ಹೈನುಗಾರಿಕೆ ಹಾಗೂ ಕೋಳಿ ಸಾಕಾಣಿಕೆ ಉದ್ಯಮ ಕ್ಷೇತ್ರದಲ್ಲಿ ಸಲ್ಲಿಸಿರುವ ಮಹತ್ವದ ಸೇವೆ ಮತ್ತು ವೃತ್ತಿಪರ ಕೊಡುಗೆಯನ್ನು ಪರಿಗಣಿಸಿ ಮಂಗಳೂರಿನ ಖ್ಯಾತ ಪಶು ವೈದ್ಯಕೀಯ ತಜ್ಞ ಡಾ.ಸುಶಾಂತ್‌ ರೈ ಬೆಳ್ಳಿಪಾಡಿ ಅವರಿಗೆ ಉತ್ತರ ಪ್ರದೇಶದ ಬರೇಲಿಯ ಇಝತ್‌ನಗರದಲ್ಲಿರುವ ದೇಶದ ಪ್ರತಿಷ್ಠಿತ ಐವಿಆರ್‌ಐ-ಐಸಿಎಆರ್‌ (ಇಂಡಿಯನ್‌ ವೆಟರ್ನರಿ ರಿಸರ್ಚ್‌ ಇನ್‌ಸ್ಟಿಟ್ಯೂಟ್‌ ) ವತಿಯಿಂದ ಪ್ರತಿಷ್ಠಿತ ‘ಪ್ರೊಫೆಸರ್‌ಆಫ್‌ ಪ್ರಾಕ್ಟೀಸ್‌’ ಸ್ಥಾನಮಾನ ನೀಡಿ ಗೌರವಿಸಲಾಗಿದೆ.

ಮಂಗಳೂರು: ಹೈನುಗಾರಿಕೆ ಹಾಗೂ ಕೋಳಿ ಸಾಕಾಣಿಕೆ ಉದ್ಯಮ ಕ್ಷೇತ್ರದಲ್ಲಿ ಸಲ್ಲಿಸಿರುವ ಮಹತ್ವದ ಸೇವೆ ಮತ್ತು ವೃತ್ತಿಪರ ಕೊಡುಗೆಯನ್ನು ಪರಿಗಣಿಸಿ ಮಂಗಳೂರಿನ ಖ್ಯಾತ ಪಶು ವೈದ್ಯಕೀಯ ತಜ್ಞ ಡಾ.ಸುಶಾಂತ್‌ ರೈ ಬೆಳ್ಳಿಪಾಡಿ ಅವರಿಗೆ ಉತ್ತರ ಪ್ರದೇಶದ ಬರೇಲಿಯ ಇಝತ್‌ನಗರದಲ್ಲಿರುವ ದೇಶದ ಪ್ರತಿಷ್ಠಿತ ಐವಿಆರ್‌ಐ-ಐಸಿಎಆರ್‌ (ಇಂಡಿಯನ್‌ ವೆಟರ್ನರಿ ರಿಸರ್ಚ್‌ ಇನ್‌ಸ್ಟಿಟ್ಯೂಟ್‌ ) ವತಿಯಿಂದ ಪ್ರತಿಷ್ಠಿತ ‘ಪ್ರೊಫೆಸರ್‌ಆಫ್‌ ಪ್ರಾಕ್ಟೀಸ್‌’ ಸ್ಥಾನಮಾನ ನೀಡಿ ಗೌರವಿಸಲಾಗಿದೆ.

ಬರೇಲಿಯ ಐವಿಆರ್‌ಐ ಕ್ಯಾಂಪಸ್‌ನಲ್ಲಿ ಇತ್ತೀಚೆಗೆ ನಡೆದ ಕಾರ್ಯಕ್ರಮದಲ್ಲಿ ಈ ಗೌರವವನ್ನು ಅಧಿಕೃತವಾಗಿ ಪ್ರದಾನ ಮಾಡಲಾಯಿತು. ಐಸಿಎಆರ್‌ನ ಉಪ ಮಹಾನಿರ್ದೇಶಕ(ಡಿಡಿಜಿ)ಹಾಗೂ ಐವಿಆರ್‌ಐ ನಿರ್ದೇಶಕ ಡಾ. ರಾಘವೇಂದ್ರ ಭಟ್‌, ಜಂಟಿ ನಿರ್ದೇಶಕ ಡಾ. ಎಸ್‌. ಕೆ. ಮೆಂದಿರಟ್ಟ ಮತ್ತಿತರರು ಇದ್ದರು. ಮಂಗಳೂರಿನ ರೈಸನ್ಸ್‌ ನ್ಯೂಟ್ರಿಷನ್ಸ್‌ ಸಂಸ್ಥೆಯ ಆಡಳಿತ ಪಾಲುದಾರರಾಗಿದ್ದಾರೆ. ಹೈನುಗಾರಿಕೆ ಮತ್ತು ಕೋಳಿ ಸಾಕಾಣಿಕೆ ಕ್ಷೇತ್ರದಲ್ಲಿ ದೀರ್ಘಕಾಲದಿಂದ ಸೇವೆ ಸಲ್ಲಿಸುತ್ತಿರುವ ಅವರು, ಉದ್ಯಮದ ಬೆಳವಣಿಗೆ, ಆಧುನಿಕ ತಂತ್ರಜ್ಞಾನ ಅಳವಡಿಕೆ ಹಾಗೂ ಪಶು ಮತ್ತು ಕೋಳಿ ಆರೋಗ್ಯ ಕ್ಷೇತ್ರದ ಅಭಿವೃದ್ಧಿಗೆ ಮಹತ್ವದ ಕೊಡುಗೆ ನೀಡಿದ್ದಾರೆ. ಅವರು ವೆಟರ್ನರಿ ಕೌನ್ಸಿಲ್‌ ಆಫ್‌ ಇಂಡಿಯಾದ ಸದಸ್ಯರಾಗಿದ್ದು, ಕರ್ನಾಟಕ ವೆಟರ್ನರಿ, ಅನಿಮಲ್‌ ಅಂಡ್‌ ಫಿಶರೀಸ್‌ ಸೈನ್ಸಸ್‌ ಯೂನಿವರ್ಸಿಟಿ ಬೋರ್ಡ್‌ ಆಫ್‌ ಮ್ಯಾನೇಜ್‌ಮೆಂಟ್‌ ಸದಸ್ಯರಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ. ಅಲ್ಲದೆ ಕರ್ನಾಟಕ ಪೌಲ್ಟ್ರಿ ಫಾರ್ಮರ್ಸ್‌ ಆ್ಯಂಡ್‌ ಬ್ರೀಡರ್ಸ್‌ ಅಸೋಸಿಯೇಷನ್‌ ಮಾಜಿ ಅಧ್ಯಕ್ಷರಾಗಿದ್ದಾರೆ.