬಂಡಳ್ಳಿ ಮಿಣ್ಯಂ ಹೋಗ್ಲಂ ಗ್ರಾಮಗಳಲ್ಲಿ ಭಾರಿ ಬಿರುಗಾಳಿ ಮಳೆಗೆ ನೂರಾರು ಹೆಕ್ಟೇರ್ ಪ್ರದೇಶದಲ್ಲಿ ರೈತರು ಬೆಳೆಯಲಾಗಿದ್ದ ಬಾಳೆ ಬೆಳೆ ಹಾಗೂ ಇನ್ನಿತರ ಫಸಲು ಸಹ ಗಾಳಿ ಅಬ್ಬರಕ್ಕೆ ನೆಲ ಕಚ್ಚಿದೆ. ನಷ್ಟ ಉಂಟಾಗಿರುವ ರೈತರಿಗೆ ಪರಿಹಾರದ ಮೊತ್ತ ಇನ್ನು ನೀಡಿಲ್ಲ. ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ತುರ್ತಾಗಿ ರೈತರಿಗೆ ನೀಡಬೇಕಾಗಿರುವ ಪರಿಹಾರದ ಮೊತ್ತವನ್ನು ನೀಡಲು ಕ್ರಮ ಕೈಗೊಳ್ಳಿ ಎಂದರು. ನಂತರ ಮಾತನಾಡಿದ ಜಿಲ್ಲಾಧಿಕಾರಿ, ರಾಜಕೀಯ ಒತ್ತಡಕ್ಕೆ ಪದೇ ಪದೇ ಒಂದೇ ಕುಟುಂಬಕ್ಕೆ ಉದ್ಯೋಗ ಖಾತ್ರಿ ನರೇಗಾ ಯೋಜನೆಯ ವೈಯಕ್ತಿಕ ಕಾಮಗಾರಿ ನೀಡದೆ ಎಲ್ಲಾ ಫಲಾನುಭವಿಗಳಿಗೂ ಉದ್ಯೋಗ ದೊರಕುವಂತೆ ನೋಡಿಕೊಳ್ಳಿ ಅಧಿಕಾರಿಗಳು ಜೊತೆಗೆ ಮಳೆಗಾಲ ಆಗಿರುವುದರಿಂದ ಜಾನುವಾರುಗಳ ಶೆಡ್‌ ಸೇರಿ ನಾಲೆಗಳ ಅಭಿವೃದ್ಧಿ ಬಗ್ಗೆ ಹೆಚ್ಚು ಆದ್ಯತೆ ನೀಡಿ ನೀರಿನ ಟ್ಯಾಂಕರ್ ಗಳನ್ನು ನಿಗದಿತ ಸಮಯದಲ್ಲಿ ಶುಚಿತ್ವಕ್ಕೆ ಒತ್ತು ನೀಡಿ ಮುಂದಿನ ವರ್ಷದವರೆಗೆ ಒಟ್ಟು 56 ಕಡೆ ಕೈತೋಟವನ್ನು ನಿರ್ಮಾಣ ಮಾಡಬೇಕು ಎಂದು ತೋಟಗಾರಿಕೆ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಜಿಪಂ ಸಿಇಒ ಆನಂದ್ ಪ್ರಕಾಶ್‌ ಮೀರ ಮಾತನಾಡಿ, ನಿರ್ಮಾಣ ಹಂತದಲ್ಲಿರುವ ವಸತಿ ಗ್ರಾಮ ಪಂಚಾಯಿತಿ ಕಟ್ಟಡ ಹಾಗೂ ಅಂಗನವಾಡಿ ಕಟ್ಟಡಗಳ ಸಾಲ ಕಟ್ಟಡದ ಕಾಮಗಾರಿಗಳು ಪೂರ್ಣಗೊಳಿಸಲು ತಾಂತ್ರಿಕ ಸಮಸ್ಯೆಗಳು ಇದ್ದಲ್ಲಿ ನಿಗದಿತ ಅವಧಿಯೊಳಗೆ ಅಗತ್ಯ ಕ್ರಮವಹಿಸಿ ಎಂದು ಅಧಿಕಾರಿಗಳಿಗೆ ತಾಕೀತು ಮಾಡಿದರು.

ಸಭೆಯಲ್ಲಿ ಎಸಿಎಫ್ ಚಂದ್ರಶೇಖರ್ ಪಾಟೀಲ್, ತಾಲೂಕು ದಂಡಾಧಿಕಾರಿ ಗುರುಪ್ರಸಾದ್, ತಾಪಂ ಎಡಿ ರವೀಂದ್ರ, ಕಂದಾಯ ನಿರೀಕ್ಷಕ ಶಿವಕುಮಾರ್, ವಲಯ ಅರಣ್ಯ ಅಧಿಕಾರಿಗಳಾದ ಪ್ರವೀಣ್, ನಿರಂಜನ್ ಸೇರಿ ವಿವಿಧ ಇಲಾಖೆಯ ಗ್ರಾಮ ಪಂಚಾಯತಿ ಅಧಿಕಾರಿಗಳು ಉಪಸ್ಥಿತರಿದ್ದರು.