ಸಾರಾಂಶ
ಯಾದಗಿರಿ ಜಿಲ್ಲಾ ವಕೀಲರ ಸಂಘಕ್ಕೆ ಶುಕ್ರವಾರ ನಡೆದ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಹಿರಿಯ ನ್ಯಾ.ಸಿ. ಎಸ್. ಮಾಲಿಪಾಟೀಲ್ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ರಾಜಕುಮಾರ ದೊಡ್ಡಮನಿ ಆಯ್ಕೆಯಾದ ಹಿನ್ನೆಲೆ, ಬೆಂಬಲಿಗರು ವಿಜಯೋತ್ಸವ ಆಚರಿಸಿದರು.
ಕನ್ನಡಪ್ರಭ ವಾರ್ತೆ ಯಾದಗಿರಿ
ಜಿಲ್ಲಾ ವಕೀಲರ ಸಂಘಕ್ಕೆ ಶುಕ್ರವಾರ ನಡೆದ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಹಿರಿಯ ನ್ಯಾಯವಾದಿ ಸಿ. ಎಸ್. ಮಾಲಿಪಾಟೀಲ್ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ರಾಜಕುಮಾರ ದೊಡ್ಡಮನಿ ಅವರು ಆಯ್ಕೆಯಾಗಿದ್ದಾರೆ.ಇಲ್ಲಿನ ಜಿಲ್ಲಾ ವಕೀಲರ ಭವನದಲ್ಲಿ ಅಧ್ಯಕ್ಷ ಮತ್ತು ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ಜರುಗಿದ ಮತದಾನ ಪ್ರಕ್ರಿಯೆಯಲ್ಲಿ ಸಿ.ಎಸ್.ಮಾಲಿ ಪಾಟೀಲ್ 158 ಮತಗಳನ್ನು ಪಡೆದರೆ, ಪ್ರತಿಸ್ಪರ್ಧಿ ಹಿರಿಯ ನ್ಯಾಯವಾದಿ ಜಿ.ಭೀಮರಾವ್ ಅವರು 138 ಮತಗಳನ್ನು ಪಡೆದರು.
ಸಿ.ಎಸ್.ಮಾಲಿಪಾಟೀಲ್ ಅವರು 20 ಅಧಿಕ ಮತಗಳನ್ನು ಪಡೆದು ಜಿಲ್ಲಾ ವಕೀಲರ ಸಂಘದ ಅಧ್ಯಕ್ಷರಾಗಿ ಎರಡನೇ ಅವಧಿಗೆ ಆಯ್ಕೆಯಾಗಿದ್ದಾರೆ.ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೂ ತೀವ್ರ ಪೈಪೋಟಿ ಏರ್ಪಟ್ಟತ್ತು. ನ್ಯಾಯವಾದಿ ಭೀಮಾಶಂಕರ ಅವರು 148 ಮತಗಳನ್ನು ಪಡೆದರೆ, ಪ್ರತಿಸ್ಪರ್ಧಿ ರಾಜಕುಮಾರ ದೊಡ್ಡಮನಿ ಅವರು 149 ಮತಗಳನ್ನು ಪಡೆದು ಕೇವಲ 1 ಮತದ ಅಂತರದಿಂದ ಗೆಲುವು ಸಾಧಿಸಿದರು
ಎಂದು ಚುನಾವಣಾಧಿಕಾರಿ, ನ್ಯಾಯವಾದಿ ನಿರಂಜನ ಯರಗೋಳ ತಿಳಿಸಿದ್ದಾರೆ.ಮತ ಎಣಿಕೆ ಕಾರ್ಯ ಮುಗಿಯುತ್ತಿದ್ದಂತೆ ನೂತನ ಅಧ್ಯಕ್ಷ ಮತ್ತು ಪ್ರಧಾನ ಕಾರ್ಯದರ್ಶಿ ಪರ ಬೆಂಬಲಿಗರು ವಿಜಯೋತ್ಸವ ಆಚರಿಸಿದರು.
ಈ ಸಂದರ್ಭದಲ್ಲಿ ನ್ಯಾಯವಾದಿಗಳಾದ ರಾಚನಗೌಡ ಪೊಲೀಸ್ ಪಾಟೀಲ್ ಕಾಳೆಬೆಳಗುಂದಿ, ಮಹಿಪಾಲರೆಡ್ಡಿ ಇಟಗಿ, ರಾಜೇಂದ್ರ ಸಜ್ಜನ್, ರಮೇಶ ಟಿ. ದೇವರಮನಿ, ಮೋಹ್ಮದ್ ಅಕ್ಬರ್, ಎಸ್.ಬಿ ನಾಯಕ, ಸತೀಶ ಶಹಾಪುರಕರ್, ಅಂಬರೀಶ ಗುಂಡಾನೋರ್, ಶಿವಕುಮಾರ ಅನಪೂರ್, ಶರಣಗೌಡ ಅಲ್ಲಿಪೂರ್, ಎಮ್.ಬಿ ಅಡಕಿ, ಬಿ.ಜಿ ಪಾಟೀಲ್, ಸುರೇಶ ಪಾಟೀಲ್ ಕ್ಯಾತನಾಳ, ಚೌಳೇಶ ದಣಿ ಸೈದಾಪೂರ್ ಸೇರಿದಂತೆ ಮತ್ತಿತರರು ಇದ್ದರು.