ಮೊಸಳೆ ದಾಳಿ: ತುಂಡಾದ ಕುರಿಗಾಹಿಯ ಬಲಗೈ

| Published : Aug 13 2024, 12:58 AM IST

ಸಾರಾಂಶ

Crocodile Attack: Shepherd's right hand severed

ಕನ್ನಡಪ್ರಭ ವಾರ್ತೆ ವಡಗೇರಾ

ನದಿ ದಡದಲ್ಲಿ ಕುರಿಗಳು ಮೇಯಿಸುತ್ತಿದ್ದಾಗ, ನೀರು ಕುಡಿಯಲು ನದಿ ತೀರಕ್ಕೆ ಇಳಿದಿದ್ದ ಕುರಿಗಾಹಿ ಮೇಲೆ ಮೊಸಳೆ ದಾಳಿ ಮಾಡಿರುವ ಘಟನೆ ಸೋಮವಾರ ಸಂಜೆ ವೇಳೆ ತಾಲೂಕಿನ ಶಿವಪುರ ಗ್ರಾಮದ ಕೃಷ್ಣಾ ನದಿ ತೀರದಲ್ಲಿ ನಡೆದಿದೆ. ಭೀಮಾಶಂಕರ ರುಕ್ಮಣ್ಣ (25) ಮೊಸಳೆ ದಾಳಿಗೆ ಒಳಗಾದ ಕುರಿಗಾಹಿ. ದಾಳಿಗೆ ಬಲಗೈ ಸಂಪೂರ್ಣ ತುಂಡಾಗಿದ್ದು, ಮೈತುಂಬ ಗಾಯಗಳಾಗಿವೆ. ತುಂಡಾದ ಕೈಯನ್ನು ಮೊಸಳೆ ಎಳೆದುಕೊಂಡು ನೀರಿನಲ್ಲಿ ಹೋಗಿದೆ. ಮೊಸಳೆ ದಾಳಿಗೆ ಒಳಗಾದ ಭೀಮಾಶಂಕರ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಭೀಮಾಶಂಕರ ಅವರು ಎಂದಿನಂತೆ, ಕುರಿಗಳನ್ನು ಮೇಯಿಸಲು ಹೋಗಿದ್ದ ಸಂದರ್ಭದಲ್ಲಿ ಕೃಷ್ಣಾ ನದಿದಂಡೆಯಲ್ಲಿ ಕುರಿಗಳನ್ನು ಮೇಯಿಸುತ್ತಿರುವಾಗ ನೀರು ಕುಡಿಯಲು ನದಿಗೆ ಇಳಿದಿದ್ದ ವೇಳೆ ಆತನ ಮೇಲೆ ಮೊಸಳೆ ಏಕಾಏಕಿ ದಾಳಿ ನಡೆಸಿದ್ದು, ಬಲಗೈ ತುಂಡಾಗಿದ್ದು, ಮೈಯಲ್ಲಿ ಗಾಯಗಳಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ರಾಯಚೂರಿನ ಆಸ್ಪತ್ರೆಗೆ ಕರೆದೊಯ್ಯಲಾಗಿದೆ ಎಂದು ಅರಣ್ಯಾಧಿಕಾರಿ, ವಡಗೇರಾ ಪೊಲೀಸ್ ಠಾಣೆಗೆ ಗ್ರಾಮಸ್ಥರು ಮಾಹಿತಿ ನೀಡಿದ್ದಾರೆ.

-----

ಫೋಟೊ:12ವೈಡಿಆರ್16: ವಡಗೇರಾ ತಾಲೂಕಿನ ಶಿವಪುರ ಗ್ರಾಮದ ಕುರಿಗಾಹಿ ಭೀಮಾಶಂಕರ ಅವರ ಬಲಗೈ ಮೊಸಳೆ ದಾಳಿಗೆ ತುಂಡಾಗಿರುವುದು.