ಹಿಂದೂಮಹಾಗಣಪತಿ ಶೋಭಾಯಾತ್ರೆಗೆ ಜನಸಾಗರ

| Published : Sep 25 2024, 12:55 AM IST

ಸಾರಾಂಶ

Crowd for Hindu Mahaganapati Shobhayatra

-ದಾರಿಯುದ್ದಕ್ಕೂ ಭಕ್ತರ ಜಯಕಾರ : ರಾರಾಜಿಸಿದ ಕೇಸರಿ ಧ್ವಜ ಹಾಗೂ ಬಂಟಿಂಗ್ಸ್‌

-----

ಕನ್ನಡಪ್ರಭ ವಾರ್ತೆ ಚಳ್ಳಕೆರೆ

ವಿಶ್ವಹಿಂದೂಪರಿಷತ್ ಹಾಗೂ ಭಜರಂಗದಳ ಸಹಯೋಗದೊಂದಿಗೆ ೬ನೇ ವರ್ಷದ ಹಿಂದೂ ಮಹಾಗಣಪತಿ ಉತ್ಸವದ ವಿಸರ್ಜನಾ ಹಿನ್ನೆಲೆ ಕೈಗೊಂಡ ಶೋಭಾಯಾತ್ರೆ ಯಶಸ್ವಿಯಾಗಿ ನಡೆದಿದ್ದು, ನಿರೀಕ್ಷೆಗೂ ಮೀರಿ ಸಾವಿರಾರು ಭಕ್ತರು ಕೇಸರಿಪೇಟ, ಶಾಲು ಧರಿಸಿ ಯಾತ್ರೆಯಲ್ಲಿ ಪಾಲ್ಗೊಂಡರು.

ವಾಲ್ಮೀಕಿ ವೃತ್ತದಿಂದ ಮಧ್ಯಾಹ್ನ ೧೨.೩೦ಕ್ಕೆ ಆರಂಭವಾದ ಮೆರವಣಿಗೆ ರಾತ್ರಿ ೯ರ ತನಕ ನಡೆಯಿತು. ದಾರಿಯುದ್ದಕ್ಕೂ ಕಲಾತಂಡಗಳು, ಡಿಜೆ, ಹಾಗೂ ಯುವಕ, ಯುವತಿಯರ ಜಯಘೋಷಗಳೊಂದಿಗೆ ಮೆರವಣಿಗೆ ಸಾಗಿತು. ನಗರದ ವೀರಶೈವ ಸಮಾಜ ಸೇವಾ ಸಂಘ, ಎಸ್‌ಜೆಎಂ ಆಂಗ್ಲಮಾಧ್ಯಮ ಶಾಲೆ, ಜೈನ ಸಂಘ, ಮುಸ್ಲಿಂ ಸಂಘಟನೆಗಳು ಬಿಸಿಲಿನ ತಾಪದಿಂದ ಬಸವಳಿದ ಭಕ್ತರಿಗೆ ನೀರು, ಮಜ್ಜಿಗೆ ವಿತರಿಸಿದರು. ಬೆಂಗಳೂರು ರಸ್ತೆಯಲ್ಲಿ ವೀರಶೈವ ಸೇವಾ ಸಮಾಜ ಸಂಘ ಹಾಗೂ ಜೈನ ಸಮಾಜ ಉಪಹಾರ ವ್ಯವಸ್ಥೆ ಮಾಡಿದ್ದರು.

ಶಾಸಕ ಟಿ.ರಘುಮೂರ್ತಿ ಗಣೇಶನ ಪೂಜೆ ಸಲ್ಲಿಸಿ ಮಾತನಾಡಿ, ಈ ಭಾಗದಲ್ಲಿ ವಿಶೇಷ ಮಳೆ, ಬೆಳೆ ನೀಡಿ ಜನರಿಗೆ ಯಾವುದೇ ತೊಂದರೆಯಾಗದಂತೆ ಕಾಪಾಡಬೇಕೆಂದು ಪ್ರಾರ್ಥಿಸಿರುವುದಾಗಿ ತಿಳಿಸಿದರು.

ನಗರಸಭೆ ಅಧ್ಯಕ್ಷೆ ಜೈತುಂಬಿ, ಉಪಾಧ್ಯಕ್ಷೆ ಸುಜಾತ, ಸದಸ್ಯರಾದ ಬಿ.ಟಿ.ರಮೇಶ್‌ಗೌಡ, ಎಂ.ಜೆ..ರಾಘವೇಂದ್ರ, ನಾಮಿನಿ ಸದಸ್ಯರಾದ ಆರ್.ವೀರಭದ್ರಪ್ಪ, ನೇತಾಜಿಪ್ರಸನ್ನ, ನಟರಾಜ್, ವಿಶ್ವಹಿಂದೂಪರಿಷತ್ ತಾ. ಅಧ್ಯಕ್ಷ ಡಾ.ಡಿ.ಎನ್.ಮಂಜುನಾಥ, ಉತ್ಸವ ಸಮಿತಿ ಗೌರವಾಧ್ಯಕ್ಷ ಅನಂತರಾಮ್‌ಗೌತಮ್, ಅಧ್ಯಕ್ಷ ಕೆ.ಸಿ.ನಾಗರಾಜು, ಉಪಾಧ್ಯಕ್ಷ ಡಿ.ಎಸ್.ಸುರೇಶ್‌ಬಾಬು, ರಾಘವೇಂದ್ರರೆಡ್ಡಿ, ಪ್ರಧಾನ ಕಾರ್ಯದರ್ಶಿ ಕೆ.ಎಂ.ಯತೀಶ್, ಸಂಘಟನಾ ಕಾರ್ಯದರ್ಶಿ ಸಿ.ಶ್ರೀನಿವಾಸ್, ಎ.ಎಸ್.ಕುಮಾರ್, ನಾಗೇಶ್‌ಬಾಬು, ಬಾಲಕೃಷ್ಣ, ಲಕ್ಷ್ಮೀ ಶ್ರೀವತ್ಸ, ಶೋಭಾಯಾತ್ರೆ ಅಧ್ಯಕ್ಷ ಪಿ.ತಿಪ್ಪೇಸ್ವಾಮಿ, ಗೌರವಾಧ್ಯಕ್ಷ ಬಿ.ಎಸ್.ಶಿವಪುತ್ರಪ್ಪ, ಉಪಾಧ್ಯಕ್ಷ ಬೇಕರಿಮಂಜುನಾಥ, ಪ್ರಧಾನ ಕಾರ್ಯದರ್ಶಿ ಮಾತೃಶ್ರೀಎನ್.ಮಂಜುನಾಥ, ಕೆ.ವಿ.ಚಿದಾನಂದ, ಇತೇಶ್‌ಜೈನ್, ಉಮೇಶ್, ಬಾಲಕೃಷ್ಣ, ಶ್ರೀಧರಚಾರ್, ಸೋಮಶೇಖರ್‌ ಮಂಡಿಮಠ, ಜಯಪಾಲಯ್ಯ, ಪ್ರದೀಪ್‌ಶರ್ಮ, ಜಾಜೂರು ರಾಘವೇಂದ್ರ ಪೂಜಾ ಕಾರ್ಯದಲ್ಲಿ ಭಾಗವಹಿಸಿದ್ದರು.

ಹೊಯ್ಸಳಬ್ಯಾಂಕ್, ತಾಲ್ಲೂಕು ಕಚೇರಿ, ಕೃಷ್ಣಭವನ, ವೀರಶೈವ ಕಲ್ಯಾಣಮಂಟಪ, ಬಸವೇಶ್ವರ ವೃತ್ತ, ಬಳ್ಳಾರಿ ರಸ್ತೆಯಲ್ಲಿ ಶಾಮಿಯಾನ ಹಾಕಿ ಮೆರವಣಿಗೆಯಲ್ಲಿ ಭಾಗವಹಿಸಿದ್ದ ಭಕ್ತರಿಗೆ ಮಜ್ಜಿಗೆ, ನೀರು, ಪಾನಿಯ, ಉಪಹಾರ ವಿತರಿಸಲಾಯಿತು.

ಶೋಭಾಯಾತ್ರೆಯಲ್ಲಿ ಪೊಲೀಸ್ ಇಲಾಖೆ ಮುನ್ನೆಚ್ಚರಿಕೆ ಕ್ರಮವನ್ನು ವಹಿಸಿತ್ತು. ಜಿಲ್ಲಾ ರಕ್ಷಣಾಧಿಕಾರಿ ರಂಜಿತ್‌ಕುಮಾರ್ ಬಂಡಾರು, ಡಿವೈಎಸ್ಪಿ ಟಿ.ಬಿ.ರಾಜಣ್ಣ, ವೃತ್ತ ನಿರೀಕ್ಷಕ ರಾಜಫಕೃದ್ದೀನ್‌ ದೇಸಾಯಿ, ಬಂದೋಬಸ್ತ್ ಕಾರ್ಯದ ನೇತೃತ್ವ ವಹಿಸಿದ್ದರು.

--------

ಪೋಟೋ೨೩ಸಿಎಲ್‌ಕೆ೪ಎ ಚಳ್ಳಕೆರೆ ನಗರದಲ್ಲಿ ಆಯೋಜಿಸಿದ್ದ ಹಿಂದೂಮಹಾಗಣಪತಿ ಶೋಭಾಯಾತ್ರೆಯಲ್ಲಿ ಭಾಗವಹಿಸಿದ್ದ ಭಕ್ತರು.

ಪೋಟೋ೨೩ಸಿಎಲ್‌ಕೆ೪ಬಿ ಚಳ್ಳಕೆರೆ ನಗರದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯದ ಆವರಣದಲ್ಲಿ ಪ್ರತಿಷ್ಠಾಪಿಸಿದ್ದ ಹಿಂದೂಮಹಾಗಣಪತಿ ಸ್ಥಳಕ್ಕೆ ಕ್ಷೇತ್ರದ ಶಾಸಕ ಟಿ.ರಘುಮೂರ್ತಿ ಭೇಟಿ ನೀಡಿ ದೇವರ ದರ್ಶನ ಪಡೆದರು.

ಪೋಟೋ೨೩ಸಿಎಲ್‌ಕೆ೪ಸಿ ಚಳ್ಳಕೆರೆ ನಗರದಲ್ಲಿ ಆಯೋಜಿಸಿದ್ದ ಹಿಂದೂಮಹಾಗಣಪತಿ ಶೋಭಾಯಾತ್ರೆಯಲ್ಲಿ ಮಹಿಳೆಯರು ಪಾಲ್ಗೊಂಡಿದ್ದರು.

ಪೋಟೋ೨೩ಸಿಎಲ್‌ಕೆ೪ಡಿ ಚಳ್ಳಕೆರೆ ನಗರದಲ್ಲಿ ಆಯೋಜಿಸಿದ್ದ ಹಿಂದೂಮಹಾಗಣಪತಿ ಶೋಭಾಯಾತ್ರೆಯಲ್ಲಿ ಎಸ್‌ಜೆಎಂ ಶಾಲೆವತಿಯಿಂದ ನೀರು ವಿತರಿಸಲಾಯಿತು.