ಸಾರಾಂಶ
ಕನ್ನಡಪ್ರಭ ವಾರ್ತೆ ಬೆಂಗಳೂರು
ರಾಜ್ಯ ಕಾಂಗ್ರೆಸ್‌ಗೆ ಸಂಬಂಧಿಸಿದಂತೆ ಯಾವುದೇ ವಿಚಾರದ ಬಗ್ಗೆಯೂ ಹೈಕಮಾಂಡ್ ನಿರ್ಧಾರವೇ ಅಂತಿಮ. ಹೈಕಮಾಂಡ್ ತೀರ್ಮಾನವನ್ನು ಎಲ್ಲರೂ ಒಪ್ಪಬೇಕು. ನಾನು ಅದಕ್ಕೆ ಬದ್ಧನಾಗಿರಬೇಕು. ಡಿ.ಕೆ. ಶಿವಕುಮಾರ್ ಸಹ ಬದ್ಧರಾಗಬೇಕು. ಈ ಬಗ್ಗೆ ಹೈಕಮಾಂಡ್ ಕರೆದರೆ ದೆಹಲಿಗೆ ಹೋಗುತ್ತೇನೆ.ಅಧಿಕಾರ ಹಸ್ತಾಂತರ ಗೊಂದಲ ಹಿನ್ನೆಲೆಯಲ್ಲಿ ಶನಿವಾರ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರೊಂದಿಗೆ ಸುದೀರ್ಘ ಮಾತುಕತೆಯ ನಂತರ ಮುಖ್ಯಮಂತ್ರಿ ಸಿದ್ದರಾಮಯ್ಯ ನೀಡಿದ ಹೇಳಿಕೆಯಿದು.
ಇದೇ ವೇಳೆ ಅಧಿಕಾರ ಹಸ್ತಾಂತರ ಎಂಬುದು ಊಹಾಪೋಹವಷ್ಟೇ. ಅದು ಮಾಧ್ಯಮಗಳ ಸೃಷ್ಟಿ. ಎಐಸಿಸಿ ಅಧ್ಯಕ್ಷರೊಂದಿಗೆ ಆ ಬಗ್ಗೆ ಯಾವುದೇ ಮಾತುಕತೆಯನ್ನೂ ಮಾಡಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.ಖರ್ಗೆ ಅವರೊಂದಿಗೆ ಪಕ್ಷ ಸಂಘಟನೆ, ತಾಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿ, ಗ್ರೇಟರ್ ಬೆಂಗಳೂರು ಪ್ರಾಧಿಕಾರ ವ್ಯಾಪ್ತಿಯ ಐದು ನಗರ ಪಾಲಿಕೆಗಳ ಚುನಾವಣೆ ಕುರಿತಂತೆ ಮಾತುಕತೆ ಮಾಡಿದ್ದೇನೆ. ಖರ್ಗೆ ಅವರನ್ನು ಸೌಹಾರ್ದಯುತವಾಗಿ ಭೇಟಿ ಮಾಡಿದ್ದು, ಯಾವುದೇ ರಾಜಕೀಯ ಚರ್ಚೆಗಳು ನಡೆಸಿಲ್ಲ ಎಂದರು.
ನಾನು ಬೇಸರಗೊಳ್ಳುವುದಿಲ್ಲ:ಮಲ್ಲಿಕಾರ್ಜುನ ಖರ್ಗೆ ಅವರ ಭೇಟಿ ನಂತರ ಬೇಸರಗೊಂಡಂತಿದ್ದೀರಲ್ಲ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿ, ಬೇಸರಗೊಳ್ಳುವ ಪ್ರಶ್ನೆಯೇ ಇಲ್ಲ. ನಾನು ಬೇಸರವಾಗುವುದೂ ಇಲ್ಲ, ಅತಿಯಾಗಿ ಖುಷಿಯನ್ನೂ ಪಡುವುದಿಲ್ಲ. ಯಾವುದೇ ವಿಚಾರದಲ್ಲಾದರೂ ಹೈಕಮಾಂಡ್ ನಿರ್ಧಾರವನ್ನು ಎಲ್ಲರೂ ಒಪ್ಪಬೇಕು. ಎಲ್ಲ ನಾಯಕರು, ಸಚಿವರು, ನಾನು, ಡಿ.ಕೆ. ಶಿವಕುಮಾರ್ ಎಲ್ಲವೂ ಒಪ್ಪಬೇಕು.ಹೈಕಮಾಂಡ್ ದೆಹಲಿಗೆ ಕರೆದರೆ ಹೋಗುತ್ತೇನೆ ಎಂದರು.
ಶಾಸಕರ ದೆಹಲಿ ಭೇಟಿ ಕುರಿತಂತೆ ಚರ್ಚೆಯಾಯಿತೆ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಈ ಬಗ್ಗೆ ಮಲ್ಲಿಕಾರ್ಜುನ ಖರ್ಗೆ ಅವರಲ್ಲಿ ಮಾತನಾಡಿಲ್ಲ. ಶಾಸಕರನ್ನೂ ಆ ಬಗ್ಗೆ ಪ್ರಶ್ನಿಸಿಲ್ಲ. ಗುಪ್ತಚರ ಇಲಾಖೆಯಿಂದ ಮಾಹಿತಿ ಪಡೆಯುತ್ತೇನೆ ಎಂದು ಹೇಳಿದರು.ಉಪ್ಪಿಟ್ಟು, ಈರುಳ್ಳಿ ಬಜ್ಜಿ ತಿಂದೆಡಿನ್ನರ್ ಮೀಟಿಂಗ್ ಅಲ್ಲದಿದ್ದರೂ ಒಂದೂವರೆ ಗಂಟೆ ಮಲ್ಲಿಕಾರ್ಜುನ ಖರ್ಗೆ ಅವರೊಂದಿಗೆ ಚರ್ಚೆ ಮಾಡಿರುವ ಬಗ್ಗೆ ಮಾತನಾಡಿದ ಸಿದ್ದರಾಮಯ್ಯ, ಇದು ಡಿನ್ನರ್ ಮೀಟಿಂಗ್ ಅಲ್ಲ. ಆದರೂ, ಮಲ್ಲಿಕಾರ್ಜುನ ಖರ್ಗೆ ಅವರು ಉಪ್ಪಿಟ್ಟು, ಈರುಳ್ಳಿ ಬಜ್ಜಿ ಮಾಡಿಸಿದ್ದರು. ಅದನ್ನು ತಿಂದಿದ್ದೇನೆ. ಡ್ರೈ ಫ್ರೂಟ್ಸ್ ಇಟ್ಟಿದ್ದರು. ಅದನ್ನೂ ತಿಂದಿದ್ದೇನೆ ಎಂದರು.
;Resize=(128,128))
;Resize=(128,128))
;Resize=(128,128))
;Resize=(128,128))