ಮೊಸಳೆ ದಾಳಿ: ರೈತನಿಗೆ 10 ಲಕ್ಷ ಪರಿಹಾರ: ಶಾಸಕ ಜೆ.ಟಿ.ಪಾಟೀಲ

| Published : Oct 26 2024, 01:13 AM IST

ಮೊಸಳೆ ದಾಳಿ: ರೈತನಿಗೆ 10 ಲಕ್ಷ ಪರಿಹಾರ: ಶಾಸಕ ಜೆ.ಟಿ.ಪಾಟೀಲ
Share this Article
  • FB
  • TW
  • Linkdin
  • Email

ಸಾರಾಂಶ

ಮೊಸಳೆ ದಾಳಿಯಿಂದ ಕೈ ಕಳೆದುಕೊಂಡಿದ್ದ ಕಾತರಕಿ ಗ್ರಾಮದ ರೈತ ಧರಿಯಪ್ಪ ಸಂಗಪ್ಪ ಮೇಟಿ ಎಂಬಾತರಿಗೆ ಶಾಸಕ ಜೆ ಟಿ. ಪಾಟೀಲ ಅವರು ಕೊಟ್ಟ ಮಾತಿನಂತೆ ಕೇವಲ 10 ದಿನದಲ್ಲಿ ಸರ್ಕಾರದಿಂದ ಪರಿಹಾರ ಮಂಜೂರು

ಕನ್ನಡಪ್ರಭ ವಾರ್ತೆ ಬೀಳಗಿ

ಕೆಲವು ದಿನಗಳ ಹಿಂದೆ ತಾಲೂಕಿನ ಹೊನ್ನಿಹಾಳ ಗ್ರಾಮದ ಹತ್ತಿರದ ಆಲಮಟ್ಟಿ ಜಲಾಶಯ ಹಿನ್ನಿರಿನಲ್ಲಿ ತಮ್ಮ ಜೋಡು ಎತ್ತುಗಳಿಗೆ ನೀರು ಕುಡಿಸಿ ಮೈ ತೊಳೆಯುವ ಸಂದಭರ್ದಲ್ಲಿ ಮೊಸಳೆ ದಾಳಿಯಿಂದ ಕೈ ಕಳೆದುಕೊಂಡಿದ್ದ ಕಾತರಕಿ ಗ್ರಾಮದ ರೈತ ಧರಿಯಪ್ಪ ಸಂಗಪ್ಪ ಮೇಟಿ ಎಂಬಾತರಿಗೆ ಶಾಸಕ ಜೆ ಟಿ. ಪಾಟೀಲ ಅವರು ಕೊಟ್ಟ ಮಾತಿನಂತೆ ಕೇವಲ 10 ದಿನದಲ್ಲಿ ಸರ್ಕಾರದಿಂದ ಪರಿಹಾರ ಮಂಜೂರುಗೊಳಿಸಿ, ವಲಯ ಅರಣ್ಯ ಇಲಾಖೆ ಅಡಿಯಲ್ಲಿ ₹10 ಲಕ್ಷ ಚೆಕ್ ವಿತರಿಸಿ, ಮುಂದಿನ ಐದು ವರ್ಷಗಳವರೆಗೆ ಪ್ರತಿ ತಿಂಗಳ ಉಪಜೀವನಕ್ಕಾಗಿ ₹4000 ಮಾಸಾಶನ ಬರುವಂತೆ ಅನುಕೂಲ ಕಲ್ಪಿಸಿದ್ದಾರೆ.

ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವೇಳೆ ಶಾಸಕ ಜೆ. ಟಿ.ಪಾಟೀಲ ಅವರು ಭೇಟಿ ನೀಡಿ ಅಲ್ಲಿಯೇ ಅಧಿಕಾರಿಗಳ ಜೊತೆ ಚರ್ಚಿಸಿ ಚಿಕಿತ್ಸೆ ಜತೆಗೆ ಸರ್ಕಾರದಿಂದ ಸಿಗಬೇಕಾದ ಪರಿಹಾರದ ಎಲ್ಲ ವ್ಯವಸ್ಥೆ ಮಾಡುವಂತೆ ಸೂಚಿಸಿದರ ಪರಿಣಾಮ ಇಂದು ಬಡ ರೈತ ಧರಿಯಪ್ಪನ ಕಷ್ಟಕ್ಕೆ ಶಾಸಕರು ನೇರವಾಗಿದ್ದಾರೆ. ಧರಿಯಪ್ಪ ಆರೋಗ್ಯಯುತವಾಗಿದ್ದಾನೆ ಎಂದು ತಿಳಿದು ಬಂದಿದೆ.

ಮಾನವೀಯತೆ ಮೆರೆದ ಶಾಸಕರು:

ಕಷ್ಟದ ಸಮಯದಲ್ಲೂ ಬಡ ಜನರಿಗೆ ಯಾವ ರೀತಿಯಲ್ಲಿ ಸಹಾಯ ಸಹಕಾರ ನೀಡಬಹುದು ಎನ್ನುವುದನ್ನು ಶಾಸಕ ಜೆ.ಟಿ.ಪಾಟೀಲ ತಿಳಿಸಿ ಕೊಟ್ಟಿದ್ದಾರೆ. ಮೊಸಳೆ ದಾಳಿಯಿಂದ ಮನೆಯ ಯುವಕನ ಪರಿಸ್ಥಿತಿ ಕಂಡು ಗಾಬರಿಯಾಗಿದ್ದ ಕುಟುಂಬಕ್ಕೆ ಕೇವಲ 10 ದಿನದಲ್ಲಿ ಸರ್ಕಾರದಿಂದ ಪರಿಹಾರ ಮಂಜೂರು ಮಾಡಿದ್ದು ಅಲ್ಲದೆ ಅವರಿಗೆ ಯಾವುದೆ ರೀತಿ ಕಷ್ಟ ಬರದಂತೆ ಪ್ರತಿ ತಿಂಗಳು ಐದು ವರ್ಷದವರಿಗೆ ₹4000 ಮಾಸಾಶನ ಮಂಜೂರು ಮಾಡಿಸಿದ್ದಾರೆ. ವಿವಿಧ ಕಾಮಗಾರಿಗಳಿಗೆ ಜೆ.ಟಿ.ಪಾಟೀಲ ಚಾಲನೆ

ಬೀಳಗಿ ತಾಲೂಕಿನ ಇನಾಂ ಹಂಚಿನಾಳ, ನಾಗರಾಳ ಮತ್ತು ಢವಳೇಶ್ವರ ಗ್ರಾಮದಲ್ಲಿ ದೇವಸ್ಥಾನಗಳ ಜೀರ್ಣೋದ್ಧಾರಕ್ಕಾಗಿ ಮಂಜೂರಾಗಿದ್ದ ಅನುದಾನದಡಿಯಲ್ಲಿ ಸಮುದಾಯ ಭವನ, ಸಾರ್ವಜನಿಕ ಸ್ಥಳಗಳಲ್ಲಿ ಪೇವರ್ಸ್‌ ಅಳವಡಿಕೆ ಮತ್ತು ಇನಾಂ ಹಂಚಿನಾಳ ಗ್ರಾಮದ ಅಗಸಿ ಬಾಗಿಲು ನಿರ್ಮಾಣ ಸೇರಿದಂತೆ ವಿವಿಧ ಕಾಮಗಾರಿಗಳಿಗೆ ಶಾಸಕ ಜೆ.ಟಿ.ಪಾಟೀಲ್ ಭೂಮಿ ಪೂಜೆ ನೆರವೇರಿಸಿದ್ದಾರೆ.

ಕಾಮಗಾರಿಗಳನ್ನು ಗುತ್ತಿಗೆದಾರರು ಸಕಾಲಕ್ಕೆ ಮುಗಿಸಿ ಸಾರ್ವಜನಿಕರಿಗೆ ಅನುಕೂಲ ಕಲ್ಪಿಸಿಕೊಡಬೇಕು. ಕಾಮಗಾರಿಗಳು ಗುಣಮಟ್ಟದಿಂದ ಕುಡಿರಬೇಕು. ಸರ್ಕಾರದ ಕೆಲಸ ಎಂದಾಕ್ಷಣ ಬೇಜವಾಬ್ದಾರಿ ಮಾಡದೆ ಕಾಮಗಾರಿಗಳನ್ನು ವ್ಯವಸ್ಥಿತವಾಗಿ ಮುಗಿಸಿಕೊಡಬೇಕು ಎಂದು ಇದೇ ವೇಳೆ ಶಾಸಕರು ತಾಕೀತು ಮಾಡಿದ್ದಾರೆ.

ಈ ಸಂದಭರ್ದಲ್ಲಿ ಜಿಲ್ಲಾ ಅರಣ್ಯಾಕಾರಿ ರುದ್ರಣ್ ಪಿ, ವಲಯ ಅರಣ್ಯಕಾರಿ ಅಮತ್ ಗಂಡೋಸಿ, ತಹಸೀಲ್ದಾರ್ ವಿನೋದ್ ಹತ್ತಳ್ಳಿ, ತಾಪಂ ಅಭಯಕುಮಾರ್ ಮೊರಬ, ಪಪಂ ಮುಖ್ಯಾಕಾರಿ ದೇವೇಂದ್ರ ಧನಪಾಲ್ ಇದ್ದರು. ಕಾಮಗಾರಿ ಪೂಜಾ ಕಾರ್ಯಕ್ರಮದಲ್ಲಿ ದಿಗಂಬರೇಶ್ವರ ಮಠದ ಶೇಷಪ್ಪಯ್ಯ ಮಹಾಸ್ವಾಮೀಜಿ, ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಹಣಮಂತ ಕಾಖಂಡಕಿ, ಶ್ರೀಶೈಲ ಸೂಳಿಕೇರಿ, ಯಮನಪ್ಪ ರೊಳ್ಳಿ, ರಾಜೇಂದ್ರ ದೇಶಪಾಂಡೆ, ಪಡಿಯಪ್ಪ ದೇಸಾಯಿ, ಯಲ್ಲಪ್ಪ ಕರಿಗಾರ, ವೀರಭದ್ರಪ್ಪ ವಾಲಿ, ಪಿತಾಂಬರಿ ಕೋಲಾರ, ಈರಯ್ಯ ಹಿರೇಮಠ, ಸಂತೋಷ್ ಕೋಲ್ಹಾರ್, ವಿಠ್ಠಲ್ ಕಂದಗಲ್ ಸೇರಿದಂತೆ ಇತರರು ಇದ್ದರು.