ಟೀಕೆಗಳು ಸಾಯುತ್ತವೆ, ಆದರೆನಾವು ಮಾಡಿದ ಅಭಿವೃದ್ದಿ ಕೆಲಸಗಳು ಉಳಿಯುತ್ತವೆ, ನಾನು ಶಾಸಕನಾದ ಬಳಿಕ ಕ್ಷೇತ್ರಕ್ಕೆ ಸಾವಿರಾರು ಕೋಟಿ ಅನುದಾನ ತಂದು ಸಮರ್ಥವಾಗಿ ಕೆಲಸ ಮಾಡಿದ್ದೆನೆ ಎಂದು ಶಾಸಕ ಎ.ಆರ್.ಕೃಷ್ಣಮೂರ್ತಿ ಹೇಳಿದರು.
ಕನ್ನಡಪ್ರಭ ವಾರ್ತೆ ಕೊಳ್ಳೇಗಾಲ
ಟೀಕೆಗಳು ಸಾಯುತ್ತವೆ, ಆದರೆನಾವು ಮಾಡಿದ ಅಭಿವೃದ್ದಿ ಕೆಲಸಗಳು ಉಳಿಯುತ್ತವೆ, ನಾನು ಶಾಸಕನಾದ ಬಳಿಕ ಕ್ಷೇತ್ರಕ್ಕೆ ಸಾವಿರಾರು ಕೋಟಿ ಅನುದಾನ ತಂದು ಸಮರ್ಥವಾಗಿ ಕೆಲಸ ಮಾಡಿದ್ದೆನೆ ಎಂದು ಶಾಸಕ ಎ.ಆರ್.ಕೃಷ್ಣಮೂರ್ತಿ ಹೇಳಿದರು.ವಿವಿಧ ಅಭಿವೃದ್ದಿ ಕಾಮಗಾರಿಗಳ ಉದ್ಘಾಟನೆ ಮತ್ತು ಶಂಕುಸ್ಥಾಪನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ, ಮುಖ್ಯಮಂತ್ರಿಗಳು ಅಂಜುಮಾನ್ ಸಂಘಟನೆಗಳ ಬೇಡಿಕೆಯಂತೆ ಶಾದಿ ಮಹಲ್ ನಿರ್ಮಾಣಕ್ಕೆ 1 ಕೋಟಿ ರು.ಅನುದಾನ ನೀಡುವುದಾಗಿ ಭರವಸೆ ನೀಡಿದ್ದಾರೆ ಎಂದರು.
ಮುಡಿಗುಂಡ ಸೇತುವೆಗೆ 15 ಕೋಟಿ ರು., ನೀರಾವರಿಗೆ ನೂರಾರು ಕೋಟಿ ರು., ಅಗರ ಮದ್ದೂರು ಕೆರೆ ನೀರು ತುಂಬಿಸುವ ಯೋಜನೆಗೆ 839 ಕೋಟಿ ರು., ಜಿಲ್ಲಾಸ್ಪತ್ರೆ ನಿರ್ಮಾಣ, ಅಗ್ನಿ ಶಾಮಕ ಠಾಣೆ, ಎಳನೀರು ಮಾರುಕಟ್ಟೆ ಸ್ಥಾಪನೆ ಸೇರಿದಂತೆ ಹಲವು ಯೋಜನೆಗಳಿಗೆ ಮುಖ್ಯಮಂತ್ರಿಗಳು ಇಂದು ಚಾಲನೆ ನೀಡಿದ್ದಾರೆ ಎಂದರು.ಎಲ್ಲ ಭವನಗಳಲ್ಲೂ ಗ್ರಂಥಾಲಯ, ಕೋಚಿಂಗ್ ತರಗತಿ:
ಅಂಬೇಡ್ಕರ್ ಭವನಗಳಲ್ಲೂ ಗ್ರಂಥಾಲಯ, ಕೋಚಿಂಗ್ ತರಗತಿಗಳನ್ನು ನಡೆಸಿ ಅಧ್ಯಯನ ಮಾಡುವ ವಿದ್ಯಾರ್ಥಿಗಳಿಗೆ ಪೂರಕ ವಾತಾವರಣ ಸೃಷ್ಟಿಸಲುಗಂಭೀರ ಚಿಂತನೆ ನಡೆಸಲಾಗಿದೆ. ಅದೇ ರೀತಿಯಲ್ಲಿ ವಿದ್ಯಾರ್ಥಿ ನಿಲಯಗಳಲ್ಲೂ ಗ್ರಂಥಾಲಯ ಸ್ಥಾಪಿಸಿ ವಿದ್ಯಾರ್ಥಿಗಳಜ್ಞಾನಾರ್ಜನೆ ಹೆಚ್ಚಳ, ಓದಿಗೆ ಪೂರಕ ವಾತಾವರಣ ನಿರ್ಮಿಸಲು ಸರ್ಕಾರ ಗಂಬೀರ ಚಿಂತನೆ ನಡೆಸಿದೆ ಎಂದು ಸಮಾಜ ಕಲ್ಯಾಣ ಸಚಿವ ಕೆ.ಎಚ್.ಮುನಿಯಪ್ಪ ಹೇಳಿದರು.
ವಸತಿ ಶಾಲೆಯಲ್ಲಿ ಶೇ.99ರಷ್ಟು ಉತ್ತಮ ಫಲಿತಾಂಶ ದೊರಕುತ್ತಿದ್ದು ಇನ್ನಷ್ಟು ಮಕ್ಕಳ ಕಲಿಕೆಗೆ ಉತ್ತೇಜಿಸಲು ವಿದ್ಯಾರ್ಥಿ ನಿಲಯದಲ್ಲಿ ಗ್ರಂಥಾಲಯ ಸ್ಥಾಪನೆ ಹಾಗೂ ಅದೇ ರೀತಿಯಲ್ಲಿ ಅಂಬೇಡ್ಕರ್ ಭವನಗಳಲ್ಲೂ ಸ್ಪರ್ಧಾತ್ಮಕ ಪರೀಕ್ಷೆ, ವಿವಿಧ ತರಬೇತಿಗಳನ್ನು ನೀಡಲು ಗ್ರಂಥಾಲಯ ಸ್ಥಾಪಿಸಿ ಓದಿಗೆ ಉತ್ತೇಜಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.ಸಚಿವ ಪುಟ್ಟರಂಗಶೆಟ್ಟಿ ಮಾತನಾಡಿ, ಮುಖ್ಯಮಂತ್ರಿಗಳು ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲು ಆಗಮಿಸಿರುವುದು ಸಂತಸ ತಂದಿದೆ. ಅವರಿಗೆ ದೇವರು ಮತ್ತು ಗುರುಗಳಮೇಲೆ ಅಪಾರ ಭಕ್ತಿ ಇದೆ.
ಅವರ ಅವಧಿಯಲ್ಲಿ ಇತ್ತಿಚೆಗೆ ಹೆಚ್ಚಿನ ಮಳೆಯಾಗಿ ಕೆರೆ-ಕಟ್ಟೆಗಳು ತುಂಬಿ ತುಳುಕುತ್ತಿವೆ. ಮುಖ್ಯಮಂತ್ರಿಗಳು ಜಿಲ್ಲೆಯ ಸಮಗ್ರ ಅಭಿವೃದ್ದಿಗಾಗಿ ಇನ್ನು ಹೆಚ್ಚಿನ ಅನುದಾನ ನೀಡುವಲ್ಲಿ ಮುಂದಾಗಬೇಕು ಎಂದರು.ಸಚಿವರಾದ ಚಲುವರಾಯಸ್ವಾಮಿ, ಡಾ.ಅಜಯ್ ಸಿಂಗ್, ಡಾ.ಯು.ಟಿ.ಖಾದರ್, ಅಂಬೇಡ್ಕರ್ ನಿಗಮದ ಅಧ್ಯಕ್ಷ ನರೇಂದ್ರ, ಹನೂರು ಶಾಸಕ ಎಂ.ಆರ್.ಮಂಜುನಾಥ್, ಗುಂಡ್ಲುಪೇಟೆ ಶಾಸಕ ಗಣೇಶ್ ಪ್ರಸಾದ್. ಮಾಜಿ ಶಾಸಕರಾದ ನರೇಂದ್ರ, ಜಿ.ಎನ್.ನಂಜುಂಡಸ್ವಾಮಿ, ಜಿಲ್ಲಾಧಿಕಾರಿ ರೂಪ, ಕಾಡಾ ಅಧ್ಯಕ್ಷ ಮರಿಸ್ವಾಮಿ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಯೋಗೀಶ್, ಗ್ಯಾರಂಟಿ ಯೋಜನೆ ಜಿಲ್ಲಾಧ್ಯಕ್ಷ ಹೊಂಗನೂರು ಚಂದ್ರು, ಚಾಮುಲ್ ಅಧ್ಯಕ್ಷ ನಂಜುಂಡಸ್ವಾಮಿ, ತೋಟೇಶ್, ರಾಜೇಂದ್ರ, ಪ್ರಭುಪ್ರಸಾದ್, ಜಿ ಎನ್ ಲೋಕೇಶ್ ಇದ್ದರು.