ಸಮಾಜದಿಂದ ಕ್ರೀಡಾಕೂಟವನ್ನು ವ್ಯವಸ್ಥಿತವಾಗಿ ಆಯೋಜನೆ ಮಾಡಿದ್ದಾರೆ. ನಿಜಕ್ಕೂ ಕೊನೆ ಪಂದ್ಯ ಅತ್ಯಂತ ರೋಚಕವಾಗಿತ್ತು, ಸೋಲುವಂತ ತಂಡವನ್ನು ಕೆಚ್ಚೆದೆಯ ಆಟದಿಂದ ಆಟಗಾರರು ಗೆಲುವಿನ ದಡ ಸೇರಿದರು. ನಾನು ಶಾಸಕನಾಗಿ ಕೆಲಸ ಮಾಡುವಾಗ ಪಾಂಡವ ಕ್ರೀಡಾಂಗಣ ನಿರ್ಮಾಣ ಮಾಡಿದಕ್ಕೂ ಸಾರ್ಥಕವಾಯಿತು.
ಕನ್ನಡಪ್ರಭ ವಾರ್ತೆ ಪಾಂಡವಪುರ
ಪಟ್ಟಣದ ಪಾಂಡವ ಕ್ರೀಡಾಂಗಣದಲ್ಲಿ ಸವಿತ ಸಮಾಜದಿಂದ ನಡೆದ ಜಿಲ್ಲಾ ಮಟ್ಟದ ಸವಿತ ಮಹರ್ಷಿ ಕಪ್ ಸೀಸನ್-1 ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿ ವಿಜೇತ ಪಾಂಡವ ಕ್ರಿಕೆರ್ಟ್ಸ್ ತಂಡಕ್ಕೆ ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಅವರು 22,222 ರು. ನಗದು ಬಹುಮಾನ, ಟ್ರೋಪಿ ವಿತರಿಸಿದರು.ಪಂದ್ಯಾವಳಿಯಲ್ಲಿ ದ್ವಿತೀಯ ಸ್ಥಾನಪಡೆದ ಬಿಎಸ್ ಎಸ್ ಬಾಯ್ಸ್ ತಂಡ 11,111 ರು. ನಗದು ಬಹುಮಾನದ ಜತೆಗೆ ಟ್ರೂಪಿ ತಮ್ಮದಾಗಿಸಿಕೊಂಡಿತು.
ವಿಜೇತ ತಂಡಕ್ಕೆ ಬಹುಮಾನ ವಿತರಿಸಿದ ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಮಾತನಾಡಿ, ಜಿಲ್ಲೆಯ ಸವಿತ ಸಮುದಾಯದ ಮುಖಂಡರು ಜಿಲ್ಲಾ ಮಟ್ಟದ ಸವಿತ ಮಹರ್ಷಿ ಪಕ್ ಸೀಸನ್ -1 ಕ್ರಿಕೆಟ್ ಪಂದ್ಯಾವಳಿ ಆಯೋಜಿಸಿ ಎಲ್ಲರನ್ನು ಒಂದಡೆ ಸೇರಿಸುವ ಕೆಲಸ ಮಾಡಿದ್ದಾರೆ ಎಂದು ಶ್ಲಾಘಿಸಿದರು.ಸಮಾಜದಿಂದ ಕ್ರೀಡಾಕೂಟವನ್ನು ವ್ಯವಸ್ಥಿತವಾಗಿ ಆಯೋಜನೆ ಮಾಡಿದ್ದಾರೆ. ನಿಜಕ್ಕೂ ಕೊನೆ ಪಂದ್ಯ ಅತ್ಯಂತ ರೋಚಕವಾಗಿತ್ತು, ಸೋಲುವಂತ ತಂಡವನ್ನು ಕೆಚ್ಚೆದೆಯ ಆಟದಿಂದ ಆಟಗಾರರು ಗೆಲುವಿನ ದಡ ಸೇರಿದರು. ನಾನು ಶಾಸಕನಾಗಿ ಕೆಲಸ ಮಾಡುವಾಗ ಪಾಂಡವ ಕ್ರೀಡಾಂಗಣ ನಿರ್ಮಾಣ ಮಾಡಿದಕ್ಕೂ ಸಾರ್ಥಕವಾಯಿತು ಎಂದು ಬಣ್ಣಿಸಿದರು.
ಇದೇ ವೇಳೆ ಸವಿತ ಸಮುದಾಯದ ಮುಖಂಡರು ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಅವರನ್ನು ಅಭಿನಂಧಿಸಿದರು. ಇದಕ್ಕೂ ಮುನ್ನ ನಡೆದ ಲೀಗ್ ಹಂತದ ಪಂದ್ಯಾವಳಿಯಲ್ಲಿ ಆರು ತಂಡಗಳು ಭಾಗವಹಿಸಿದ್ದವು. ಇಲ್ಲಿ ವಿಜೇತರಾದ ನಾಲ್ಕು ತಂಡಗಳಯ ಸಮಿಫೈನಲ್ ತಲುಪಿದರು.ಸೆಮಿಫೈನಲ್ ನ ಮೊದಲ ಪಂದ್ಯದಲ್ಲಿ ಎಂ.ಆರ್.ಕೆ ಮಂಡ್ಯ ಮತ್ತು ಪಾಂಡವ ಕ್ರಿಕೆರ್ಟ್ಸ್ ಪಾಂಡವಪುರ ಮಧ್ಯ ನಡೆಯಿತು. ಇದರಲ್ಲಿ ಪಾಂಡವ ಕ್ರಿಕೆರ್ಟ್ಸ್ ತಂಡ ಗೆಲುವು ಸಾಧಿಸುವ ಮೂಲಕ ಮೊದಲ ತಂಡವಾಗಿ ಫೈನಲ್ ಪ್ರವೇಶಿಸಿತು.
ಎರಡನೇ ಸೆಮಿಫೈನಲ್ ನಲ್ಲಿ ಇಲೆವನ್ ಸ್ಟಾರ್ ಮಂಡ್ಯ ನಡುವಿನ ಪಂದ್ಯದಲ್ಲಿ ಬಿಎಸ್ ಎಸ್ ಬಾಯ್ಸ್ ತಂಡ ಗೆಲುವು ಸಾಧಿಸಿ ಎರಡನೇ ತಂಡವಾಗಿ ಫೈನಲ್ ಪ್ರವೇಶಿಸಿತು. ಫೈನಲ್ ನಲ್ಲಿ ಪಾಂಡವ ಕ್ರಿಕೆರ್ಟ್ಸ್ ಮತ್ತು ಬಿಎಸ್ ಎಸ್ ಬಾಯ್ಸ್ ನಡುವೆ ನಡೆಯಿತು. ಫೈನಲ್ ನಲ್ಲಿ ಮೊದಲ ಬ್ಯಾಟಿಂಗ್ ಆರಂಭಿಸಿದ ಬಿಎಸ್ ಎಸ್ ಬಾಯ್ಸ್ ತಂಡ ಆರಂಭದಿಂದಲೇ ಬಿರುಸಿನ ಆಟವಾಡಿದರು. 5 ಓವರ್ ಮುಕ್ತಾಯಕ್ಕೆ 46 ರನ್ ಗಳಿಸಿ 47ಕ್ಕೆ ಟಾರ್ಗೆಟ್ ನೀಡಿದರು. ಪಾಂಡವ ಕ್ರಿಕೆರ್ಟ್ಸ್ ತಂಡವು ಗೆಲುವು ಸಾಧಿಸಿ ಚಾಂಪಿಯನ್ಸ್ ಆಗಿ ಹೊರಹೊಮ್ಮಿದರು.ಆಯೋಜಕರಾದ ಶ್ರೀಧರ್, ರಘು, ಕಬ್ಬಾಳಿ ಕಿರಣ್, ಸಚ್ಚಿನ್,ಕಿರಣ್,ಮನೋನಜ್,ಎಂ.ಎನ್.ಸಂತೋಷ್, ನವೀನ್ ಕುಮಾರ್ ಎಂ.ಎನ್., ತಾಲೂಕಿನ ಸವಿತ ಸಮುದಾಯದವರು ಹಾಗೂ ಮಂಗಳವಾದ್ಯ ಕಲಾವಿದರ ತಂಡ ಸದಸ್ಯರು ಇದ್ದರು.