ಕ್ರಿಕೆಟ್: ಟೀಮ್ ಕಾರ್ಣಿಕ ಕೊಡಗು ಚಾಂಪಿಯನ್, ಫ್ರೆಂಡ್ಸ್ ಇಲೆವೆನ್ ಅಮ್ಮತಿ ರನ್ನರ್ಸ್

| Published : Feb 29 2024, 02:05 AM IST / Updated: Feb 29 2024, 02:06 AM IST

ಕ್ರಿಕೆಟ್: ಟೀಮ್ ಕಾರ್ಣಿಕ ಕೊಡಗು ಚಾಂಪಿಯನ್, ಫ್ರೆಂಡ್ಸ್ ಇಲೆವೆನ್ ಅಮ್ಮತಿ ರನ್ನರ್ಸ್
Share this Article
  • FB
  • TW
  • Linkdin
  • Email

ಸಾರಾಂಶ

ಅಮ್ಮತಿಯ ಪ್ರೌಢ ಶಾಲಾ ಮೈದಾನದಲ್ಲಿ ನಡೆದ ಅಮೃತ ಯುವ ಮೊಗೇರ ಸೇವಾ ಸಮಾಜ ಸಿದ್ದಾಪುರ ಹಾಗೂ ಅಮ್ಮತಿ ಹೋಬಳಿ ನೇತೃತ್ವದಲ್ಲಿ ಮೂರು ದಿನಗಳ ಕಾಲ ನಡೆದ ಪಂದ್ಯಾವಳಿಯಲ್ಲಿ ಒಟ್ಟು ಹತ್ತು ತಂಡಗಳು ಚಾಂಪಿಯನ್ ಟ್ರೋಫಿಗಾಗಿ ಸೆಣಸಾಡಿದವು. ಟೀಮ್ ಕಾರ್ಣಿಕ ಕೊಡಗು ತಂಡ ಚಾಂಪಿಯನ್ ಆಗಿ ಹೊರಹೊಮ್ಮಿದರೆ, ಫ್ರೆಂಡ್ಸ್ ಇಲೆವೆನ್ ಅಮ್ಮತಿ ತಂಡವು ರನ್ನರ್ಸ್ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತು.

ಕನ್ನಡಪ್ರಭ ವಾರ್ತೆ ಮಡಿಕೇರಿ ಅಮ್ಮತಿಯಲ್ಲಿ ನಡೆದ ಅಮೃತ ಮೊಗೇರ ಕ್ರಿಕೆಟ್ ಪ್ರೀಮಿಯರ್ ಲೀಗ್ ನ ಸೀಸನ್-2 ರಲ್ಲಿ ಟೀಮ್ ಕಾರ್ಣಿಕ ಕೊಡಗು ತಂಡ ಚಾಂಪಿಯನ್ ಆಗಿ ಹೊರಹೊಮ್ಮಿದರೆ, ಫ್ರೆಂಡ್ಸ್ ಇಲೆವೆನ್ ಅಮ್ಮತಿ ತಂಡವು ರನ್ನರ್ಸ್ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತು.ತೃತೀಯ ಸ್ಥಾನವನ್ನು ಮರ್ಸಿಲೆಸ್ ಪಡೆದು ಕೊಂಡರೆ ಉತ್ತಮ ತಂಡವಾಗಿ ಕ್ಯಾಪ್ಟನ್ ಕ್ರಿಕೆಟರ್ಸ್ ಸುಂಟಿಕೊಪ್ಪ ಪಡೆದು ಕೊಂಡಿತು.ಅಮ್ಮತಿಯ ಪ್ರೌಢ ಶಾಲಾ ಮೈದಾನದಲ್ಲಿ ನಡೆದ ಅಮೃತ ಯುವ ಮೊಗೇರ ಸೇವಾ ಸಮಾಜ ಸಿದ್ದಾಪುರ ಹಾಗೂ ಅಮ್ಮತಿ ಹೋಬಳಿ ನೇತೃತ್ವದಲ್ಲಿ ಮೂರು ದಿನಗಳ ಕಾಲ ನಡೆದ ಪಂದ್ಯಾವಳಿಯಲ್ಲಿ ಒಟ್ಟು ಹತ್ತು ತಂಡಗಳು ಚಾಂಪಿಯನ್ ಟ್ರೋಫಿಗಾಗಿ ಸೆಣಸಾಡಿದವು.ಇದಕ್ಕೂ ಮೊದಲು ನಡೆದ ಮೊದಲ ಕ್ವಾಲಿಫಯರ್ ಪಂದ್ಯದಲ್ಲಿ ಫ್ರೆಂಡ್ಸ್ ಇಲೆವೆನ್ ಅಮ್ಮತಿ ತಂಡವು ಟೀಮ್ ಕಾರ್ಣಿಕ ಕೊಡಗು ತಂಡದ ವಿರುದ್ಧ 9 ವಿಕೆಟ್ ಗಳ ಜಯ ಸಾಧಿಸಿ ನೇರವಾಗಿ ಫೈನಲ್ ಗೆ ಅರ್ಹತೆ ಪಡೆದುಕೊಂಡಿತು.ಎಲಿಮಿನೇಟರ್ ಪಂದ್ಯವು ಕ್ಯಾಪ್ಟನ್ ಕ್ರಿಕೆಟರ್ಸ್ ಸುಂಟಿಕೊಪ್ಪ ಹಾಗೂ ಮರ್ಸಿಲೆಸ್ ತಂಡದ ನಡುವೆ ನಡೆದ ಪಂದ್ಯದಲ್ಲಿ ಮರ್ಸಿಲೆಸ್ ತಂಡವು 7 ವಿಕೆಟ್ ಗಳ ಜಯ ಪಡೆದು ಕೊಂಡು ಕ್ವಾಲಿಫಯರ್ ಗೆ ಲಗ್ಗೆ ಇಟ್ಟಿತು. ದ್ವಿತೀಯ ಕ್ವಾಲಿಫಯರ್ ಪಂದ್ಯವು ಟೀಮ್ ಕಾರ್ಣಿಕ ಕೊಡಗು ಹಾಗೂ ಮರ್ಸಿಲೆಸ್ ತಂಡದ ನಡುವೆ ನಡೆದ ಪಂದ್ಯದಲ್ಲಿ ಟೀಮ್ ಕಾರ್ಣಿಕ ಕೊಡಗು ತಂಡವು 36 ರನ್ ಗಳ ಅಂತರದಲ್ಲಿ ಗೆದ್ದು ಫೈನಲ್ ಗೆ ದ್ವಿತೀಯ ಅರ್ಹತೆ ಪಡೆದುಕೊಂಡಿತು.ಫೈನಲ್ ಪಂದ್ಯವು ಟೀಮ್ ಕಾರ್ಣಿಕ ಕೊಡಗು ಹಾಗೂ ಫ್ರೆಂಡ್ಸ್ ಇಲೆವೆನ್ ಅಮ್ಮತಿ ತಂಡದ ನಡುವೆ ನಡೆದ ರೋಚಕ ಫೈನಲ್ ಪಂದ್ಯದಲ್ಲಿ ಟೀಮ್ ಕಾರ್ಣಿಕ ಕೊಡಗು ತಂಡವು 2 ವಿಕೆಟ್ ಗಳ ರೋಚಕ ಜಯ ಸಾಧಿಸಿ ಅಮೃತ ಮೊಗೇರ ಕ್ರಿಕೆಟ್ ಪ್ರೀಮಿಯರ್ ಲೀಗ್ ನ ಸೀಸನ್-2 ರ ಚಾಂಪಿಯನ್ ಪಟ್ಟ ಅಲಂಕರಿಸಿತು.ಕ್ರೀಡಾಕೂಟದಲ್ಲಿ ಉತ್ತಮ ಬೌಲರ್ ಆಗಿ ಮರ್ಸಿಲೆಸ್ ತಂಡದ ಅಭಿ ಪಡೆದು ಕೊಂಡರೆ ಉತ್ತಮ ಬಾಟ್ಸ್ ಮೆನ್ ಆಗಿ ಟೀಮ್ ಕಾರ್ಣಿಕ ಕೊಡಗು ತಂಡದ ಸಂಜು ಪಡೆದು ಕೊಂಡರು. ಸರಣಿ ಪುರುಷೋತ್ತಮ ಪ್ರಶಸ್ತಿಯನ್ನು ಟೀಮ್ ಕಾರ್ಣಿಕ ಕೊಡಗು ತಂಡದ ನಾಯಕ ಬಿಪಿನ್ ಪಡೆದು ಕೊಂಡರು.ಸಮಾಜದ ಮಹಿಳೆಯರಿಗಾಗಿ ನಡೆಸಿದ್ದ ಥ್ರೋ ಬಾಲ್ ಪಂದ್ಯದಲ್ಲಿ ರಕ್ಷಿತಾ ನಾಯಕತ್ವದ ಟೀಮ್ ಕಾರ್ಣಿಕ ಕೊಡಗು ಚಾಂಪಿಯನ್, ಆದ್ರೆ ದಿವ್ಯ ನಾಯಕತ್ವದ ಸಿದ್ದಾಪುರ ತಂಡವು ರನ್ನರ್ಸ್ ಗೆ ತೃಪ್ತಿ ಪಟ್ಟು ಕೊಂಡಿತು. ಮಹಿಳೆಯರ ಥ್ರೋ ಬಾಲ್ ತೀರ್ಪು ಗಾರಿಕೆಯನ್ನು ರಮೇಶ್ ಹೆಬ್ಬಟ್ಟಗೇರಿ ನಡೆಸಿ ಕೊಟ್ಟರು ಸ್ಕೋರರ್ ಆಗಿ ದಿನೇಶ್ ಕಾರ್ಯ ನಿರ್ವಹಿಸಿದರು.ಅಮೃತ ಮೊಗೇರ ಸೇವಾ ಸಮಾಜ ಸಿದ್ದಾಪುರದ ಅಧ್ಯಕ್ಷ ಮಂಜು ಪಿ. ಕೆ. ಇವರ ಸಮ್ಮುಖದಲ್ಲಿ ನಡೆದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದ ಕೊಡಗು ಜಿಲ್ಲಾ ಮೊಗೇರ ಸೇವಾ ಸಮಾಜದ ಸ್ಥಾಪಕ ಸದಾನಂದ ಮಾಸ್ಟರ್, ಕ್ರೀಡೆ ದೈಹಿಕ ಹಾಗೂ ಮಾನಸಿಕ ಬೆಳವಣಿಗೆಗೆ ಸಹಕಾರಿಯಾಗಿದೆ. ಆದ್ದರಿಂದ ಪ್ರಸ್ತುತ ದಿನಗಳಲ್ಲಿ ಕ್ರೀಡಾಕೂಟಗಳನ್ನು ಹೆಚ್ಚು ಹೆಚ್ಚು ಆಯೋಜಿಸುವ ಅಗತ್ಯವಿದೆ ಎಂದರು.ಕೊಡಗು ಜಿಲ್ಲಾ ಮೊಗೇರ ಸೇವಾ ಸಮಾಜದ ಅಧ್ಯಕ್ಷ ಜನಾರ್ಧನ್ ಪಿ. ಬಿ. ಮಾತನಾಡಿ, ಕ್ರೀಡಾಕೂಟವನ್ನು ಆಯೋಜಿಸುವುದು ಸಣ್ಣ ಕೆಲಸವಲ್ಲ. ಸಂಘಟನಾ ಮನೋಭಾವನೆ ಮತ್ತು ಆರ್ಥಿಕ ಸ್ಥಿತಿಗತಿ ಸದೃಢವಾಗಿರಬೇಕು. ದ್ವಿತೀಯ ವರ್ಷದ ಕ್ರೀಡಾಕೂಟವನ್ನು ಆಯೋಜಿಸಿರುವುದು ಶ್ಲಾಘನೀಯ ಎಂದರು.ಕೊಡಗು ಜಿಲ್ಲಾ ಮೊಗೇರ ಸೇವಾ ಸಮಾಜದ ಗೌರವ ಸಲಹೆಗಾರ ಹಾಗೂ ಬಿಜೆಪಿ ಎಸ್ ಸಿ ಮೋರ್ಚಾ ಘಟಕದ ಅಧ್ಯಕ್ಷ ರವಿ ಪಿ. ಎಂ ಮಾತನಾಡಿ, ಯುವಕ, ಯುವತಿಯರು ದುಶ್ಚಟಗಳಿಗೆ ಬಲಿಯಾಗಿ, ಕಾಲಹರಣ ಮಾಡುವುದನ್ನು ಬಿಟ್ಟು ಬಿಡುವಿನ ಸಮಯದಲ್ಲಿ ಕ್ರೀಡಾ ಮನೋಭಾವನೆ ಬೆಳೆಸಿಕೊಂಡು ಆರೋಗ್ಯವನ್ನು ವೃದ್ಧಿಸಿಕೊಳ್ಳಬೇಕು ಎಂದು ಕರೆ ನೀಡಿದರು.ಕ್ರೀಡಾ ಕೂಟದ ಅಧ್ಯಕ್ಷತೆಯನ್ನು ವಹಿಸಿಕೊಂಡ ಮಂಜು ಪಿ. ಕೆ. ಮಾತನಾಡಿ ನಾನು ಅಧ್ಯಕ್ಷ ಆಗಿ ಇರಬಹುದು. ಆದರೆ ಈ ಕ್ರೀಡಾ ಕೂಟ ಯಶಸ್ವಿಯಾಗಲು ರಾಮು ಹಾಗೂ ವಿಶ್ವ ಅವರು ಹೆಚ್ಚು ಶ್ರಮ ವಹಿಸಿದ್ದಾರೆ ಎಂದರು.ಅಮೃತ ಮೊಗೇರ ಸೇವಾ ಸಮಾಜದ ಕ್ರೀಡಾ ಅಧ್ಯಕ್ಷ ಪಿ. ಸಿ. ರಮೇಶ್, ಕೊಡಗು ಜಿಲ್ಲಾ ಮೊಗೇರ ಸೇವಾ ಸಮಾಜದ ಕ್ರೀಡಾ ಅಧ್ಯಕ್ಷ ಎಂ. ಜಿ. ಚಂದ್ರು, ಗೌತಮ್ ಶಿವಪ್ಪ, ಪಿ. ಬಿ. ಶಿವಪ್ಪ, ರಾಮು ಪಿ. ಎನ್. ನಾರಾಯಣ. ಎಂ. ಬಿ.ವಿಶ್ವ, ವಸಂತ, ಚಂದ್ರು ಪಿ. ಕೆ. ಮಾಚಿಮಂಡ ಸುವಿನ್ ಗಣಪತಿ, ರಘು, ಮಂಜು ಚಂದು, ಗಣೇಶ್, ಸುರೇಶ್ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು.ಕ್ರೀಡಾ ಕೂಟಕ್ಕೆ ತೀರ್ಪುಗಾರರಾಗಿ ನಿತೇಶ್, ಯೋಗೇಶ್,ಮಣಿ, ಸ್ಯಾಮ್, ಕಾರ್ಯನಿರ್ವಹಿಸಿದರೆ ವೀಕ್ಷಕ ವಿವರಣೆಯನ್ನು, ರಮೇಶ್ ಹೆಬ್ಬಟ್ಟಗೇರಿ, ಮಂಜು ಬಬ್ಳಿ ಹಾಗೂ ಮಹೇಶ್ ನಡೆಸಿಕೊಟ್ಟರು.ಲೈವ್ ಸ್ಕೋರರ್ ಆಗಿ, ಅಶೋಕ್ ಮಡಿಕೇರಿ, ವಿಶ್ವ, ಚೇತನ್ ಹಾಗೂ ವಿವೇಕ್ ಮೊಗೇರ ನಡೆಸಿಕೊಟ್ಟರು.