ವಿಜಯಪುರ: ಜಮೀನಿನಲ್ಲಿ ಕೆಲಸ ಮಾಡುವಾಗ ತಲೆಸುತ್ತು ಬಂದು ಬಿದ್ದು ಸಿ.ಆರ್.ಪಿ.ಎಫ್ ಯೋಧನೋರ್ವ ಸಾವನ್ನಪ್ಪಿರುವ ಘಟನೆ ಇಂಡಿ ತಾಲೂಕಿನ ಹೊರ್ತಿಯಲ್ಲಿ ಸೋಮವಾರ ರಾತ್ರಿ 9.45ಕ್ಕೆ ಜರುಗಿದೆ.
ವಿಜಯಪುರ: ಜಮೀನಿನಲ್ಲಿ ಕೆಲಸ ಮಾಡುವಾಗ ತಲೆಸುತ್ತು ಬಂದು ಬಿದ್ದು ಸಿ.ಆರ್.ಪಿ.ಎಫ್ ಯೋಧನೋರ್ವ ಸಾವನ್ನಪ್ಪಿರುವ ಘಟನೆ ಇಂಡಿ ತಾಲೂಕಿನ ಹೊರ್ತಿಯಲ್ಲಿ ಸೋಮವಾರ ರಾತ್ರಿ 9.45ಕ್ಕೆ ಜರುಗಿದೆ.
ರಜೆಗಾಗಿ ಬಂದಿದ್ದ ಯೋಧ ರೇವಣಸಿದ್ಧ ಅಶೋಕ ಪುಜಾರಿ (30) ಜಮೀನಿನಲ್ಲಿ ಕೆಲಸ ಮಾಡುವಾಗ ಮೃತ ದುರ್ದೈವಿಯಾಗಿದ್ದಾನೆ. ಕಳೆದ 5 ವರ್ಷಗಳಿಂದ ಹೈದ್ರಾಬಾದ್ ಸಿ.ಆರ್.ಪಿ.ಎಫ್ ನಲ್ಲಿದ್ದ ರೇವಣಸಿದ್ಧ ಪೂಜಾರಿ ಮೃತಪಟ್ಟಿದ್ದಾನೆ. ಈ ಕುರಿತು ಹೊರ್ತಿ ಠಾಣೆಯಲ್ಲಿ ಮೃತ ಯೋಧನ ಪತ್ನಿ ದೂರು ದಾಖಲಿಸಿದ್ದಾರೆ.