ಕಾವೇರಿ ನದಿ ದಾಟಿ ಸಾಲೂರು ಶ್ರೀ ಪರಿಶೀಲನೆ

| Published : Mar 05 2024, 01:36 AM IST

ಕಾವೇರಿ ನದಿ ದಾಟಿ ಸಾಲೂರು ಶ್ರೀ ಪರಿಶೀಲನೆ
Share this Article
  • FB
  • TW
  • Linkdin
  • Email

ಸಾರಾಂಶ

ಕನಕಪುರ ಸಂಗಮದ ಕಾವೇರಿ ನದಿ ತೀರದಲ್ಲಿ ಪಾದಯಾತ್ರೆ ಮೂಲಕ ಆಗಮಿಸುತ್ತಿರುವ ಮಲೆ ಮಹದೇಶ್ವರ ಭಕ್ತಾಧಿಗಳೊಂದಿಗೆ ಸಾಲೂರು ಬೃಹನ್ ಮಠದ ಶಾಂತ ಮಲ್ಲಿಕಾರ್ಜುನ ಸ್ವಾಮಿ ನದಿ ದಾಟಿ ಅಲ್ಲಿನ ವ್ಯವಸ್ಥೆ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದರು.

ಕನ್ನಡಪ್ರಭ ವಾರ್ತೆ ಹನೂರು ಕನಕಪುರ ಸಂಗಮದ ಕಾವೇರಿ ನದಿ ತೀರದಲ್ಲಿ ಪಾದಯಾತ್ರೆ ಮೂಲಕ ಆಗಮಿಸುತ್ತಿರುವ ಮಲೆ ಮಹದೇಶ್ವರ ಭಕ್ತಾಧಿಗಳೊಂದಿಗೆ ಸಾಲೂರು ಬೃಹನ್ ಮಠದ ಶಾಂತ ಮಲ್ಲಿಕಾರ್ಜುನ ಸ್ವಾಮಿ ನದಿ ದಾಟಿ ಅಲ್ಲಿನ ವ್ಯವಸ್ಥೆ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದರು. ಮಹಾಶಿವರಾತ್ರಿ ಹಬ್ಬಕ್ಕೂ ಮುನ್ನರಾಜ್ಯದ ನಾನಾ ಭಾಗಗಳಿಂದ ಕಾವೇರಿ ನದಿ ದಾಟಿ ಮಲೆ ಮಾದೇಶ್ವರ ಬೆಟ್ಟಕ್ಕೆ ಪಾದಯಾತ್ರೆಯಲ್ಲಿ ಆಗಮಿಸುವ ಭಕ್ತಾದಿಗಳನ್ನು ಸ್ವಾಗತಿಸಲು ಕಾವೇರಿ ನದಿ ಸಂಗಮಕ್ಕೆ ತೆರಳಿ, ಭಕ್ತರ ಜೊತೆಯಲ್ಲಿ ಮಲೆ ಮಹದೇಶ್ವರ ಬೆಟ್ಟದ ಶಾಲೂರು ಬೃಹನ್ ಮಠದ ಶಾಂತ ಮಲ್ಲಿಕಾರ್ಜುನ ಸ್ವಾಮಿ ಕಾವೇರಿ ನದಿಯನ್ನು ದಾಟುವ ಮೂಲಕ ಅಲ್ಲಿನ ಸ್ಥಿತಿಗತಿಗಳ ಬಗ್ಗೆ ಖುದ್ದಾಗಿ ಪರಿಶೀಲನೆ ನಡೆಸಿದರು. ಕಾವೇರಿ ನದಿಯನ್ನು ದಾಟಿ ಲಕ್ಷಾಂತರ ಭಕ್ತರು ಪಾದಯಾತ್ರೆಯಲ್ಲಿ ಆಗಮಿಸುತ್ತಿದ್ದಾರೆ. ಬೆಟ್ಟಗುಡ್ಡಗಳ ಅರಣ್ಯ ಪ್ರದೇಶದಿಂದ ಕೂಡಿರುವ ಮಧ್ಯಭಾಗದಲ್ಲಿ ಬರುವ ಸಂಗಮ ಕಾವೇರಿ ನದಿ ದಾಟುತ್ತಿರುವುದು ಭಕ್ತರು ಎಚ್ಚರಿಕೆಯಿಂದ ತಮ್ಮ ಜೊತೆಯಲ್ಲಿ ಬಂದಿರುವ ಮಕ್ಕಳು ಮತ್ತು ಕುಟುಂಬದವರ ಜೊತೆ ಬರುತ್ತಿರುವುದು ಹಲವಾರು ವರ್ಷಗಳಿಂದ ವಾಡಿಕೆಯಾಗಿದೆ.

ಮಲೆ ಮಾದೇಶ್ವರ ಬೆಟ್ಟಕ್ಕೆ ಬರುತ್ತಿರುವ ಮಾದಪ್ಪನ ಭಕ್ತರು ಅರಣ್ಯ ಪ್ರದೇಶ ಕಾಲು ದಾರಿಯಲ್ಲಿ ಕಾವೇರಿ ನದಿ ದಾಟಿ ಬರುವ ವೇಳೆಯಲ್ಲಿ ತಾವು ತರುವ ತಿಂಡಿ ತಿನಿಸು ಮತ್ತು ಕುಡಿಯಲು ನೀರು ಬಳಸಿ ಬೀಸಾಡುವ ತ್ಯಾಜ್ಯಗಳನ್ನು ನಿಗದಿತ ಸ್ಥಳದಲ್ಲಿ ಹಾಕುವ ಮೂಲಕ ಅರಣ್ಯದ ಸ್ವಚ್ಛತೆ ಕಾಪಾಡಿ ಇದರಿಂದಾಗಿ ಬರಬಿಸಿಲಿನಿಂದ ಒಣಗಿರುವ ಅರಣ್ಯದಲ್ಲಿ ಪಾಣಿಪಕ್ಷಿಗಳು ಪ್ಲಾಸ್ಟಿಕ್ ಮತ್ತು ಇನ್ನಿತರ ಪದಾರ್ಥಗಳನ್ನು ತಿಂದು ಪ್ರಾಣ ಹಾನಿ ಕಳೆದುಕೊಳ್ಳುವುದನ್ನು ತಪ್ಪಿಸಬಹುದು ಎಂದು ಸಲಹೆ ನೀಡಿದರು.

ಮುಂಜಾಗ್ರತ ಕ್ರಮ ಅರಣ್ಯ ಅಧಿಕಾರಿಗಳಿಂದ ಮಾಹಿತಿ ಪಡೆದರು ಶ್ರೀಗಳು ಸಂಗಮದಲ್ಲಿ ಕಾವೇರಿ ನದಿಯನ್ನು ಭಕ್ತರ ಜೊತೆ ದಾಟಿ ನಂತರ ಚಾಮರಾಜನಗರ, ರಾಮನಗರ ಜಿಲ್ಲಾಡಳಿತ, ಅರಣ್ಯ ಇಲಾಖೆಯು, ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದು ಭಕ್ತರಿಗೆ ಅನುಕೂಲವಾಗುವಂತೆ ವ್ಯವಸ್ಥೆ ಮಾಡಿರುವುದು ಶ್ಲಾಘನೀಯ ವಿಚಾರವಾಗಿದೆ. ಕನಕಪುರದ ಮಹದೇವನಾಯ್ಕ ಹಾಗೂ ಅನೇಕ ಭಕ್ತರು ಅಲ್ಲಲ್ಲಿ ದಾಸೋಹ ಮಜ್ಜಿಗೆ ಪಾನಕ ವ್ಯವಸ್ಥೆಯು ಅಚ್ಚುಕಟ್ಟಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.