ಸಾರಾಂಶ
ಮಯಾಂಕ್ ಅಗರ್ವಾಲ್ ಭಾರತೀಯ ಕ್ರಿಕೆಟ್ ತಂಡದ ಆಟಗಾರನಾಗಿದ್ದು, ಕರ್ನಾಟಕದ ರಣಜಿ ತಂಡ, ಐಪಿಎಲ್‌ನಲ್ಲಿ ಸನ್‌ರೈಸರ್ ಹೈದರಾಬಾದ್ ತಂಡ ಮತ್ತು ಇರಾನಿ ಟ್ರೋಪಿಯಲ್ಲಿ ರೆಸ್ಟ್ ಆಫ್ ಇಂಡಿಯಾವನ್ನು ನಾಯಕನಾಗಿ ಮುನ್ನಡೆಸಿದ್ದರು. .
ಕನ್ನಡಪ್ರಭ ವಾರ್ತೆ ಸುಬ್ರಹ್ಮಣ್ಯ
ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಕ್ರಿಕೆಟಿಗ ಮಯಾಂಕ್ ಅಗರ್ವಾಲ್ ಸರ್ಪಸಂಸ್ಕಾರ ಸೇವೆಯನ್ನು ಮಂಗಳವಾರ ಆರಂಭಿಸಿದ್ದಾರೆ.ಸೋಮವಾರ ಕ್ಷೇತ್ರಕ್ಕೆ ಪತ್ನಿ ಆಶಿತಾ ಸೂದ್ ಅವರೊಂದಿಗೆ ಆಗಮಿಸಿ ಖಾಸಗಿ ಹೋಟೆಲ್‌ನಲ್ಲಿ ತಂಗಿದ್ದರು. ಕ್ಷೇತ್ರಕ್ಕೆ ಆಗಮಿಸಿದ ಮಯಾಂಕ್ ಅರ್ಗವಾಲ್ ಮತ್ತು ಆಶಿತಾ ಸೂದ್ ದಂಪತಿಯನ್ನು ಹೋಟೆಲ್‌ನಲ್ಲಿ ಆರತಿ ಬೆಳಗಿ ತಿಲಕವಿಟ್ಟು ಸ್ವಾಗತಿಸಲಾಯಿತು.
ಮಂಗಳವಾರ ಬೆಳಗ್ಗೆ ಕುಟುಂಬ ಸಮೇತರಾಗಿ ಶ್ರೀ ದೇವಳದಲ್ಲಿ ಸರ್ಪಸಂಸ್ಕಾರ ಸೇವೆ ಆರಂಭಿಸಿ ವೈದಿಕ ವಿಧಿ ವಿಧಾನಗಳನ್ನು ನೆರವೇರಿಸಿದರು. ಬುಧವಾರ ಗೋಪೂಜೆ, ಬ್ರಹ್ಮಚಾರಿ ಆರಾಧನೆ ಮತ್ತು ನಾಗಪ್ರತಿಷ್ಠಾ ಸೇವೆ ನೆರವೇರಿಸಿ ಸರ್ಪಸಂಸ್ಕಾರ ಸೇವೆಯನ್ನು ಸಂಪೂರ್ಣಗೊಳಿಸಲಿದ್ದಾರೆ. ಬಳಿಕ ಶ್ರೀ ದೇವರ ದರ್ಶನ ಪಡೆದು ಪ್ರಸಾದ ಪಡೆದು, ಪ್ರಸಾದ ಭೋಜನ ಸ್ವೀಕರಿಸಲಿದ್ದಾರೆ.ಮಯಾಂಕ್ ಅಗರ್ವಾಲ್ ಭಾರತೀಯ ಕ್ರಿಕೆಟ್ ತಂಡದ ಆಟಗಾರನಾಗಿದ್ದು, ಕರ್ನಾಟಕದ ರಣಜಿ ತಂಡ, ಐಪಿಎಲ್‌ನಲ್ಲಿ ಸನ್‌ರೈಸರ್ ಹೈದರಾಬಾದ್ ತಂಡ ಮತ್ತು ಇರಾನಿ ಟ್ರೋಪಿಯಲ್ಲಿ ರೆಸ್ಟ್ ಆಫ್ ಇಂಡಿಯಾವನ್ನು ನಾಯಕನಾಗಿ ಮುನ್ನಡೆಸಿದ್ದರು. .